116 ಸತಿ, ಹಿತೈಷಿಣಿ ಅಪ್ರಯೋಜಕರಾಗುವಂತೆ ಮಾಡಿರುವುದು. ಇದರಿಂದ ನಮ್ಮವರಲ್ಲಿ ಹಲವು ಅತ್ಯಾಚಾರಗಲುಂಟಾಗಿ, ನಮ್ಮವರಲ್ಲಿದ್ದ ಆರ್ಯತ್ವವೇ ಮಾಯವಾಗುವ ಸ್ಥಿತಿಯು, ಸನಾತನಧರ್ಮವೇ, ಅಪವಾದಗ್ರಸ್ತವಾಗುವ ದುರ್ದಶಿಯ ಪ್ರಾಪ್ತವಾಗಿದೆ. ಹೀಗೆ ನಮ್ಮ ದುರ್ವ್ಯಸನರೋಗದ ದೆಸೆಯಿಂದಾದ ದೌರ್ಬಲ್ಯವು, ನಮ್ಮ ದೇಶಮಾತೆಯ ಮೊದಲಿನ ಪಾಶಾಸ್ಥ್ಯವನ್ನು ಕೂಡ ಮಲಿನಸ್ಥಿತಿಗೆ ತರುವಂತೆ ಮಾಡಿರುವುದೇನೆಂಬಹುಧಾಗಿ ದೇಶಭಕ್ತರಲ್ಲಿ ಯಾರಿಗೆ ದುಃಖವನ್ನುಂಟು ಮಾಡುವುದಿಲ್ಲ ? ಹೇಗೆಂದರೆ, ನಮ್ಮಲ್ಲಿಯ ಕೆಲವು ನವನಾಗರಿಕ ಸುಧಾರಕ ಮಹಾಶಯರು ಒಂದೆಡೆಯಲ್ಲಿ ವಿವಾಹ ಪರಿಷ್ಕರಣಸಂಘಗಳನ್ನು ನಡಿಸಿ ಕೊಂಡು, ಅಂತದರ ಪ್ರತಾಪಕ್ಕೆ ಸಹಸ್ಯರಾದ ಹಲವು ಮಂದಿ ಪುರುಷರನ್ನು ಬಲಿಕೊಟ್ಟು, ತಾವು ಮಾತ್ರ ಹಿಂದೆಯೇ ಇದ್ದು ತಲೆತಪ್ಪಿಸಿಕೊಳ್ಳು ತಿರುವರು. ಮತ್ತೊಂದೆಡೆಯಲ್ಲಿ ಮೌಢ್ಯಚಾರದ ಡಾಂಭಿಕವೃತ್ತಿಯ ವೈದಿಕಗೊಡರು, ವಿವೇಚನಾರಹಿತರಾಗಿ, ತಮ್ಮ ಜನ್ಮಧಾರಣೆಯ ಮುಖ್ಯೋದ್ದೇಶವೇನೆಂಬುದನ್ನೇ ಮರೆತು, ಕೇವಲ ಉದರಂಭರಣದಲ್ಲಿಯೂ ಧನಸಂಗ್ರಹದಲ್ಲಿಯ ತತ್ಪರರಾಗಿ ಹೋಗುತ್ತಿದ್ದಾರೆ. ಈ ಮಹಾಜನರ ಧನದಾಹರೋಗವು, ಧರ್ಮ, ನ್ಯಾಯ, ನೀತಿ, ದಯೆ, ವಾಕ್ಷಿಗಳಾವ ಚಂದನ್ನು ನೋಡದೆ, ಎಲ್ಲಕ್ಕೂ ಜಲಾಂಜಲಿಯೊಪ್ಪಿಸಿ, ಗುರು-ಹಿರಿಯರು, ತಾಯಿ-ತಂದೆಗಳು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ದೀನನಾಥರು, ಎಂಬೀ ವಿಚಾರವನ್ನೂ ಮಾಡದೆ, ಎಲ್ಲರಲ್ಲಿಯೂ ತಮ್ಮ ಕಹಕವನ್ನೇ ಪ್ರಯೋಗಿಸುವಂತೆ ಮಾಡಿದೆ. ಇಂತವರ ಕುತ್ತಿತವ್ಯಾಪಾರದಿಂದ ಐಕಮತ್ಯ ವಾಗಲಿ , ಆಶ್ರಯಿಸಿರುವ ಸಂಘಶಕ್ತಿಯಾಗಲೀ ಹೇಗೆ ಉರ್ಜಿತಸ್ಥಿತಿಗೆ ಬರಬೇಕು. ನಿದರ್ಶನಕ್ಕೆಂದರೆ, ಈ ಶಿವಪುರದ ಮೇಲ್ಕಂಡ ಮಹಾಜನಗಳ ಮನೋಲ್ಲಾಸಕ್ಕಾಗಿ, ಇಲ್ಲಿಯ ಜೀವಾನಂದ ಪರಮಹಂಸ ಜಗದ್ಗುರು ಪೀಠದವರಿಂದ, ನಮ್ಮ ದೇಶಭಕ್ತ ಶ್ರೀಯುತ ನರೇಶರಾಯರು ಮತ್ತು ಅವರ ಅನುಗಾಮಿಗಳಾಗಿರುವ ನಮ್ಮಗಳ ವಿಷಯವಾಗಿ ಕಳುಹಲ್ಪಟ್ಟು ಬಂದಿರುವ ಬಹಿಷ್ಕಾರದ ವಿಚಾರವನ್ನೂ, ಉಚಿತಾನುಚಿತ ಪ್ರಜ್ಞೆಯಿಲ್ಲದೆ, ತಮ್ಮ ಧರ್ಮ
ಪುಟ:ಮಾತೃನಂದಿನಿ.djvu/೧೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.