ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನ D ನಿ ಮಾತೃ ನಂದಿನಿ 59 ( ಇಬ್ಬರೂ ಪರಸ್ಪರ ಹಸ್ತಲಾಘವದಿಂದೆದ್ದು ಸ್ಥಾನಾಂತರವನ್ನು ಕುರಿತು ತೆರಳಿದರು. ಇವರ ನಿರ್ಮತ್ಸರ ಪ್ರೇಮಮಯ ಪ್ರಸಂಗವು ನಮ್ಮ ಸೋದರಿವರ್ಗವನ್ನು ಎಚ್ಚರಿಸಬಹುದಲ್ಲವೆ? ) ॥ ಶ್ರೀಕೆ || ಸಪ್ತಮ ಪರಿಚ್ಛೇದ. (ನಂದಿನೀ ಸಂದೇಶ) Cಅಪ್ಪ! ನನ್ನನೇಕೆ ಕರೆಸಿದೆ?” • ಮುಖ್ಯ ವಿಚಾರವನ್ನು ವಿಮರ್ಶಿಸಬೇಕೆಂದು.” 11 ನನ್ನ ಮುಂದೆ ವಿಮರ್ಶಿಸಬೇಕಾದುದೇನು? ” - .. ನಿನ್ನ ಅನುಭವಪೂರ್ವಕವಾದ ಅಭಿಪ್ರಾಯವನ್ನು ತೆಗೆದುಕೊಳ್ಳಲಿಕೆಂದೇ ಬರಮಾಡಿದೆದ್ದು ನಿಂತಿರುವೆಯೇಕೆ? ಕುಳಿತುಕೊ ?” ಇಗೋ ಕುಳಿತೆ, ಇನ್ನು ಏನಿದ್ದರೂ ಹೇಳಬಹುದಲ್ಲವೇ? ” ಈ ಬಗೆಯ ಉತ್ತರಪ್ರತ್ಯುತ್ತರಗಳು, ನರೇಶರಾಯನಿಗೂ ನಂದಿನಿಗೂ ನಡೆಯುತ್ತಿದ್ದವು. ನರೇಶರಾಯನು ತನ್ನ ಸ್ವಂತ ಕಿರುಮನೆಯಲ್ಲಿ ಕುರ್ಚಿ ಯ ಮೇಲೆ ಕುಳಿತಿದ್ದನು. ನಂದಿನಿಯು ನರೇಶನಿಗೆ ಇದಿರಾಗಿ ಕಾಲುಮಣೆಯ ಮೇಲೆ ಕುಳಿತು, ನರೇಶರಾಯನ ಉತ್ತರದ ನಿರೀಕ್ಷೆಯಲ್ಲಿದ್ದಳು. ಹೊತ್ತು ಇನ್ನೂ ಬೆಳಗಿನ ಒಂಭತ್ತು ಘಂಟೆಗೆ ಮೀರಿರಲಿಲ್ಲ. ಈ ವೇಳೆಯಲ್ಲಿ ಇವರ ವಿಚಾರ-ವಿಮರ್ಶನವು ಯಾವ ಬಗೆಯದಾಗಿತ್ತೆಂದು ನಮ್ಮ ವಾಚಕವರ್ಗವು ಕುತೂಹಲಪಡಬಹುದಲ್ಲವೆ? ಅದು ಸಹಜಗುಣವೇ ಸರಿ! ಅದಕ್ಕೆಂದೇ ಅವರ ವಿಚಾರವಿಮರ್ಶೆಯು ಸ್ವಲ್ಪವೂ ಬಿಡದಂತೆ ಕೆಳಗೆ ವಿವರಿಸಲ್ಪಡುವುದು, ಸಾವಧಾನದಿಂದ ಸಮಾಲೋಚಿಸಿದರೆ, ಸುಖ-ಸಮಾಧಾನಗಳೂ ತೋರಿಬರುವುದೆಂಬುದೇ ನಮ್ಮ ಹಿತಸೂಚನೆ.