ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಸ 154 ಸತೀಹಿತೈಷಿಣೀ
ಕೂಡಿರುವ ನೀವು ಯಾವ ಭಯ-ಕಾತರ-ಶಂಕೆ-ಆತಂಕಗಳಿಗೂ ಒಳಗಾಗದೆ ಧೈರ್ಯವಾಗಿರುವಿರಲ್ಲವೇ? ಇದಕ್ಕೂ ಹೆಚ್ಚಿನ ಸಮಾಧಾನವಿನ್ನಾವುದು ! ಮತ್ತೊಂದು ವಿಚಾರ ದೇಶಭಕ್ತಿಯೆಂದರೆ, ಮಾತಾಪಿತೃಭಕ್ತಿಯೆಂದರೆ, ಸೋದರವಾತ್ಸಲವೆಂದರೆ, ಬರಿಯ ವಾಗಾಡಂಬರದಿಂದಲೇ ಬರುವಂತಿಲ್ಲ. ಅದು ಮಾನವನ ಅಂತರಂಗದಿಂದಲೇ ಹುಟ್ಟಿ, ಅಲ್ಲಿಯೇ ನೆಲೆಗೊಂಡು ಸುತ್ತಲೂ ನಡೆನೋಡುತ್ತಿರುವಂತಹವಾಗಿರಬೇಕು. ಹೀಗಿದ್ದವರೇ ತಮ್ಮ ದೇಶೋನ್ನತಿಗೆ, ತಮ್ಮ ಜನ್ಮದಾತರ ಭವಿತವ್ಯತೆಗೆ, ತಮ್ಮ ಒಡಹುಟ್ಟಿದವರ ಉತ್ತರೋತ್ತರಾಭಿವೃದ್ಧಿಗೆ, ಬೇಕಾದರೆ ತಮ್ಮ ದೇಹವನ್ನು ಗಣಿಸದೆ, ಪ್ರಾಣವನ್ನೇ ಬಿಟ್ಟು ಬಿಡಲು ಸಿದ್ಧರಾಗುವರು. ಇದಕ್ಕೆ ನಮಗೆ ದೃಷ್ಟಾಂತಕ್ಕೆಂದರೆ, ನಮ್ಮ ಚಿರಸ್ಮರಣೀಯಳಾದ ಸ್ವರ್ಗವಾಸಿನೀ ಸ್ನೇಹಲತಾದೇವಿಯನ್ನು ಸ್ಮರಿಸಿಕೊಳ್ಳಿರಿ. ಆ ದೇವಿಯು ತನ್ನ ಅತ್ಯಲ್ಪವಯಸ್ಸಿನಲ್ಲಿಯೂ, ಎಷ್ಟರ ಮಹತ್ತರವಾದ ಪಿತೃಭಕ್ತಿಯನ್ನೂ, ಮಾತೃಪ್ರೇಮಗೌರವವನ್ನೂ, ಭ್ರಾತೃಸ್ನೀಹವನ್ನೂ ವ್ಯಕ್ತಗೊಳಿಸಿಟ್ಟು, ಧನದಾಹಗ್ರಸ್ತರಾದ ಈ ಕಾಲದ ನಾಗರಿಕರೆಂಬ ವರಿಗೆ ತಕ್ಕ ಪ್ರಾಯಶ್ಚಿತ್ತದ ಮಾರ್ಗವನ್ನು ತೋರಿಸಿಕೊಟ್ಟು, ಎಷ್ಟು ಧೈರ್ಯ- ಸ್ಛೈರ್ಯಗಳಿಂದ ಆತ್ಮವಿಸರ್ಜನೆ ಮಾಡಿಕೊಂಡಿರುವಳು ! ಇನ್ನೂ ಅಂತಹ ಪವಿತ್ರ ಮೂರ್ತಿಗಳು ಈ ಜಗತ್ತಿನಲ್ಲಿರುವುವೇ? ಹಾಗಿದ್ದರೆ-ಎಲ್ಲಿ, ಈ ನಮ್ಮವರ ದುರ್ವಿಚಾರಾಗ್ನಿಗೆ ಜ್ಞಾನಾಮೃತವರ್ಷವನ್ನು ಸುರಿಸಿ, ಶಾಂತತೆಯನ್ನು ಸರ್ವತ್ರ ಸ್ಥಾಪನ ಮಾಡಲಿ! ನಮ್ಮ ಬಾಲೆಯರಲ್ಲಿ ಪ್ರತಿಯೊಬ್ಬರೂ ಒಬ್ಬೊಬ್ಬ ಸ್ನೇಹಲತೆಯಾಗಿ ಪ್ರಕಾಶಿಸಿ, ದೇಶಮಾತೆಯನ್ನು ಮುತ್ತಿರುವ ದಾರಿದ್ರ್ಯ-
ದ್ರೋಹ-ಆತ್ಮಹತ್ಯ-ನರಹತ್ಯಗಳೇ ಮೊದಲಾದ ಭೀಕರರೋಗಗಳ ಹುಟ್ಟಡಗಿಸಿ, ಆ ನಮ್ಮ ಪ್ರಿಯಮಾತೆಯ ಪೂರ್ವಸಂದರ್ಯ ಮತ್ತೆ ಉಂಟುಮಾಡಿ ಕೊಡಲಿ. ಅಷ್ಟು ಮಾಡಲಾರರೇ? ಅಯ್ಯೋ! ಇದೆಲ್ಲವೂ ನನ್ನ ಭ್ರಾಂತಿವಚನವು. ಸೋದರಿಯರೇ, ಮುಳಿಯದಿರಿ! ಸ್ನೇಹಲತೆಯನ್ನು ನೆನೆನೆನೆದು ನಮ್ಮ ಸ್ತ್ರೀನಿವಹವು ಕರ್ತವ್ಯಬಾಗ್ರತರಾಗುತ್ತಿರಲಿ. ಹಾಗಾಗದಿದ್ದರೆ ಪುರುಷವರ್ಗದವರು ಒಂದುವೇಳೆ ನಿದ್ರಾಜಡತೆಯಿಂದೆಚ್ಚತಿದ್ದರೂ, ಬಹುಕಾಲ ಹಾಗೆಯೇ ಇರಲಾರರು. ನಮ್ಮ ಜಡತೆಯಿಂಗುವ