ಮಾತನ೦ದಿಸಿ 151 ಉಪವಾಸ-ಜಾಗರಾದಿಗಳನ್ನು ಹಿಡಿದು, ತಮ್ಮ ಪುರುಷವರ್ಗದವರ ಮನ ಸ್ಸಿಗೂ, ಮಕ್ಕಳ ಮುಂದಿನ ಪುರೋವೃದ್ಧಿಗೂ, ಯಾವುದೇ ಒಗೆಯ ಪ್ರೋತ್ಸಾಹವನ್ನು ಕೊಡಲು ಅಶಕ್ತರಾಗಿ, ನಾನಾಒಗೆಯ ರೋಗವ್ಯಾಕುಲ ಕಿ೦ತೆಗಳಿಗೆ ಪಕ್ಕಾಗಿ, ಅಕಾಲದಲ್ಲಿ ತನ್ನನ್ನು ನಂಬಿದವರೆಲ್ಲ ರನ್ನೂ ಬಿಟ್ಟು, ಮೃತ್ಯುಮುಖದಲ್ಲಿ ಬಿದ್ದು ಹೋಗಿರುವವರೂ ಇಲ್ಲವೆ, ನಿಯೋಜಕರೆನ್ನಿಸುವಂತೆ ದೀರ್ಘರೋಗಿಗಳಾಗಿ ನರಳುತ್ತಿರುವವರೂ ಕಾಣುತ್ತಿರುವರು. ಹೀಗಾಗಿರುವುದರಿಂದ ಐಕಮತ್ಯವು ನಮ್ಮ ಶ್ರೀ ಜನಾಂಗವನ್ನೇ ಬಿಟ್ಟು ಮಾಯವಾಗಿರುವುದು. ಆದುದರಿಂದ ನಮಗೆ ಯಾವ ಮಾರ್ಗವು ಶ್ರೇಯಸ್ಕರವಾಗಿರಬೇಕು ? ನಾಗರಿಕರಾರು ? ನಾಗರಿ ಕತೆಯ ಗಂಧವೆಂಬುದು ಎಲ್ಲಿ, ಹೇಗೆ, ತೋರುವುದು? ನಮ್ಮ ದೇಶವು ಉತ್ತಮಸ್ಥಿತಿಗೆ ಬರಲು ನಾವು ಮಾಡಬೇಕಾಗಿರುವುದೇನು?” ಎಂಬವನ್ನು ಪರ್ಯಾಲೋಚಿಸಿ, ಅದರಂತೆ ನಡೆವುದೇ ಈ ನಮ್ಮ ಸಮ್ಮೇಲನದ ಉದ್ದೆಶವು. ಸೋದರಿಯರೇ! ನಮ್ಮ ಭಾವೀಸಂಸತ್ತಿಗೆ ಆಕರವಾದ ಮಾರ್ಗವೆಂದರೆ,-ನಾಗರಿಕತೆ ಯೆಂದರೆ,- ಮತ್ತಾವುದೂ ಅಲ್ಲ. ನಮ್ಮ ಮಾನಸಿಕ ಮತ್ತು ಶಾರೀರಕ ಸ್ಥಿತಿಗಳು ಮೊದಲು ಉತ್ತಮ ಕ್ರಮದಿಂದ ಸಧಾರಿಸಲ್ಪಟ್ಟು, ಹಾಗೆ ಸುಧಾ ರಿಸಿದ ಮನಸ್ಸಿಂದ ನಮ್ಮಲ್ಲಿ ಸದಸದ್ವಿವೇಕವ ಬರುಬರುತ್ತ ಬಲವಾಗುವಂತೆ ದ್ದು, ಅದರ ಆಧಾರದಿಂದ ನಾವು ನಮ್ಮ ಆರ್ಯರಮಣಿಯರ ಆತ್ಮಶಿಕ್ಷಣ ವನ್ನು ಅನುಕರಿಸಿ, ನಮ್ಮ ಸದ್ವರ್ತನೆ-ಸಮಾಲೋಚನೆ-ಕಾಲೋಚಿತ ಸೂಚ ನೆಗಳಿಂದ ನಮ್ಮನ್ನು ಹೆತ್ತವರಿಗೂ, ನಮಗೆ ಜ್ಞಾನಮಾರ್ಗವನ್ನು ಬೆಳಗು ವಂತೆ ಮಾಡಿದ ಗುರುಜನರಿಗೂ, ನಮ್ಮ ಸಮಸ್ತ ಸುಖಸಂಗತಿಗೂ ಸಾಕಾರ ಬ್ರಹ್ಮಸ್ವರೂಪರಾಗಿರುವ ಪತಿರಾಜರಿಗೂ, ಅನಂದ-ಸಮಾಧಾನ-ಅರ್ಥ ಸಿದ್ಧಿ ಗಳನ್ನುಂಟುಮಾಡುವ ಮತ್ತು ಮುಂದಿನ ನಮ್ಮ ಬಾಲಕರನ್ನು, ದೇಶಸೇವೆ ಕರೂ ದೇಶಪಾಲಕರೂ ಆಗುವಂತಹ ಸುಶಿಕ್ಷಣವನ್ನು ಕೊಡಲು ದಕ್ಷರೆನ್ನಿ ಸುವ ಮಾರ್ಗವೇ ನಮಗೆ ಶ್ರೇಯಸ್ಕರವಾಗಿರುವ ಮಾರ್ಗವ, ಯಾವ ವೃತ್ತಿಯನ್ನು ಹಿಡಿದರೆ ನಮ್ಮ ಸ್ವರೂಪ-ಕರ್ತವ್ಯಗಳಿಗೆ ಹಾನಿತಟ್ಟುವುದೋ,
ಪುಟ:ಮಾತೃನಂದಿನಿ.djvu/೧೬೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.