ಮಾತೃನ೦ದಿನಿ 133 ಸ್ವರ್ಣ:- ಈಗ ಸ್ವಲ್ಪ ಹೊತ್ತೇ ಆಗಿದೆ. ನಗೇಶ:- ಹಾಗಿದ್ದರೆ, ಹೋಗು; ಈಗಲೇ ಇಬ್ಬರನ್ನೂ ಕರೆದು ಕೊಂಡು ಬಾ. ಸ್ವರ್ಣ ಕುಮಾರಿಯು ತಲೆದೂಗುತ್ತ ಹೊರಟುಹೋದಳು, ಚಿತ್ರ:– ಚಕಿತೆಯಾಗಿ- "ಇವನೆಂತಹ ಚಾಲಕನಾಗಿರಬೇಕು ? ಏನೇನು ತಂತ್ರಗಳನ್ನು ಒಡ್ಡುತ್ತಿರುವನು? ಯಾವುದನ್ನೂ ಮೊದಲು ಹೀಗೆಂದು ಹೇಳುವಂತೆಯೇ ಇಲ್ಲವಲ್ಲ!" ನಗೇಶ;- ತಲೆದೂಗುತ್ತ.' ಅದರಿಂದಲೇ ಅಲ್ಲವೇ ಅಂತಹ ನಿಪುಣ ನನ್ನು ಹೇಗೂ ಹೆರವರ ಕಡೆಯವನನ್ನಾಗಿ ಮಾಡಬಾರದೆಂದು ಆತನ ವಿದ್ಯಾ ಗುರುವನ್ನೂ, ಪ್ರೌಢಕಲಾಬೋಧಕನಾದ ವಿದ್ಯಾನಂದನನ್ನೂ ನನ್ನ ಕಡೆಯ ವರವನ್ನಾಗಿ ಮಾಡಿಕೊಂಡಿರುವುದು, ಶರಚ್ಚಂದ್ರನಂತೂ ಸರಿಯೇ ಸರಿ.' ಇವರು ಹೀಗೆ ಮಾತನಾಡುತ್ತಿದ್ದಂತೆಯೇ ಸ್ವರ್ಣಕುಮಾರಿಯು ನಂದಿನಿಯ ಕೈ ಹಿಡಿದು, ಅಚಲಚಂದ್ರನನ್ನು ಮುಂದಿಟ್ಟು ಕೊಂಡು ಬಂದಳು. ಚಿತ್ರಕಲೆಯು ಸರಿದು ಕುಳಿತಳು. ನಗೇಶನು ಸಡಗರದಿಂದ ಕೈ ನೀಡಿ-: ದೇಶಭಕ್ತಾಗ್ರಣಿ, ಸತ್ಪುತ್ರರತ್ನ ಬಂದಯೇನಯ್ಯಾ? ಸುಖಾಗಮನವೇ ? ಬಾ: ಕುಳಿತುಕೋ.' ಅಚಲ:- ತಲೆದೂಗುತ್ತ ಬಂದು ನಗೇಶನ ಮುಂದೆ, ಚಿತ್ರಕಲೆಯು ಕುಳಿತಿದ್ದೆಡೆಯಲ್ಲಿ ಕುಳಿತು,-'ಇದೇನು? ಈ ಉದ್ದುದ್ದದ ಅಗ್ಗಳಿಕೆಯನ್ನು ಹೇಳಬೇಕೆಂದು ಕೇಳಿಕೊಂಡವರಾರು ? ತಮ್ಮ ಆಶೀರ್ವಾದವು ಚೆನ್ನಾಗಿ ದ್ದರೆ, ಎಲ್ಲವೂ ಸುಖಮಯವೇ ಆಗುವುದಷ್ಟೆ ?” ನಗೇಶ:-"ಏನಯ್ಯ! ಮೂರು ದಿನಗಳಿಂದ ಬಾರದಿದ್ದವನು, ಇಂದು ಒಬ್ಬರಿಗೂ ತಿಳಿಸದಂತೆ ಗುಟ್ಟಾಗಿ ಬಂದು, ತಂಗಿಯಲ್ಲಿ ಯಾವ ರಹಸ್ಯವನ್ನು ಹೇಳುತ್ತಿದ್ದೆ?” ಅಚಲ:- ತಂಗಿಯಲ್ಲಿ, ಅಣ್ಣನು ರಹಸ್ಯವನ್ನು ಹೇಳುವುದೂ, ತಂಗಿ ಯು ತಿಳಿಯದಿದ್ದುದನ್ನು ಅಣ್ಣನಲ್ಲಿ ಕೇಳಿತಿಳಿದುಕೊಳ್ಳುವುದೂ ಸಹಜವಷ್ಟೆ, ಮತ್ತೇನು ವಿಶೇಷ?
ಪುಟ:ಮಾತೃನಂದಿನಿ.djvu/೧೪೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.