155 ಮಾತೃನ೦ದಿನಿ ವರೆಗೂ ಅವರ ಒಳ್ಳೆ ಗೆ ದಾರಿಯಿಲ್ಲ. ಇನ್ನೇನು ಹೇಳಲಿ ? ಇಷ್ಟು ದೂರ ಹೇಳಿದುದರಿಂದ ನಿಮಗೆ ಬೇಸರವಾಗಿರಬೇಕಲ್ಲವೆ? ನಿಜ ! ಮೊದಲನೆಯ ದಿನದಲ್ಲಿಯೇ ಇಷ್ಟು ಕಠಿಣವಾಗಿ ಹೇಳುವುದರಿಂದ ನಿಮಗೆ ಅಷ್ಟಾಗಿ ರುಚಿ ಸಿರಲಾರದು. ಆವರೆ, ನಾನು ಮಾಡುವುದಾದರೂ ನು?- ನಾನು ಇಲ್ಲಿ, ಈವರೆಗೂ, ನಮ್ಮ ತಂದೆಯ ಅಚ್ಚಾ ಬಲದಿಂದಲೇ ಅಜ್ಞಾತವಾಸದಲ್ಲಿದ್ದೆನು. ಈಗಲೂ ಅವರ ನಿರೂಪದಂತೆಯೇ ಇಂದು ನಿಮ್ಮೆಲ್ಲರನ್ನೂ ಏಕಕಾಲರಲ್ಲಿ ಸೇವಿಸುವಂತಾದೆನು, ಮುಂದೆ ನನಗೆ ಇಂತಹ ಸುಸಂಧಿಯು ದೊರೆವುದು ಪ್ರಯಾಸವೆಂದೂ, ನಾನು ಪಿತ್ರಾಜ್ಞೆಯಂತೆ ಇನ್ನು ಸ್ವಲ್ಪ ದಿನಗಳಲ್ಲಿಯೇ ನಿಮ್ಮನ್ನು ಅಗಲಬೇಕಾಗಬಹುದೆಂದೂ ಭಾವಿಸಿ, ಇಂದು ಇಷ್ಟನ್ನು ವಿವರಿಸಿದೆನು. ಮುಂದೇನಾದರೂ ಕಲೆತು ಮಾತನಾ ಡುವ ಯೋಗವುಂಟಾದರೆ, ಉಳಿದ ವಿಚಾರಗಳೇನಿದ್ದರೂ ವಿವರಿಸಬಹು ದೆಂದು ಸೂಚಿಸುವೆನು. ಮತ್ತೆ ನನ್ನ ನಿಮಿತ್ತದಿಂದ ಈ ಊರ ಮಹಾ ಜನರು, ಈ ನಮ್ಮ ಪರಮಪೂಜ್ಯರಾದ ಶ್ರೀಮಂತರಿಗೂ, ಅವರ ಸಹಚರ ರಾದವರಿಗೂ, ಉಂಟುಮಾಡಿದ ಕಠಿಣಶಾಸನವನ್ನು ಅತಿಕ್ರಮಿಸಿ, ತಮ್ಮ ಕರ್ತವ್ಯ ಕರ್ಮವನ್ನು ಜಾಗ್ರತಸ್ಥಿತಿಗೆ ತಂದು, ಸಂಘಶಕ್ತಿಗೆ ನೂತನಕಾಂತಿ ಯನ್ನು ಎಟುಮಾಡಿರುವ ನಮ್ಮ ಸನ್ಮಾನನೀಯ ಭ್ರಾತೃಗಳನೆಲ್ಲಾ ಅಭಿನಂದಿಸಿ, ನಿಮ್ಮ ಮೂಲಕವಾಗಿ ಅವರ ಅಭ್ಯುದಯವನ್ನು ಕೋರುವೆನು, ಮತ್ತೇನು ನನ್ನ ಕೋರಿಕೆ? ಇದೇ ನನ್ನ ನಿರಂತರದ ಪ್ರಾರ್ಥನೆ. ನಮ್ಮ ನಾರೀಗಣವು ತಮ್ಮ ಪುರುಷವರ್ಗಕ್ಕೆ ಅಂತಸ್ಸತ್ವಸ್ವರೂಪಿಣಿಯರಾಗಿ ಗೌರವಿಸಲ್ಪಡುವಂತೆ ಯೂ, ನಮ್ಮ ಪುರುಷ ಬಂಧುಗಳು, ಸತ್ಪುತ್ರರತ್ನ ರೆನ್ನಿಸಿ, ದೇಶಸೇವೆಯಲ್ಲಿ ಕೃತಕಾರ್ಯ ರಾಗುವಂತೆಯೂ, ಆ ನಮ್ಮ ಸರ್ವಂಸಹಾಯೆಯ ಸಸ್ಯ ಶ್ಯಾಮ ಲೆಯೂ ಆದ ದೇಶಮಾತೆಯೇ ಅನುಗ್ರಹಿಸುತ್ತಿರಲಿ.” ನಂದಿನಿಯ ಈಕಡೆಯ ವಾಕ್ಯಗಳು ಮುಗಿಯುತ್ತಿದ್ದಾಗಲೇ, ಮೂಕ ರಂತೆ ಭ್ರಾಂತರಾಗಿ ಕುಳಿತಿದ್ದ ಸ್ತ್ರೀಯರೆಲ್ಲರೂ ಏಕಕಾಲದಲ್ಲಿ ಎದ್ದು ನಿಂತು ಉತ್ಸಾಹದಿಂದ ಧನ್ಯ! ನಂದಿನೀ-ನೀನೇ ಧನ್ಯ!! ನಿನ್ನ ಪ್ರತಿಯೊಂದು ವಾಕ್ಯವೂ ನಮ್ಮ ಮನಸ್ಸನ್ನು ಚೆನ್ನಾಗಿ ಮುಟ್ಟುವಂತೆ ಬೋಧಿಸಿದೆ. ನಿನ್ನ ಹಿತವಾದದಿಂದ ನಾವೆಲ್ಲರೂ ಸೂತ್ರಧಾರನಿ೦ದಳೆದಾಡಲ್ಪಡುವ ಬೊಂಬೆಗಳಂ JD
ಪುಟ:ಮಾತೃನಂದಿನಿ.djvu/೧೬೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.