58 ಸತಿ ಹಿತೈಷಿಣಿ ಚಿತ್ರ:-ಹೇಗಾದರೂ ಅಗಲಿ: ಈ ಹಂಬಲವನ್ನು ಬಿಡಿಸಲಿಕ್ಕೆ ಉಪಾಯಯವೇನು? ಚಂದ್ರ:-ನಾಧ್ಯವಾದಷ್ಟೂ ಅವಳಲ್ಲಿ ಸಂಭಾಷಣೆಗೆ ಅವಕಾಶವಿರದಂತೆ ನೋಡಿಕೊಳ್ಳಬೇಕು. ಅಷ್ಟಲ್ಲದೆ ಬೇರೆ ಯಾವ ಉಪಾಯವೂ ಇಲ್ಲ, ಚಿತ್ರ:-ಈ ವಿಚಾರವಾಗಿ ನಂದಿನಿಗೆ ನಾವೇನೂ ಹೇಳಬೇಕಾದುದಿಲ್ಲ. ಅವಳೇ ಎಮ್ಮರಿಕೆಯಲ್ಲಿರುವಳು. ಆದರೂ ಇವನು ಹೋದರೆ ಬೇಡವೆನ್ನಲಾದೀತೇ? ಚಂದ್ರ:--ಇರಲಿ; ಇದೊಂದೇ ಕೊರತೆಯಲ್ಲವೇ, ಆತನಲ್ಲಿರುವುದು ? ಭಗವತ್ಕಟಾಕ್ಷದಿಂದ ಜಾಗ್ರತೆಯಾಗಿಯೇ ಮುಂದೆ ಬರುವನು. ಸಮ್ಮನಿರು; ವ್ಯಥಿಸಬೇಡ. ಚಿತ್ರ:-ಚಂದ್ರಮತಿ ನೀನೂ ನನ್ನ ಪ್ರಾಣಾಪ್ತಸಖಿಯಾಗಿರುವುದ ರಿಂದ ಎಲ್ಲವನ್ನೂ ಬಿಟ್ಟು ಹೇಳಿರುವೆನು. ಬೇರೆ ಬೇರೆಯಾಗಿ ಭಾವಿಸಬೇಡ. ಹೇಗೂ ಅಟಲಚಂದ್ರನ ಸುಬೋಧ ರಾಗವ, ನಾದನನ್ನೂ ಮೇಲಕ್ಕೆತ್ತ ಬೇಕೆಂಬುದೇ ನನ್ನ ಕೋರಿಕೆ. ಚಂದ್ರ:-ಕಿರುನಗೆಯಿಂದ,--- ತಿತ್ರಕಲಾ ? ಇಷ್ಟೇಕೆ ನಿನಗೆ ಕಳವಳ? ಸತ್ಸಂಕಲ್ಪಕ್ಕೊಳಪಟ್ಟುದು, ಎಷ್ಟೇ ಮಹತ್ತರವಾದುದಾಗಿರಲಿ, ಸಾಧನೆಯಾಗದಿರದೆಂದು ತಿಳಿಯಲಾರೆಯೇನು? ಅಚಲಚಂದ್ರನೂ ನಂದಿನಿಯ ಭಗವತಿಯ ಸಂಪೂರ್ಣ ಕೃಪಾಪಾತ್ರರು. ಅವರ ಪ್ರಯತ್ನಕ್ಕೆ ಎಂದಿಗೂ ಅಪವಾದವಿಲ್ಲ. ಅಲ್ಲದೆ, ಅತಲಚಂದ್ರನ ಸಹವಾಸ, ನಂದಿನಿಯ ಕಾಲೋ ಚಿತವಾದ-ಮರ್ಮಬೇಧಕವಾದ ಹಿತಬೋಧೆ ಇವುಗಳಿಂದ ನಾದಾನಂದನ ಸ್ವರ್ಣ ಕುಮಾರಿಯೂ ಉತ್ತಮವರ್ಗಕ್ಕೆ ಸೇರಿದವರಾಗಿರುವುದರಲ್ಲಿ ಏನೇನೂ ಸಂಶಯವಿಲ್ಲ. ಹೊತ್ತುಮೀರುತ್ತಿದೆ; ನಾನಿನ್ನು ಹೊರಡಲೇ ?? ಚಿತ್ರ: --ಆನಂದಪರವಶತೆಯಿಂದ,-ಚಂದ್ರಮತಿ ? ನಿನ್ನ ನಿರ್ಮತ್ಸರ ಪ್ರೇಮದಿಂದ ನಾನು ನನ್ನನ್ನೇ ಮರೆತಿದ್ದೇನೆ. ಈ ನಮ್ಮ ಸ್ನೇಹಭಾಂದವ್ಯವು ಎಂದೆಂದಿಗೂ ಬಲವಾಗಿದ್ದು, ಅದರೊಡನೆಯೇ ಸಂಬಂಧಪಾಶವೂ ಸೇರುವಂತಾಗಬೇಕೆಂಬುದೇ ನನ್ನ ನಿರಂತರ ಪ್ರಾರ್ಥನೆಯಾಗಿದೆ, ಮುಖ್ಯವಾಗಿ ನೀನು ನಮ್ಮವಳಾಗಿದ್ದರೆ, ಮಿಕ್ಕುದೆಲ್ಲವೂ ಕೈ ಕೂಡಿದಂತೆಯೇ ಸರಿ.'
ಪುಟ:ಮಾತೃನಂದಿನಿ.djvu/೭೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.