ಈ ಪುಟವನ್ನು ಪ್ರಕಟಿಸಲಾಗಿದೆ
ಮುಳಿಯರ ಪಾರ್ತಿಸುಬ್ಬ ಮತ್ತು ಸೂರ್ಯಕಾಂತಿ ಕಲ್ಯಾಣ
115

ಇದರಲ್ಲಿ ಕುಮಾರ ಹೆಗ್ಗಡೆ ಅವರ ಕಾಲದಲ್ಲಿ ಮೈಸೂರಿಗೆ ಧರ್ಮಸ್ಥಳದಿಂದ ಆಟದ ಮೇಳವು ಹೋದುದು, ಅದು ನಷ್ಟ ಪ್ರಾಯವಾಗಿ ಪುನಃ ಕಳಿಸಬೇಕೆಂದೂ ತಿಳಿಸಿದ್ದು ಇದೆ. ಹಿಂದಿನ ಆಂಗೀರಸ ಸಂವತ್ಸರ, 1812ರಲ್ಲಿ ಮೈಸೂರಿಗೆ ಮೇಳವು ಹೋಗಿತ್ತೆಂಬುದನ್ನು ಈ ಪತ್ರವು ಸಿದ್ಧಪಡಿಸುತ್ತದೆ ಎಂಬುದನ್ನು ಅವರು ಹೇಳಿದ್ದಾರೆ.

ಪ್ರಬಂಧದ ಕೊನೆಯಲ್ಲಿ ಸುಬ್ಬನ ವ್ಯಕ್ತಿತ್ವದ ಬಗ್ಗೆ ಬಗೆಯುತ್ತ, ಸಂಸ್ಕೃತಿಯೆಂದರೆ ಉತ್ತಮವಾದ ಗುರಿಗಳೆಡೆಗೆ ಹರಿಯುವ ಅಂತಶ್ಯಕ್ತಿಯೆದೂ, ಸಂಸ್ಕೃತಿಯೆಂದರೆ ಬರಿಯ ಕಲಿತು ಬರುವುದಲ್ಲ ಕಲೆತು ಬರುವುದೆಂದೂ ಹೇಳಿದ್ದಾರೆ. ಇದೇ ವಿಚಾರಗಳು ಇನ್ನೊಂದು ಬಗೆಯಿಂದ ಅವರ “ಸಂಸ್ಕೃತಿ” ಎಂಬ ಪುಸ್ತಕದಲ್ಲಿಯೂ ಕಾಣುತ್ತವೆ.
ಸುಬ್ಬನಿಗೆ ಶ್ರದ್ಧಾಂಜಲಿಯಾಗಿ ಮುಳಿಯರು ಬರೆದ 'ಎದೆಯಾರತಿ' ಎಂಬ ಪದ್ಯದಲ್ಲಿ-(ಪುಟ 119)
ತಿರಿದುಂಬ ಪರದೇಶಿಯಾನೆನಂತ
ಹಾಡೆ ಬೆನಕನೆದೆ ಹೊಸರಿತ್ತು
ದೇಶವೇನು ಪರದೇಶವನಖಿಳ
ದೇಶವೊಲೆಯಿಂ ಹರಗತ್ತು
ಎಂಬಲ್ಲಿ ಮುಳಿಯರ ಬಾಳಿಗೆ ಸುಬ್ಬನ ವ್ಯಕ್ತಿತ್ವದ ಸಾಮ್ಯ, ಸಾಧನೆಗಳೆರಡ ರಿಂದಲೂ ಸ್ಪೂರ್ತಿ ಬಂದು ವೇದ್ಯವಾಗುತ್ತದೆ. ಅನಂತರಂಗದಿನಿಂದು ಹಾಡು ಮಾನಸಂ ದಿಂತಣಿಗೆ ಕನ್ನಡ ನಾಡಂ' ಎಂದಿರುವುದು ಅವನಿಗೆ ಒಪ್ಪಿಸಿದ ಅರ್ಹ ಶ್ರದ್ಧಾಂಜಲಿಯಾಗಿದೆ.