194 ಸತಿಹಿತೈಷಿಣಿ ಬಳಲಿಸಿದೆ. ಆಗಲೇ ಅವರಿಗೆ ವಿಧೇಯನಾಗಿ, ಅವರು ನಿರೂಪಿಸಿದಂತೆ ಕಾಣಿಕೆಯನೊಪ್ಫಿಸಿ, ಕನೈಯನ್ನಿತ್ತು, ಪುನೀತನೆನ್ನಿಸಿಕೊಂಡು ಬಂದಿದ್ದರೆ,- ನಾಗೇಶ ಕಿರುನಗೆಯಿಂದ ಮಾಡಬಹುದಾಗಿತ್ತು. ಆದರೆ, ನಾನೇನು ಮಾಡಲಿ ? ನನ್ನ ಯತ್ನದಲ್ಲೇನಿದೆ? ಮಗಳನ್ನು ಕೊಡುವೆನೆಂದರೆ, ಅವಳು ಏನು ಅರಿಯದ ಹುಡುಗಿಯಲ್ಲ; ನಂದಿನಿಯ ಕೈ ಕೆಳಗೆ ರಕ್ಷಿತೆಯಾದವಳು. ಅಲ್ಲದೆ, ನನ್ನ ಪತ್ನಿಯ ಮೂರ್ಖ ಸಮಾಜಕ್ಕೆ ಸೇರಿದವಳಾಗಿಲ್ಲ. ಇದರ ಮೇಲೆ, ನನಗೆ ನಾಲ್ಕಾರು ಹೆಣ್ಣು ಮಕ್ಕಳಾದರೂ ಆಗಿದ್ದರೆ, ಹೇಗಾದರೂ ಭಾರ ತಪ್ಪಿದರೆ ಸಾಕೆಂದು, ಅಪಾತ್ರವೊ-ಸತ್ಪಾತ್ರವೊ, ಕುಲಹೀನನೋ ನೆವರಹೀನನೋ, ಯಾರಾದರು ಆಗಿರಲಿ, ಒಬ್ಬನನ್ನು ಕೈಯಲ್ಲಿರಿಸಿ ಹೋಗೆನ್ನಬಹುದಾಗಿತ್ತು; ಈಗ ಹಾಗೆ ಇಲ್ಲ. ಕುಲಕ್ಕೆಲ್ಲಾ ಒಬ್ಬಳೇ ಮಗಳು. ಮಗನ ಮಾತು ಹಾಗಿರಲಿ; ಪುತ್ರನು ಸತ್ಯವ್ರತನಾಗಿದ್ದರೆ, ತನ್ನ ತಾಯಿ ತಂದೆಗಳ ಕುಲವನ್ನು ಮಾತ್ರವೇ ಉದ್ದರಿಸುವನು. ಪುತ್ರಿಯು ಗುಣವಂತಿಯಾಗಿದ್ದರೆ, ಪಿತೃ ಕುಲವನ್ನೂ ಮತ್ತು ತನ್ನ ಪತಿಯ ಕುಲವನ್ನೂ ಉದ್ದರಿಸುವವಳಾಗುವಳು. ಇವಳು ಕೆಟ್ಟವಳಾದ ಮೇಲೆ ಹೇಳಿದವರೆಲ್ಲರಿಗೂ ತನ್ನ ಪಾತಕದ ಹೊರೆಯಲ್ಲಿ ಅಸ್ತಿತ್ವಾಗಿ ಹರಡುವಳು. ಹೀಗೆಂದು ತಿಳಿದು, ಅವಳ ಸುಕೃತಸರಿನಾಕಕ್ಕೆ ಸಹಕಾರಿಗಳಾಗದೆ, ದುಷ್ಕೃತ್ಯಕ್ಕೆ ಪ್ರೇರಕರಾಗಬೇಕೆಂದರೆ, ನನ್ನಿಂದೀತೇ? ಇನ್ನು ಕಾಣಿಕೆಯೊಪ್ಪಿಸುವ ಮಾತೆಂದರೆ, ನನಗೆ ಹಣದಮೇಲಿನ ಅದಿಕಾರವೆಲ್ಲಿಯದು? ಮಗನಿರುವನು; ಹಾಗೂ ನನ್ನ ದುಂದುವೆಚ್ಚಕ್ಕಾಗಿ ನ್ಯಾಯಖಾಖೆಯಿರುವುದು. ಇವೆರಡು ಕಡೆಯಿಂದಲೂ ಅನುಮತಿ ಹೊಂದಿ, ಅಲ್ಪ ಸ್ವಲ್ಪ ದ್ರವ್ಯವನ್ನು ಹೊಂದಬಹುದಾದರೂ, ಅದಕ್ಕೂ ಖರ್ಚಿನ ಭಾಗಗಳು ಬೇರೆ ಬೇರೆ ಇರುವುವು. ಇನ್ನು ನನಗೆ ಕಾಣಿಕೆಯ ಮಾತಿಗೆ ಅವಕಾಶವೆಲ್ಲಿ? ಹೀಗಿರುವನಾನು ಪುನೀತನಾಗುವುದು ಹೇಗೆ? ನನ್ನನ್ನು ಪುನೀತನೆನ್ನಿಸಬೇಕಾದರೆ, ಭಗವಂತನೊಬ್ಬನೇ ದಯೆಮಾಡಬೇಕಲ್ಲದೆ, ಇನ್ನಾರಿಂದಲೂ ಹೇಗೂ ಸಾಧ್ಯವಾಗದೆಂದು ನನ್ನ ನಂಬಿಕೆಯಾಗಿದೆ.' ಶರಚ್ಚಂದ್ರ:--ಕಿರುನಗೆಯಿಂದ-- ಏನಯ್ಯ? ಶುದ್ದನಾಸ್ತಿಕವಾದಿಯಾಗಿ ಹೋಗಿರುವೆ?”
ಪುಟ:ಮಾತೃನಂದಿನಿ.djvu/೧೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.