ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮಾತೃ ನಂದಿನಿ

                                                                    153

ರಾಗಿರುವ ಈಕಾಲದ ಪ್ರೌಢಕಲಾಭಿಜ್ಞೆಯರಾದ ಸ್ತ್ರೀಜನರಿಂದಲಾಗಲೀ ಶಿಕ್ಷಿತರಾಗುವ ಬಾಲಕನಿವಹವು, ಮುಂದೆ ತಮ್ಮ ಸತೀಕರ್ತವ್ಯವನ್ನೂ, ಗೃಹಿಣೀಧರ್ಮವನ್ನು ತೃಪ್ತಿಕರವಾಗಿ ಕಾಪಾಡಿಕೊಳ್ಳಬಲ್ಲವರಾಗುವರೆಂಬದು ನಂಬಲಾಗದಮಾತು. ಅಂತಹ ಬಾಲಿಕಾನಿವಹಕೈಕೊಡಬೇಕಾದ ಶಿಕ್ಷಣದಲ್ಲಿ, ಮೊದಲ ತಾಯಿತಂದೆಗಳೂ ಗುರುಜನರೂ ತಮ್ಮ ನಿರ್ದುಷ್ಟ ಶೀಲವೃತ್ತಗಳನ್ನೇ ಮಾದಿರಿಯಾಗಿಟ್ಟು, ಅಂತದರಿಂದ ಬಾಲೆಯರ ಮನಸ್ಸು ತಮ್ಮಲ್ಲಿ ಸಹಜವಾದ ಪ್ರೇಮಲಭಾವವನ್ನು ಹೊಂದುವಂತೆ ನಯನೀತಿಯನ್ನು ಹೇಳುವುದೂ, ಅವರಲ್ಲಿ ನಾರಾಸಾರ ವಿಚಾರಜ್ಞಾನವಂಕುರಿಸುವಂತೆ ಮಾಡಲು ನಮ್ಮ ಪೂರ್ವಜರ ಅದ್ಭುತಚರಿತೆಗಳನ್ನೇ ಮುಂದಿಟ್ಟು, ಸುವಿರಕ್ತ ಮಾರ್ಗದಲ್ಲಿಯೇ. ಅವರ ಬುದ್ಧಿಯನ್ನು ವಿನಿಯೋಗಿಸುವಂತೆ ಮಾಡಬೇಕಾದುದೂ ಮುಖ್ಯವು. ಹೀಗೆ ಸುಧಾರಿಸಲ್ಪಟ್ಟ ಬಾಲಿಕಾನಿವಹವೇ ನಮ್ಮ ಆರ್ಯಕುಲಮಂಡನರಾದ ನಾರಿ ಗಣದಲ್ಲಿ ತಾವೂ ಪರಿಶೋಭಿಸುವಂತಹ ಪೂಜ್ಯ ಗೃಹಿಣಿಯರಾಗುವರಲ್ಲದೆ ಆದಿಯಿಂದಲೂ ನಮ್ಮ ಲಲ್ಲೆ --ಚಲ್ಲಾಟ-ಸೊಗಸು-ಸಿಂಗರ-ವೈಯ್ಯಾರಗಳಿಂದ ಬೆಳೆದು, ಬಲಿತ ಕುರಿಗಳಂತೆ ಕೊಬ್ಬಿದ ಹುಡುಗಿಯರು, ನಮ್ಮ ಸ್ತ್ರೀವರ್ಗದ ಕೀರ್ತಿವ್ರಕಾಶಕ್ಕಾಗಲೀ, ಸತೀಧರ್ಮ ಪರಿಪಾಲನೆಗಾಗಲೀ, ಶ್ರಮಸಾಧ್ಯವಾದ ಬಲವತ್ಕಾರ್ಯಗಳಿಗಾಗಲೀ ಸಹ ಕಾರಿಗಳಾಗುವರೆಂದು ತಿಳಿಯಬೇಡಿರಿ. ಏಕೆಂದರೆ, ಅವರು ಮುಂದೆ ತಮ್ಮ ಪತಿರಾಜರ ಆಯಕ್ಕೆ ತಕ್ಕಂತೆ, ನ್ಯಾಯರೀತಿಯಿಂದ ಗೃಹಕಾರ್ಯ ನಿರ್ವಾಹವನ್ನು ಮಾಡಲು ಉಚಿತಾನುಚಿತ ಪ್ರಜ್ಞೆಯೂ, ಆಯ ವ್ಯಯಗಳ ಲೆಕ್ಕಗಳೂ, ಆರೋಗ್ಯನಿಧಾನಗಳೂ, ತಕ್ಕಷ್ತೂ ನಮ್ಮವರಿಗೆ ತಿಳಿದಿರಬೇಕು, ಹಾಗಿಲ್ಲದೆ ಹೋದರೆ, ತಮ್ಮ ದುಂದುವೆಚ್ಚದಿಂದ ಪತಿಯನ್ನು ಮೂರೇ ದಿನಗಳಲ್ಲಿ ನಾಲಗಾರನ ಮಗನನ್ನಾಗಿ ಮಾಡಿ ಕೆಡಿಸುವರು. ಗೃಹಚ್ಚದ್ರಗಳಿಗೆ ಕಾರಣರಾಗಿ ಅತ್ಯಸಮಾಧಾನದ ಮಾತನ್ನಾದರೂ ಎತ್ತದಂತೆ ಮಾಡುವರು. ದುರಾಹಾರ, ದುರ್ವಿಷಯಚಿಂತನೆಗಳಿಂದ ದೇಹಾರೋಗ್ಯವನ್ನೇ ಹಾಳುಮಾಡುವರು. ಹೀಗಾಗುವುದರಿಂದ ನಮ್ಮ ಬಾಲಿಕೆಯರನ್ನು ದುರಾಶೆಗೆ ಮಾತ್ರ ಎಂದೆಂದಿಗೂ ನಾವು ವಶಪಡಿಸಬಾರದು. ಏಕೆಂದರೆ, ಇದಕ್ಕೆ ಇಲ್ಲಿಯೇ ನೋಡಿರಿ ! ಆಭರಣಗಳ ಹುಚ್ಚನ್ನು ಬಿಟ್ಟು, ಪರಿಮಿತಾಲಂಕಾರಗಳಿಂದ ಮಾತ್ರವೇ