ಈ ಪುಟವನ್ನು ಪ್ರಕಟಿಸಲಾಗಿದೆ
86
ಮಾರುಮಾಲೆ

ಆನಂದ ರಾಮಾಯಣದಲ್ಲಿ ಹನುಮಂತನೂ ಗರ್ವಿಸಿದ್ದನೆಂದಿದೆ “ಇತಿ ತದ್ಭರ್ವಸಹಿತವಾಕ್ಯಂ ಶ್ರುತ್ವಾರ್ಜುನಸ್ತದಾ” (ಆ. ರಾ. ಮನೋಹರ ಕಾಂಡ 18/10) ತನ್ನ ಗರ್ವ ಮುರಿಯಿತೆಂದೂ ಅವನು ಹೇಳುತ್ತಾನೆ. ಶ್ರೀಕಂಠ ಶಾಸ್ತ್ರಿಗಳ ಅನುವಾದದಲ್ಲಿ ಇಬ್ಬರೂ ಗರ್ವಿಸಿದ್ದರೆಂದೇ ಸ್ಪಷ್ಟವಾಗಿದೆ.
-ಆದರೆ, ಪ್ರದರ್ಶನದ ಮಟ್ಟಕ್ಕೆ ಬರುವಾಗ, ಹನುಮಂತನೆಂದರೆ ರಾಮಭಕ್ತಿ, ಅಲ್ಲಿ ಅವಿಭಾಜ್ಯವಾಗಿ ಗ್ರಾಹ್ಯವೆಂದೂ 1) ಕಪಿನಿಂದೆ ಎಂದರೆ ರಾಮನನ್ನು ನಿಂದಿಸಿದಂತೆಯೇ ಎಂದೂ 2) ಕೃಷ್ಣನ ಆಕ್ಷೇಪ ಆನುಷಂಗಿಕ ವೆಂದೂ 3) ಹನುಮಂತನು ಸುಳ್ಳಾಡಿದ್ದು ಅವನ ಸಹಜ ವಿನಯ ಪರ ನಿರಾಸಕ್ತಿ ಎಂದೂ, 4) ಒಂದು ಬಗೆಯ 'ಒಪ್ಪಂದ', ಕಲಾವಿದ-ಪ್ರೇಕ್ಷಕ ರಲ್ಲಿ ಇರುವ ಕಾರಣ, ಒಟ್ಟು ಸಮತೋಲವು ಅರ್ಜುನನಿಗೆ ಪ್ರತಿಕೂಲವಾಗಿದೆ
ಈಯೊಂದು ನಿಶ್ಚಿತ ವಿನ್ಯಾಸಕ್ಕೆ ಬದಲಾಗಿ, ಬೇರೊಂದು ಅರ್ಥವಂತಿಕೆ ಯನ್ನು ಈ ಪ್ರಸಂಗಕ್ಕೆ ನೀಡುವ ಮಹತ್ವದ ಯತ್ನಗಳೂ ನಡೆದಿವೆ. ದಿ। ಪೊಳಲಿ ಶಾಸ್ತ್ರಿಗಳು, ಕೃಷ್ಣನ ಪಾತ್ರದಲ್ಲಿ ಅಂತಹ ಯತ್ನವೊಂದನ್ನು ನಡೆಸಿದ್ದರೆಂದು ಕೇಳುತ್ತೇವೆ. ಈ ಬಗೆಯ ಪ್ರಯೋಗದ ಒಂದು ಪರಿಪಕ್ವ ಸ್ಥಿತಿಯನ್ನು ಶೇಣಿ ಗೋಪಾಲಕೃಷ್ಣ ಭಟ್ಟರ ಕೃಷ್ಣನ ಅರ್ಥಗಾರಿಕೆಯಲ್ಲಿ ಕಾಣುತ್ತೇವೆ. ಅರ್ಜುನ ಆಂಜನೇಯರ ಕಲಹದಲ್ಲಿ ಇಬ್ಬರೂ ಗೊಂದಲಕ್ಕೆ ಒಳಗಾದವರು, ಅರ್ಜುನನ ಜಿಜ್ಞಾಸೆಯನ್ನು ಹನುಮಂತನು ನಿವಾರಿಸಿದ ರೀತಿ ಸರಿಯಲ್ಲ. ಅರ್ಜುನನ ಅತ್ಯುತ್ಸಾಹ, ಹನುಮಂತನ ಔದಸೀನ್ಯಗಳನ್ನು ಜತೆ ಗೂಡಿಸಿದರೆ, ಲೋಕೋಪಕಾರಕ್ಕೆ ಅನುಕೂಲವಾದ ಜತೆಗಾರಿಕೆ ಸಿದ್ಧವಾಗ ಬಹುದು. ಮತ್ತು ಈ ಪ್ರಕರಣ ಹೀಗೆ ಬೆಳೆಯಲು ಕೃಷ್ಣನ ಸಂಕಲ್ಪವೇ ಕಾರಣ-ಎಂಬುದು ಅವರ ಮಾತಿನ ಸ್ಥುಲ ಧೋರಣೆ. ಈ ಪ್ರಸಂಗದಲ್ಲಿ ಕೃಷ್ಣನಿಗೆ ಈ ನಿಲುವು ವಹಿಸುವ ಅವಕಾಶವಿದೆ. ಕೃಷ್ಣ ಇಲ್ಲಿ ಒಂದು ಸತ್ವ ತಂತ್ರ ಸ್ವತಂತ್ರ ಪಾತ್ರ, ಸಾಕ್ಷಾತ್ ಭಗವಂತನೇ, ಕೃಷ್ಣನಿದ್ದವನು, ವಿಪ್ರನಾಗಿ, ಬಳಿಕ ಕೂರ್ಮನಾಗಿ, ರಾಮನಾಗಿ-ಹೀಗೆ ರೂಪಾಂತರ, ಪವಾಡಗಳಿಂದ ಆ