190 ಸತೀ ಹಿತೈಷಿಣಿ ಉಳಿದ-ಎಂದರೆ, ವಿದ್ಯಾಪ್ರಸಾರಕ್ಕೆ ಸಾಧನವಾದ ಶಾನ್ಯಾಭ್ಯಾಸವೂ ಅಥವಾ ಕಲಾಭ್ಯಾಸವೂ ಅಭ್ಯಸಿಸಲ್ಪಟ್ಟರೆ, ಅಂತವರಿಂದ ನಮ್ಮ ದೇಶಮಾತೆಗೆ ಉಂಟಾಗುವ ಲಾಭವು ಅಪಾರವೆನಿಸುವುದು. ಮತ್ತೊಂದು ವಿಚಾರವೇನೆಂದರೆ,- ನಮ್ಮ ಹೆಣ್ಣು ಮಕ್ಕಳಿಗೆ ಕೊಡಲ್ಪಡುವ ಶಿಕ್ಷಣವು ನಮ್ಮಿಂದಲೇ ಆಗ ಬೇಕಲ್ಲದೆ, ಅದನ್ನು ಪುರುಷಬಂಧುಗಳ ಪಾಲಿಗೆ ಬಿಡುವುದಾಗಲೀ ಇಲ್ಲವೆ, ಶಾಲೆಗಳಲ್ಲಿ ಅಥವಾ ತಮ್ಮ ಪರೋಕ್ಷದಲ್ಲಿ ಕೊಡಲ್ಪಡಬಾರದು. ಏಕೆ ದರೆ, ಹಾಗೆ ಪರೋಕ್ಷದಲ್ಲಿ ಅಥವಾ ಶಾಲೆಗಳಲ್ಲಿ ಕೊಡಲ್ಪಡುವ ಶಿಕ್ಷಣದಲ್ಲಿ ಭಾಷಾ ಪಾಂಡಿತ್ಯವುಂಟಾಗಬಹುದಾದರೂ ನಮ್ಮವರಿಗೆ ಅವಶ್ಯಕವಾಗಿರಬೇ ಕಾದ ಗೃಹಶಿಕ್ಷಣವೂ, ಅದನ್ನು ಪುಷ್ಟಿಕರಿಸುವಂತೆ ಮಾಡುವ ಸಾಮಾಜಿಕ, ನೈತಿಕ, ಮತ್ತು ತಾತ್ವಿಕಶಿಕ್ಷಣವೂ, ಸರಿಯಾದ ರೀತಿಯಲ್ಲಿ ಎಂದರೆ, ಸಾತ್ವಿಕ ಮಾರ್ಗದಲ್ಲಿ ಕೊಡಲ್ಪಡುವುದೆಂದು ಹೇಳುವಂತಿಲ್ಲ. ಇವುಗಳನ್ನು ಬಿಟ್ಟು ಕಲಿಯುವ ಕಲೆಯಿಂದ ನಮ್ಮವರು ಸಾಧಿಸಬಹುರಾದ ' ಧರ್ಮವಾದರೂ ಇಂತಹದೆಂದು ಹೇಳಲಾಗುವುದಿಲ್ಲ. ಹೀಗಿದ್ದು, ವೃಥಾ ನಮ್ಮ ಮಕ್ಕಳು ನಮ್ಮ ಹಿರಿಯರಿಗೆ ಮತ್ತು ತಮ್ಮ ಪುರುಷರಿಗೆ ಅವಿಧೇಯರಾಗಿ, ಕೇವಲ ಸ್ವಾತಂತ್ರ್ಯದ ಉದ್ಯೋಗ ಅಥವಾ ಅಧಿಕಾರಗಳನ್ನು ಹೊಂದಿ ಮತ್ತರಾಗು ವಂತೆ ಮಾಡುವ ಶಿಕ್ಷಣೆಯಿಂದೇನು? ಅದರಿಂದ ನಮ್ಮ ಸಮಾಜಕ್ಕಾಗಲೀ ದೇಶಕ್ಕಾಗಲೀ ಉಂಟಾಗುವ ಲಾಭವಾವುದು ?ಹೇಳುವುದು ಪ್ರಯಾಸ ಮತ್ತು ಸಾಹಸ ಮಾತ್ರವಲ್ಲವೆ? ಆದರೆ, ಹೀಗೆ ಹೇಳಿದುದರಿಂದ ಪ್ರೌಢಶಿಕ್ಷಣವೆನ್ನಿ ಸುವ ಕಲಾಭ್ಯಸ ನವೇ ಕೊಡದೆಂದು ನಾನು ಹೇಳುವುದಿಲ್ಲ. ಪ್ರಾಥಮಿಕ ಶಿಕ್ಷಣವು ನಮ್ಮಿಂದ ತೃಪ್ತಿಕರವಾಗಿ ಕೊಡಲ್ಪಟ್ಟ ಬಳಿಕ, ನಮ್ಮ ಮಕ್ಕಳು ತಮ್ಮ ಪತಿರಾಜರಿಂದ ಮತ್ತು ತಮ್ಮ ಬಂಧುಗಳಿಂದ ಹೊಂದುವುದರಲ್ಲಿ ಏನೂ ಆತಂಕವಿರಲಾರದು. ಇದರಿಂದ ನಮ್ಮವರಲ್ಲಿ ಸ್ತ್ರೀವಿದ್ಯಾಭ್ಯಾಸವೇ ನಿಷೇಧವೆಂದು ಹೇಳುವ ಅಜ್ಜಮ್ಮನವರಿಗೂ-ಸ್ತ್ರೀವಿದ್ಯಾಭ್ಯಾಸವು ಅತ್ಯಾವಶ್ಯಕವೆಂದು ಹೇಳುವ ರಾದರೂ, ತತ್ವಾರ್ಥವನ್ನು ವಿಚಾರಕ್ಕೆ ತಾರದೆ, ಪಾಶ್ಚಾತ್ಯ ನಾಗರಿಕತೆ ಯನ್ನೇ ಮುಂದಿಟ್ಟು, ಅಂತವರ ವೃತ್ತಿಯನ್ನೆ ತಾವೂ ಅನುಕರಣಕ್ಕೆ ತಂದು,
ಪುಟ:ಮಾತೃನಂದಿನಿ.djvu/೨೦೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.