ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

150

                                                ಸತೀ ಹಿತೈಷಿಣೀ      

ಎಲ್ಲಿ? ಅವರ ಪಾದಧೂಳಿಯನ್ನಾದರೂ ನಾವು ಧಾರಣಮಾಡುವ ಷ್ಟರ ಅರ್ಹತೆಯುಳ್ಳವರೆಂದೋ? ಇಲ್ಲ. ಅದಕ್ಕೆ ಕೂಡ ನಮಗೆ ಅರ್ಹತೆಯಿರುವುದಿಲ್ಲ. ಏಕೆಂದರೆ, ಈಗ ನೋಡಿರಿ, ಸೋದರಿಯರೇ!

       ಶಿವಪುರದ ವಿಚಾರವೊಂದನ್ನೇ ಈಗ ನಿಮ್ಮ ನಿದರ್ಶನಕ್ಕೆ ತಂದು ಮುಂದಿಟ್ಟರೆ, ನೀವೇ ತತ್ವಾರ್ಥವನ್ನು ನಿರ್ಧರಿಸಕೊಳ್ಳಬಲ್ಲಿರಲ್ಲವೇ? ಆಗಲಿ. ಇಲ್ಲಿರುವ ನಮ್ಮ ಜನಾಂಗದಲ್ಲಿ, ಹಲವು ಪಂಗಡಗಳೂ-ಹಲವು ಬಗೆಯ ಭಿನ್ನ ಭಿನ್ನ ಪದ್ಧತಿಗಳೂ- ಏರ್ಪಟ್ಟಿರುವುದೂ, ಅಂತದರಿಂದ ಒಬ್ಬರಲ್ಲಿ ಮತ್ತೊಬ್ಬರು ಸಹಜಭಾವನೆಯಿಂದ ಕಲಿತು, ಐಕಮತ್ಯವನ್ನು ವೃದ್ಧಿ ಪಡಿಸಲು ಆತಂಕವಾಗಿರುವುದೂ ನಿಮಗೆ ತಿಳಿದೇ ಇರುವುದು. ಹೇಗೆನ್ನು ವಿರೊ:-ಒಂದುಕಡೆ ನೋಡಿದರೆ, ಪ್ರೌಢಕಲಾಶಾಯಲ್ಲಿ ವ್ಯಾಸಂಗಿಸಿ, ವಿಜ್ಞಾನಾಗಮವರ್ಗ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾವತಿಯರೇ ತಾವೆಂದು ಹೆಮ್ಮೆಗೊಂಡು, ತಮ್ಮ ಗುರುಹಿರಿಯರನ್ನೂ ತಮ್ಮ ಪತಿ ಮತ್ತು ಪುತ್ರರನ್ನೂ ನಿರ್ಲಕ್ಷ್ಯದಿಂದ ಜರಿವಾಡುತ್ತಿರುವುದೂ, ಆ ತಮ್ಮ ವಿದ್ಯಾ ಲಾಭದ ಮದಾಂಧತೆಯಿಂದ ಉಚ್ಥೃಂವಿಲವೃತ್ತಿಯಲ್ಲಿ ನಿರತರಾಗಿ, ತಮ್ಮ ಧರ್ಮ-ಧ್ಯೇಯ-ಕರ್ತವ್ಯವಿಚಾರವೇನೆಂಬುದನ್ನು ಒಮ್ಮೆಯಾದರೂ ಆಲೋಚಿಸದೆ ನಡೆಯುತ್ತಿರುವುದೂ, ಮತ್ತು ತಮ್ಮ ವಿದ್ಯಾಮದದಿಂದ ಇತರ ತಮ್ಮ ಸೋದರೀ ವರ್ಗದವರನ್ನೂ-ಎಂದರೆ, ತಮ್ಮಂತೆ ವಿದ್ಯಾವ್ಯಾಸಂಗ ಮಾಡದವರನ್ನೂ -ಅಕ್ಷರಶತ್ರುಗಳಾಗಿರುವ ಹಳ್ಳಿಗಾಡಿನವರನ್ನೂ-ಕಸಕ್ಕೂ ಕಡೆಯಾಗಿ ಭಾವಿಸಿ, ಅವರನ್ನು ಪ್ರತ್ಯಕ್ಷ ಪರೋಕ್ಷದಲ್ಲಿಯೂ ನಾನಾಬಗೆಯ ದುರ್ಭಾಷೆಯಿಂದ ಭಂಗಿಸಿ, ಅಂತವರು ತಮ್ಮಂತವರ ಉಪಚಾರಕ್ಕಾಗಿಯೇ ಭಗವಂತನಿಂದ ನಿಯಮಿತರಾಗಿರುವರೆಂದು ಹೇಳುತ್ತಿರುವುದೂ ನಾಗರಿಕತೆಗೆ ಮುಖ್ಯಾಂಗವೆಂದು ನಂಬಿ, ಮರುಳಾಟವಾಡುತ್ತಿರುವವರು ಕಾಣುತ್ತಿರುವರು. ಇತ್ತ, ಇನ್ನೊಂದು ಕಡೆಯಲ್ಲಿ ನೋಡಿದರೆ, ಬಾಹ್ಯ ಪ್ರಾಪಂಚಿಕ ತತ್ವಗಳನ್ನು ಇಷ್ಟಾದರೂ ತಿಳಿಯಲಾರದ ಅಕ್ಷರಶತ್ರುಗಳು ಇದೇ ತಮ್ಮ ಪೂರ್ವಾಚಾರವೆಂದೂ-ಇದೇ ತಮ್ಮ ಮತಧರ್ಮಬೋಧೆಯೆಂದೂ-ನಂಬಿ, ಮೂಢ ಭಕ್ತಿಯಿಂದ ಕೇವಲ ಶಾರೀರಕ ಕ್ಲೇಶಗಳನ್ನು ಹೆಚ್ಚಿಸುವ ವ್ರತ-ನಿಯಮ