134 ಸತಿ ಹಿತೈಷಿಣೇ ನಗೇಶ:- ಕಿರುನಗೆಯಿಂದ--"ವಿಶೇಷವನ್ನು ನಿನ್ನಿಂದಲೇ ತಿಳಿಯಬೇಕು?” ನಂದಿನಿಯ ಕಡೆಗೆ ತಿರುಗಿ- 'ಏನಮ್ಮ ನಂದಿನಿ! ಏಕೆ, ಇಬ್ಬರೂ ನಿಂತೇ ಇರುತ್ತೀರಿ? ಕುಳಿತುಕೊಳ್ಳಿರೆಂದು ಹೇಳಲೇಬೇಕೊ? ಸರಿ; ಕುಳಿತು ಕೊಳ್ಳಿರಿ. ಇದೇನು ಕೈಯಲ್ಲಿರುವುದು? ನಂದಿಯು ಸ್ವರ್ಣೆಯೊಡನೆ ಕುಳಿತು, ಕೈಯಲ್ಲಿದ್ದ ಪತ್ರವನ್ನು ನಗೇ ಶನ ಮುಂದಿಟ್ಟು --' ಇದು ಪಿತೃಸಮ್ಮುಖದಿಂದ ಬಂದ ನಿರೂಪವು.' ನಗೇಶನು ಪತ್ರವನ್ನು ತೆಗೆದು ಸ್ವರ್ಣೆಯ ಕೈಯಲ್ಲಿತ್ತು-" ಮಗುವೆ! ಎಲ್ಲಿ. ಇದನ್ನು ನಾವೆಲ್ಲರೂ ಕೇಳುವಂತೆ ಓದಿ ಹೇಳು ? " ಸ್ವರ್ಣಯು ಪತ್ರವನ್ನು ಕೈಗೊಂಡು ನಾಚಿಕೆಯಿಂದ ತಲೆತಗ್ಗಿಸಿ ನಿಂತುಕೊಂಡಳು. ಚಿತ್ರ: -ಕಿರುನಗೆಯಿಂದ-'ಏಕೆ, ಸ್ವಣೆ೯ ! ಹೀಗೇಕ ನಾಚುತ್ತೀಯೆ ? ಇಲ್ಲಿರುವವರಲ್ಲಿ ನಿನಗೆ ಯಾರೂ ಹೊಸಬರಲ್ಲವಷ್ಟೆ? ಓದು, ಹಾಗೇನಾದರೂ ಹಿಂತೆಗೆದೆಯಾದರೆ, ನೋಡಿಕೋ, ಇದಿರಲ್ಲಿ ಅಚಲಚಂದ್ರನೂ ನಂದಿನಿಯೂ ಕುಳಿತೇ ಇರುವರು. ಅವರು ಬೇರೆ ನಿನ್ನನ್ನು ಸುಮ್ಮನೆ ಬಿಡಲಿಕ್ಕಿಲ್ಲ! ಅಷ್ಟ ರವರೆಗೆ ಅವಕಾಶವನ್ನೇಕೆ ಕೊಡಬೇಕು? ನೀನು ಓದು-ಬರಹವನ್ನು ಕಲಿತ್ತುದ್ದೆಕೆ? ಸಮಯಕ್ಕೆ ತಕ್ಕಂತೆ ಉಪಯೋಗಿಸಬೇಕೆಂಬ ಉದ್ದೇಶ ದಿಂದಲ್ಲವೇನು?-” - ಸ್ವರ್ಣ:-ಬೆದರಿನೋಡುತ್ತ- 'ಅಮ್ಮ! ಇಷ್ಟಕೆ ಸಿಟ್ಟು ಮಾಡು ತ್ತೀಯೆ, ಓದೆಂದರೆ ಸಾಕು. ನಾನು ಓದಲು ತಡೆಮಾಡಿದುದರ ಉದ್ದೇಶ ವಿದೇನೂ ಅಲ್ಲ. ನಗೇಶ:-ಉದ್ದೇಶವೂ ಬೇರೆಯೋ? ಅದಾವುದು ? ಅಚಲನು ಹೇಳ ಬೇಕೆ೦ದೋ ? ಅಚಲ:-ನಗುತ್ತ-'ಸರಿ-ಸರಿ ! ಅಷ್ಟು ಕುಚೇಷ್ಟೆಯನ್ನು ಇನ್ನೂ ತಡೆಯುವಂತಿಲ್ಲ. ಅವಳ ಉದ್ದೇಶವದೇನೂ ಅಲ್ಲ. ಅದರಲ್ಲಿ ನಂದಿನಿಯ ಹೆಸರಿರುವುದರಿಂದ , ಅವಳ ಅಭಿಪ್ರಾಯವನ್ನು ತಿಳಿಯಬೇಕೆಂದೂ, ಮತ್ತು ಅದರಲ್ಲಿ ಮತ್ತೊಂದು ಪತ್ರವಿರುವುದರಿಂದ ಮೊದಲು ಯಾವುದನ್ನು ಓದ