ಮಾತೃನಂದಿನಿ
ನಾಗೇಶ:-ನಾಸ್ತಿಕವಾದಿಯೊಡನೆ ಸೇರಿದುದರಿಂದ ನಿಮ್ಮನ್ನೂ ಅಸವಾದವು ಬಿಡಲಿಲ್ಲವಷ್ಟೆ. ಶರಚ್ಚಂದ್ರ:-ಅಪವಾದವೋ-ಅಮೋದವೋ ಏನಾದರೂ ಆಗಲಿ.' ನೀನೇನೋ ಪ್ರಚಂಡನೆನಿಸಿದೆ. ಅದಿರಲಿ. ಈಗ ನಮ್ಮ ಕಲೆಕ್ಟರರು ಹೂಡಿರುವ ಹೂಟದಲ್ಲಿ ಮತ್ತಾವಾವ ವಿಶೇಷವು ಕಾಣಬಹುದೋ, ನೋಡಬೇಕು !
- ನರೇಶ:-ಕಾಣುವುದೇನು? ಹರಿದು ಬೇಡಿ-ಬೇಡಿ ಬೀಸತ್ತು ಹೋಗುವುದನ್ನೇ ಕಾಣುವುದು. ಅದಿರಲಿ; ಎಲ್ಲಿ, ನಿನ್ನ ಮಗನು ಇಲ್ಲಿಗೆ ಬಂದಂತೆ ಕಾಣುತ್ತಿಲ್ಲ! ಅದೇಕೆ?
ಶರಚ್ಚಂದ್ರ:- -: ನಾನು ಅಲ್ಲಿ ನಡೆಸಬೇಕಾದುದೆಲ್ಲವನ್ನೂ ಗೊತ್ತುಮಾಡಿಟ್ಟು ಬಂದಿರುತ್ತೇನೆ. ಇನ್ನು ನನಗೆ ಅಲ್ಲಿರಲು ಅವಕಾಶವಿಲ್ಲ. ಮತ್ತೆ ಸಾಯಂಕಾಲವಾದ ಬಳಿಕ ಆದರೆ, ಬಂದೇನು, ” ಎಂದು ಹೇಳಿ ಹೊರಟು ಹೋದನು. ನರೇಶ:- ಅದೆಲ್ಲಿಗೆ ಹೋದನು? ಕಲೆಕ್ಟರ್:-ಏನಯ್ಯಾ, ನರೇಶರಾಯ ! ಇಷ್ಟೇ ಸರಿಯೇ? ಅಚಲ ಚಂದ್ರನ ಹೂಟಗಳು ಇನ್ನೂ ಎಷ್ಟೆಷ್ಟೋ ಇವೆ. ಅವುಗಳಲ್ಲಿ ಇದೇ ಮೊದಲನೆಯದು. ಎರಡನೆಯದೆಂದರೆ, ನಾಳಿನ ಸಾಯಂಕಾಲಕ್ಕೆ ಇಲ್ಲಿಯ ಕಾಲೇಜಿನಲ್ಲಿ ನಡೆಯಬೇಕಾಗಿರುವ ಸಂಘಶಕ್ತಿಯನ್ನು ಕುರಿತ ಉಪನ್ಯಾಸ! ನಗಶ:-(ಕಿರುನಗೆಯಿ೦ದ)-ಸರಿ, ಸರಿ; ಈಗ ಗೊತ್ತಾಯಿತು! ನಮ್ಮ ನಾದಾನಂದನೂ, ತಮ್ಮ ಮಗ ಭಕ್ತಿಸಾರಚಕ್ರವರ್ತಿಯೂ, ಮತ್ತು ತಮ್ಮ ಅಳಿಯ ಸೇವಾನಂದನೂ ಅಚಲಚಂದ್ರನೊಡನೆ ನಿನ್ನನಿಂದಲೂ ಬಹು ಸಡಗರದಲ್ಲಿರುವರು. ಇದರ ಕಾರಣವೇನೆಂಬುದು ನನಗೆ ಈವರೆಗೂ ತಿಳಿದಿರಲಿಲ್ಲ. ಸರಿ; ಮೂರನೆಯ ಹೂಟವಿನ್ನಾವುದೋ? ಕಲೆಕ್ಷರ್:-ಅದು ನಿನ್ನ ಮೂಲಕವಾಗಿಯೇ ನಡೆಯುತ್ತದೆ. ಈಗಲೇ ನಾವು ಬಾಯ್ದೆರೆವುದರಿಂದ ಸ್ವಾರಸ್ಯಕ್ಕೆ ಕೊರತೆಯುಂಟಾಗಬಹುದು. ಇನ್ನೂ ನಾಲ್ಕಾರು ದಿವಸಗಳಾದರೆ ನೀನಾಗಿಯೇ ತಿಳಿದುಕೊಳ್ಳುವೆ. ನರೇಶ:-ಇದೇನು? ರಾತ್ರಿ ಹತ್ತುಗಂಟೆಯಾಗುತ್ತ ಬರುತ್ತಿದೆ; ಇನ್ನೂ ಸಮಾರಾಧನೆಯ ಗದ್ದಲವು ಕಡಿಮೆಯಾದಂತಿಲ್ಲವಲ್ಲ?