ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ ೦ ದಿನಿ 191 ತನ್ನ ತನು-ಮನ-ಧನಗಳನ್ನು ವ್ಯರ್ಥವಾಗಿ ಕಳೆಯುತ್ತಿರುವ ನವನಾಗ ರಿಕ ಯುವತಿಯರಿಗೂ ತಿಳಿಗಣ್ಣೆರೆದು, ಆತ್ಮಾವಲಂಬನದ ಆನಂದವೆಂತಹ ಎಂಬುದು ಅನುಭವಕ್ಕೆ ಬರುವಂತಾಗುವುದು. C'ಸೂದರಿಯರೇ! ಮೇಲೆ ಹೇಳಿದುದೆಲ್ಲವೂ ನಮ್ಮ ಮುಂದಿನ ಮಕ್ಕಳನ್ನು ನಾವು ಮಂದಿ ಗಳನ್ನಾಗಿ ಮಾಡುವ ಉಪಾಯಮಾತ್ರವಲ್ಲದೆ, ನಮ್ಮ ಕರ್ತವ್ಯವೂ ಆಗಿದೆ. ಇಷ್ಟಾಗಬೇಕಾದರೆ, ನಾವು ಹೇಗಿರಬೇಕೆಂದು ತಿಳಿದಿರುವಿರಿ? ನಮ್ಮ ಮಕ್ಕಳ ವಿಚಾರದಲ್ಲಿಯೇ ಆಗಲಿ, ಮನೆಮಂದಿಗಳ ವಿಚಾರದಲ್ಲಿಯೇ ಆಗಲಿ, ಮತ್ತು ಪತಿಸೇವೆ, ಗುರುಶುಕ್ರೂಷೆಗಳಲ್ಲಿಯೇ ಆಗಲೀ ನಾವು ಹೇಗೆ ನಡೆ ದ.ಕೊಳ್ಳಬೇಕೆಂದು ಮಾಡಿರುವಿರಿ? (ನಿರೂಪಿಸಬೇಕು, ನಿರೂಪಿಸಬೇಕು.) ತಾಯಿಯಾದವಳು, ನಿಜವಾದ ತಾಯಿಯೆನ್ನಿಸಬೇಕಾದರೆ, ತನ್ನ ಗೃಹ ಕಾರ್ಯನಿರ್ವಾಹದ ಕಡೆಗೆ ಸಂಪೂರ್ಣವಾದ ಗಮನವನ್ನು ಕೊಡಬೇಕು. ಮನೆಯಲ್ಲಿ ಮಂದಿಗಳಿರುವರೆಂದು, ತನ್ನ ಕಾರ್ಯವನ್ನು ಮತ್ತೊಬ್ಬರ ಪಾಲಿ ಗೆ ಬಿಟ್ಟು, ತಾನು ಯಾಜಮಾನ್ಯದ ಭಾರವನ್ನು ಮಾತ್ರವೇ ಹೊತ್ತಿರುವೆ ನೆಂದು ಕುಳಿತರೆ, ತನ್ನ ಮಕ್ಕಳೂ ತನ್ನಂತಯೇ ಮೈಗಳ್ಳತನವನ್ನು ಕಲಿಯ ಬಹುದೆಂದೂ, ಮತ್ತು ತನ್ನ ಸೋಮಾರಿತನ ಅಥವಾ ಕಾಠಿಣ್ಯದ ಅಧಿಕಾರ ಕ್ಯಾಗಿ ಮನೆಮಂದಿಗಳಲ್ಲಿ ಅಂತಃಕಲಹಗಳುಂಟಾಗಬಹುದೆಂದೂ, ಹೀಗಾ ಗುವುದರಿಂದ ತನ್ನ ಯಶಸ್ಸಿಗೆ ಹಾನಿಯೂ, ಗೃಹರಾಜ್ಯಕ್ಕೆ ಆತಂಕಗಳೂ ಹೆಚ್ಚುವುದೆಂದೂ ಚೆನ್ನಾಗಿ ತಿಳಿದwತ್ತಿದ್ದು, ತಾನು ಮಾಡಬೇಕಾದ ಕೆಲಸ ಗಳನ್ನು ಪಾಲುಮಾರದೆ, ಸಕಾಲದಲ್ಲಿ, ಸರಿಯಾದ ರೀತಿಯಲ್ಲಿ, ನೆರವೇರಿಸು ವುದರಿಂದ ಮನೆಮಂದಿಗಳ ಮನಸ್ಸಿಗೆ ಉತ್ಸಾಹವನ್ನೂ ಆಂತರ್ಯವಾದ ವಿಶ್ವಾಸವನ್ನೂ ಹೆಚ್ಚಿಸುವಂತೆ ನಡೆಯುತ್ತಿರಬೇಕು. ಮತ್ತು ಮನೆಮಂದಿ ಗಳಲ್ಲಿಯೂ ಇತರ ಅಶ್ರಿತಾನಾಥ ಅತಿಥಿ-ಅಭ್ಯಾಗತ ವರ್ಗದವರಲ್ಲಿಯ ಆದರವನ್ನು ತೋರುತ್ತಿರಬೇಕು. ತಮ್ಮ ಹಿರಿಯರೆಂದರೆ, ಗುರುಜನರೆಂದರೆ, 14 ದಿನಗಳೆದು ಸಾಯುವ ಮುದುಕರೆಂದು” ಅಲ್ಲಗಳೆಯದೆ, ಕೇವಲ ಭಕ್ತಿ ಗೌರವಗಳಿಂದ, ಮತ್ತು ಮಕ್ಕಳನ್ನು ಉಪಚರಿಸುವ ಬಗೆಯಿಂದ ಉಪಚರಿಸಿ, ಅವರನ್ನು ಸಂತೋಷಪಡಿಸುವುದೇ ತಮ್ಮ ಪುರವೃದ್ಧಿಗೆ ಸಾಧನವೆಂದು