ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ
137

—ಮೂಲಕಾವ್ಯ
—ಕನ್ನಡಕಾವ್ಯ
—ರಂಗ ಪರಂಪರೆ
—ಪ್ರತಿಭೆ ಸಂಸ್ಕಾರ
—ಪ್ರಸಂಗ ಕಾವ್ಯ
|
ಕಾಲ/ಅರ್ಥದಾರಿ/ಸಮಾಜ

—ಪ್ರೇಕ್ಷಕ

—ಇಷ್ಟು ಜೀವಂತ ಅಂಶಗಳನ್ನು ದುಡಿಸಿ, ಸಪ್ರಮಾಣವಾಗಿ ಎರೆದು ಅವನ 'ಅರ್ಥಪಾಕ' ಸಿದ್ಧವಾಗಬೇಕು. ಪುರಾಣದ ಘಟನೆಗಳಿಗೆ, ಕಾವ್ಯ ಸಂದರ್ಭಗಳಿಗೆ ಹೊಸ ಹೊಸ ಅರ್ಥಕಲ್ಪನೆಗಳು ಕಾಲಕಾಲಕ್ಕೆ ಬೆಳೆದು ಬಂದಿದ್ದು, ಈಚೆಗಿನ ವರ್ಷಗಳಲ್ಲಿ ಇದು ಬಹಳ ತೀವ್ರ ಮತ್ತು ವಿಚಿತ್ರ ವೈವಿಧ್ಯಗಳನ್ನು ತೋರಿಸಿದೆ.

ಪುರಾಣಗಳು ಪ್ರತಿಪಾದಿಸುವ ಆಶಯಗಳು, ಮೌಲ್ಯ ಸಂದರ್ಭಗಳನ್ನು ಇಂದಿನ ಅರ್ಥದಾರಿ ಇಂದಿಗೆ ಸಂಗತವಾಗಿ, ಪ್ರಸ್ತುತವಾಗಿ (Relevant) ಬಳಸಬಹುದು ಎಂಬುದಕ್ಕೆ ಕೆಲವೊಂದು ಸನ್ನಿವೇಶಗಳನ್ನು ನೋಡಬಹುದು. ಕರ್ಣಪರ್ವದಲ್ಲಿ, ಶಲ್ಯ-ಕೌರವ ಸಂವಾದದಲ್ಲಿ, ಶಲ್ಯನು ಕರ್ಣನ ಬಗೆಗೆ ಜಾತಿಯನ್ನೆತ್ತಿ ಆಕ್ಷೇಪಿಸುತ್ತಾನಷ್ಟೆ. ಇಲ್ಲಿ, ಶಲ್ಯನರಿ ಸಂಪ್ರದಾಯದ, ದುರಧನನು ಪ್ರಗತಿಯ ಧೋರಣೆಯ ವಕ್ತಾರರಾಗಬಹುದು, ಶಲ್ಯನು ವರ್ಣಾಶ್ರಮವನ್ನು ಗಂಭೀರವಾಗಿ ಸಮರ್ಥಿಸಿದಾಗ ಕೂಡ, ಒಂದು ಮಟ್ಟದಲ್ಲಿ ಅದು ವಿಡಂಬನೆಯ ಆಗಬಹುದು. ಹರಿಶ್ಚಂದ್ರ-ಮಾತಂಗ ಕನೈಯರ ಸಂವಾದ, ಕರ್ಣ-ಶಲ್ಯ, ಏಕಲವ್ಯ-ದ್ರೋಣ ಇವೂ ಇಂತಹ ಸಂದರ್ಭಗಳೇ, ವೈಚಾರಿಕ ರಂಗದಲ್ಲಾದ ಬೆಳವಣಿಗೆ ಪ್ರಕಾಶಿತವಾದ ಸಾಹಿತ್ಯ—ಇವೆಲ್ಲ ಇಲ್ಲಿ ಅರ್ಥದಾರಿಯ ನೆರವಿಗಿವೆ. ಕೃಷ್ಣನಂತಹ ಒಂದು ಪಾತ್ರ, ಹೆಚ್ಚಿನ ಸಂದರ್ಭ