ಈ ಪುಟವನ್ನು ಪ್ರಕಟಿಸಲಾಗಿದೆ
138
ಮಾರುಮಾಲೆ

ಗಳಲ್ಲಿ, ತನ್ನ ಕಾಲಕ್ಕಿಂತ ತುಂಬ ಮುಂದೆ ಹೋಗಿ, ಮುನ್ನೋಟದಿಂದ ಮಾತಾಡಬಹುದಾದ ಒಂದು ಪಾತ್ರ. ಭೀಷ್ಮನು ಅಭಿವ್ಯಕ್ತಿಸುವ, ಕುಲ ವೃದ್ಧನೊಬ್ಬನ ಇಕ್ಕಟ್ಟುಗಳು,ನೋವುಗಳು ಅತ್ಯಂತ ಸಮಕಾಲೀನ ಕೌಟುಂಬಿಕ, ಸಾಮಾಜಿಕ ಅನುಭವವನ್ನು ತೆರೆದಿಡುವ ಅವಕಾಶ ನೀಡುತ್ತವೆ.

ಇನ್ನೊಂದು ಸಂದರ್ಭವನ್ನು ನೋಡಿರಿ. ಸುಭದ್ರಾರ್ಜುನದಲ್ಲಿ ಬಲರಾಮನು, ಅರ್ಜುನನನ್ನು (ಸನ್ಯಾಸಿ) ಯತಿಯೆಂದೇ ಪೂಜಿಸುತ್ತಾನೆ. ಇಲ್ಲಿ, ಉದ್ದೇಶಿಸಿದರೆ, ಇದು ಒಂದು ಒಳ್ಳೆಯ ವಿಡಂಬನೆ ಆಗಬಹುದು. ಪಾತ್ರ ಧಾರಿಗಳು, ಪುರಾಣದಲ್ಲಿರುವ, ಮುಗ್ಧ ಶ್ರದ್ಧೆಯನ್ನೆ ಮುಂದಿಟ್ಟು ಈ ಭಾಗದಲ್ಲಿ ಮಾತಾಡಿದಾಗಲೂ, ಇದು ಪ್ರೇಕ್ಷಕನಲ್ಲಿ ಯತಿಗಳ ಬಗೆಗಿನ ಅತಿ ಭಕ್ತಿಯ ವಿಡಂಬನವಾಗಿಯೇ ಮರು ಹುಟ್ಟು ಪಡೆಯುವುದು. ಇದನ್ನೆ ಪ್ರೇಕ್ಷಕ ಸಂದರ್ಭ ಅಥವಾ ಪ್ರೇಕ್ಷಕ ನಿರೀಕ್ಷೆ ಎಂದು ಮೇಲೆ ಹೆಸರಿಸಿದುದಾಗಿದೆ.

ಇಂತಹ ಪ್ರೇಕ್ಷಕ ನಿರೀಕ್ಷೆ ಎಂಬುದು, ಸದಾ ಇದ್ದೇ ಇದೆ.ಅದು ನೂತನ ಪ್ರಯೋಗ ದೃಷ್ಟಿಯುಳ್ಳ ಕಲಾವಿದನಿಗೆ, ಒಂದು ಬಗೆಯ ತೊಡಕೂ ಆಗಬಹುದು. ಇಲ್ಲಿ ಕಲಾವಿದ, ರಿಸ್ಕ್ ತೆಗೆದುಕೊಂಡು, ಕೆಲಸ ಮಾಡಬೇಕಾಗು ತ್ತದೆ. ಕೆಲವು ವಿವೇಚನೆಗಳೂ, ವಿಚಾರಗಳೂ 'ಪುರಾಣಕ್ಕೆ ವಿರುದ್ಧ “ಧಾರ್ಮಿಕ ಶ್ರದ್ಧೆಗೆ ಪ್ರತಿಕೂಲ' ಅನ್ನಿಸಬಹುದು.ಆದರೆ ಅದು ನಿಜವಾಗಿ ಸೃಷ್ಟಿಶೀಲವಾಗಿದ್ದಾಗ, ಕಲಾವಿದ ಅದನ್ನು ಪ್ರಯೋಗಿಸಬೇಕಾದುದೇ, ಪ್ರೇಕ್ಷಕನ ಅಂಗೀಕಾರ, ನಿಧಾನವಾಗಿಯಾದರೂ, ಅದರ ಪರವಾಗಿ ಬರುತ್ತದೆ.

ಪುರಾಣದ ಘಟನೆಗಳಿಗೆಲ್ಲ ನಾವು ಈಗ ವೈಚಾರಿಕತೆಯೆಂದು ನಂಬಿ ಹೇಳುತ್ತಿರುವ, ತರ್ಕದೃಷ್ಟಿಯಿಂದಲೇ ವ್ಯಾಖ್ಯೆ ನೀಡುತ್ತ ಹೋಗಬೇಕೆಂದು ನಾನು ಪ್ರತಿಪಾದಿಸುತ್ತಿಲ್ಲ. ಪುರಾಣಕ್ಕೆ, ಜಾನಪದ ಕಥಾ ಪ್ರಪಂಚಕ್ಕೆ ತನ್ನದೇ ಆದ ಅಭಿವ್ಯಕ್ತಿ ವಿಧಾನವಿದೆ, ತನ್ನದಾದ 'ಭಾಷೆ' ಇದೆ. ಅದು ರೂಪಕ ವಿಧಾನ, ಅದ್ಭುತ ಕಲ್ಪನೆ, ಅಸಂಭವ ದರ್ಶನ ಮುಂತಾದುದು ಏನೂ ಇರ ಬಹುದು. ಅರ್ಥದಾರಿಯು ಪುರಾಣದ ಪುರಾಣ ಸ್ವರೂಪವನ್ನಿಟ್ಟುಕೊಂಡೇ ಪ್ರಯೋಗ ಶೀಲನಾಗಲು ಸಾಧ್ಯವಿದೆ. ಶಾಪ, ವರ, ಕರ್ಮ, ಮುಕ್ತಿ, ದಾನ,