ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ ದಿನಿ ಯಲ್ಲಿ ಅಭೂತಪೂರ್ವವಾಗಿ ಸೇರಿರಬಹುದಾದ ಇಂದಿನ ಘನವಾದ ಸಭೆ ಯನ್ನು ಕುರಿತು ನನಗಾಗಿರುವ ಅನಂದವು ಹೇಳಲಳವಲ್ಲವಾಗಿದೆ! ಅದ ಕಂದ, ಇಂದಿನ ಈ ಸಭೆಯಿಂದ, ನಮ್ಮ ಮುಂದಿನ ಸಂಘಶಕ್ತಿಯ ಮಹತ್ವ ತೃವ, ಕಾರ್ಯಕಾರಿಯಾಗಿ ಪರಿಣಮಿಸಿ, ನಮ್ಮ ಮುಂದಿನ ದೇಶಸೇವಾ ವ್ರತವು ನಾಫಲ್ಯ ಹೊಂದುವಂತಾಗಲೆಂದು, ಆ ನಮ್ಮ ಪವಿತ್ರ ಪ್ರೇಮಮಯಿ ಯಾದ ಮಾತೆಯೇ ಅನುಗ್ರಹಿಸಿರುವಳೆಂಬುದು ನನ್ನ ಸಂಪೂರ್ಣ ಭರವಸೆ ಯಾಗಿದೆ. 'ಕೆಂದರೆ,- ಸಂಘಶಕ್ತಿಯೆಂಬುದರ ಮಹಾತ್ಮರು ಅಷ್ಟಿಷ್ಟಲ್ಲ. ಅಖಂಡಅಮೋಘ- ಅತ್ಯದ್ಭುತವಾದ ಪ್ರಭಾವವುಳ್ಳುದು. ಈ ಸಂಘಶಕ್ತಿಯಿಂದ ಆಗದೆ ಇರುವ ಕಾರ್ಯವು, ಸಾಮಾನ್ಯವಾಗಿ ಯಾವುದೂ ಇಲ್ಲವೆಂದೇ ಹೇಳಬಹುದು. ಹಾಗೂ ಸಂಘಶಕ್ತಿಃ ಕಲಿಯುಗೇ' ಎಂದು ಹೇಳಿರು ವಂತೆ, ಈ ಕಲಿಕಾಲದಲ್ಲಿ ಯಾವದೇ ಒಂದು ಕಾರ್ಯನಿರ್ವಾಹಕ ಸಂಘಶಕ್ತಿಯೇ ಕಾರಣವಾಗಿದೆಯೆಂದು ಹೇಳಬೇಕಾಗಿದೆ. ಪ್ರಕೃತಸ್ತಿತಿ ಯಲ್ಲಿ ಈ ಶಕ್ತಿಯು ನಮ್ಮವರಿಂದ ಎಷ್ಟರಮಟ್ಟಿಗೆ ಯಾವ ಯಾವ ಕಾರ್ಯ ಕಲಾಪಗಳಲ್ಲಿ ವಿನಿಯೋಗವಾಗಿರಬಹುದೆಂದು ಯೋಚಿಸುವುದಾದರೆ, ನಿತಾ. ರಾಂತ್ಯದಲ್ಲಿ ಅದರ ಅಜ್ಞಾತ ದೆಸೆಗಾಗಿ ಕೇವಲ ಪರಿತಾಪವೇ ಉ೦ಟಾಗು ತಿದೆ. ಇದರ ಸೂಕ್ಷರೂ ಪಧಾಣೆಗೆ ನಮ್ಮವರ ದುರಭಿಮಾನದ ಜಡರೂ ಗವೇ ಕಾರಣವಲ್ಲದೆ ಬೇರಿಲ್ಲ. ಈ ದುರಭಿಮಾನದಿಂದ ನಮಗುಂಟಾಗಿರುವ ಮುತ್ತು ಉಂಟಾಗುತ್ತಿರುವ ಅನರ್ಥ ಪರಂಪರೆಯನ್ನು ನೆನೆದ ಮಾತ್ರಕ್ಕೆ ಉಂಟಾಗುವ ಶೋಕ-ಸಂತಾಪಗಳನ್ನು ಇಲ್ಲಿ ಹೇಗೂ ಹೇಳಿ ಮುಗಿಯಿಸು ವಂತಿಲ್ಲ. ಮಾಡುತಕ್ಕುದೇನು ? ಐಕಮತ್ಯವು ನಮ್ಮವರನ್ನು ಬಿಟ್ಟು ಬಹುದೂರ ಹೊರಟು ಹೋಗಿದೆ. ಐಕಮತ್ಯದೊಡನೆಯೇ, ಸ್ವದೇಶಾಭಿ ಮಾನ ಸ್ವಾತಂತ್ರ-ಕರ್ತವ್ಯನಿಷ್ಠೆಗಳೇ ಮೊದಲಾದ ಪ್ರಾಮುಖ್ಯ ಗುಣ ಗಳೂ ನಮ್ಮವರ ಕೈ ಬಿಟ್ಟು ಹೋದುವು. ಅವು ಬಿಟ್ಟು ಹೋಗಿರುವಂತೆ ದೇ, ನಮ್ಮಲ್ಲಿ ದುರಭಿಮಾನ ಮತ್ತು ಪರಸ್ಪರ ದ್ವೇಷಾಸೂಯೆಗಳು ಹಬ್ಬಿ, ನಮ್ಮವರಲ್ಲಿದ್ದ ಸದಸದ್ವಿವೇಚನೆಯನ್ನು ಎಲ್ಲಿಗೋ ಕೊಂಡುಹೋಗಿ ಬಿಟ್ಟು ಬಂದು, ನಮ್ಮವರು ಉದಾಸೀನ ಅಥವಾ ಪರಾಧೀನ ದೆಸೆಯಿಂದ