ಈ ಪುಟವನ್ನು ಪರಿಶೀಲಿಸಲಾಗಿಲ್ಲ.

55 ಸತಿ ಹಿತೈರ್ಷಿಣಿ ನಂದಿನಿ.-ತಾಯವಿಷಯದಲ್ಲಿ ನಾನು ಹೆಚ್ಚಾಗಿ ಹೇಳಲಾರೆನು. ಏರ್ಕೆದಿಯೋ? ತಾಯಿಗೂ ಹೆಚ್ಚಿದ ದೈವವಿನಾ ವುದೂ ಈ ಜಗತ್ತಿನಲ್ಲಿಲ್ಲ. ಅಂತಹ ಪ್ರೇಮಮಯ ಮೂರ್ತಿಯಾದ ತಾಯಿಗೆ ಪ್ರತಿಯಾಗಿ ನಡೆವುದು ನಮಗೆ ಎಂದಿಗೂ ತಕ್ಕುದಾಗಿರದು. ಆದುದರಿಂದ, ನೀನು ತಾಯ ವಿಷ ಯದಲ್ಲಿ ಭಕ್ತಿ-ವಿನಯಗಳಿಂದ ನಡೆದುಕೊಳ್ಳುವರೇ ನಿನ್ನ ಕತ್ರವ್ಯವು. ಅಲ್ಲದೆ, ನಿನ್ನ ನಡೆಯಲ್ಲಿ ಅಡಂಬರಾದಿ ದುರ್ಗುಣಗಳು ಸೇರದಂತೆ ಎಚ್ಚತ್ತು ಕೂಳ್ಳುವ ವಿಚಾರದಲ್ಲಿ, ತಾಯ ಅನುಮತಿಯನ್ನೇ ಹೊಂದುವುದು ನಿನ್ನ ಮುಖ್ಯಧರ್ಮವೆನಿಸಿದೆ. ಅಲ್ಲದೆ, ಆಕೆ, ಅಪೇಕ್ಷಿಸಿದ ಅಥವಾ ಕಟ್ಟು ಮಾಡಿದ ವೇಳೆಗಳಲ್ಲಿ ಸಿಂಗರಿಸಿಕೊಳ್ಳುವುದೂ ಒಳ್ಳೆಯದೇಸರಿ, ಹೀಗಲ್ಲದೆ, ಬಳಿದ ನಿನ್ನ ವ್ಯಾಸಂಗಕಾಲದಲ್ಲೆಲ್ಲ ಹೀಗೆ ನೀನು ಡಾಂಭಿಕಕ್ರಿಯೆಯ ಮನವಿಟ್ಟ, ಅಲಂಕಾರ ವಿದ್ಯಾರ್ಥಿನಿ ಯೆನ್ನಿಸಲಾಗದೆಂಬುದೇ ನಾನು ನಿನಗೆ ಹೇಳುವ ಹಿತವೂ ನಾನು ಕೋರುತ್ತಿರುವ ವರವೂ ಆಗಿದೆ. - ಸ್ವರ್ಣ:-ಅಕ್ಕಾ! ಒಪ್ಪಿತು; ನನಗೆ ಇವೆಲ್ಲವೂ ಒಪ್ಪಿತು. ಇನ್ನು ಹಾಗೆಯೇ ಅಭ್ಯಾಸ ಮಾಡುವೆನು, - ನಂದಿನಿ:-ಸ್ವರ್ಣ ! ನೀನು ಸ್ವತಃ ಒದ್ದಿಯುಳ್ಳವಳು, ಅಲ್ಲದೆ ತಾಯ್ತಂದೆಯರ ಸುಶಿಕ್ಷಣೆಯಿಂದ ಪ್ರಾಸಂಗಿಕ ತತ್ತ್ವವನ್ನೂ ತಿಳಿಯಬಲ್ಲವ ಆಗಿರುವೆ. ನಿನ್ನ ಮನಸ್ಸ ಅಕೃತ್ರಿಮವಾದ ಸ್ನೇಹಕ್ಕೆ ನೆಲೆಯಾಗಿದೆ. ಇನಗೆ ಹೆಣ್ಣಾಗಿ ಹೇಳುವುದೇನೂ ಕಾಣುತ್ತಿಲ್ಲ. ಆದರೂ, ಇಷ್ಟನ್ನು ಹೇಳುವೆನು. ನಾವು ಎಳೆಯರಾಗಿರುವಾಗ ವಿನೋದದಲ್ಲಿಯೇ ಕಾಲ ಕಳೆವ ದುರಭ್ಯಾಸವನ್ನು ಸಾಧ್ಯವಾದಷ್ಟೂ ಬಿಡುತ್ತೆ ಬರಬೇಕು, ಕರ್ತವ್ಯ ವನ್ನು ಕೆಡಿಸುವ ಅತ್ಯಾಕೆ-ಅಸೂಯೆ-ಅಲಸ್ಯಗಳೇ ಮೊದಲಾದುವನ್ನು ಬಳಿಗೂ ಸೇರಗೊಡದಂತೆ ಮಾಡುವ ಧೈರ್ಯಸ್ಟ್ರ್ಯ ಗಳು ಪೋಷಕರ ಸುಶಿಕ್ಷೆಯಲ್ಲಿಯೇ ನೆಲಸಿರುವುದು. ಇದಕ್ಕೆಂದೇ ತಮ್ಮ ಮಕ್ಕಳನ್ನು ಬಾಲ್ಯ ದಿಂದ ಸಾಧ್ಯವಾದಷ್ಟೂ ವಿರಕ್ತವೃತ್ತಿ, ಶ್ರಮಸಹಿಷ್ಣುತೆಗಳಲ್ಲಿ ಪರಿಶ್ರಮ ವುಳ್ಳವರನ್ನಾಗಿ ಮಾಡಬೇಕೆಂದು ಹೇಳುವರು. " ಸ್ವರ್ಣ:-ಅಹುದು; ನೀನು ಹೇಳುವುದು ನಿಜವೇ ಆಗಿರಬಹುದು. ನಿನ್ನ ಬುದ್ಧಿವಾದದಿಂದ ನನಗೂ ಅದರಂತೆಯೇ ನಡೆಯಬೇಕೆಂಬ ಅಭಿಲಾಷೆ.