ಈ ಪುಟವನ್ನು ಪ್ರಕಟಿಸಲಾಗಿದೆ
ಮಾಲತೀ

"ದುಲ್ಲ ಹಜಣಅಣುರಾಜ ಲಜ್ಞಾ ಗುರುಇವರನ್ನಸೋಅಪ್ಪಾ |
ವಿಅಸಹಿ ವಿಸಮಂಪೆಮ್ಮಂ ಮರಣಂ ಸರಣಂ ಣವರಿಅಮೆಕ್ಕಂ ‖

ಇಷ್ಟು ಓದಿ ಅದರ ಅರ್ಥವನ್ನು ಹೇಳುತ್ತಿದ್ದಾಗ ಅವನ ದೃಷ್ಟಿಯು ಶೋಭ ನೆಯಮೇಲೆ ಬಿದ್ದಿತು. ನೋಡಲಾಗಿ ಅವಳ ಕಣ್ಣುಗಳಲ್ಲಿ ಎರಡು ಬಿಂದು ಕಣ್ಣೀರು ಬಂದಿದ್ದಿತು. 'ಯುವಕನು, ಶೋಭನೆ ! ಇದ್ದ ಹಾಗೆ ಪದ್ಮಸದೃಶನಯನದಲ್ಲಿ ತಿಶಿರಶೋಭಾ ! ಶ್ಲೋಕಾರ್ಥವು ಮನದಲ್ಲಿ ನಾಟಿದಂತಿದೆ' ಎಂದನು.

ಶೋಭನೆಯು ಬೆಚ್ಚಿ, ಆವ ಶ್ಲೋಕವೆಂದು ಕೇಳಿದಳು.
ಶೋಭನೆಯು ಶ್ಲೋಕವನ್ನು ಕೇಳುತ್ತಿರಲಿಲ್ಲ.ಅನ್ಯಮನಸ್ಕಳಾಗಿ ಬೇರೆ ಚಿಂತೆಯಲ್ಲಿ ಮುಳುಗಿದ್ದಳು. ಯುವ-ನು ಓದುವುದು ಮುಂದಕ್ಕೆ ಸಾಗಲಿಲ್ಲ. ಪುಸ್ತಕವನ್ನು ಮುಚ್ಚಿಟ್ಟು ಶೋಭನೆಯನ್ನು ಹತ್ತಿರ ಎಳೆದುಕೊಂಡು, “ಶೋಭನೆ! ನಿನ್ನ ಮೊದಲ ನಗುವೆಲ್ಲಿ ಹೋಯಿತು? ಮದುವೆಗೆ ಮೊದಲು ನಾನು ನಿಮ್ಮ ಮನೆಗೆ ಬಂದಿದ್ದಾಗ ನಿನ್ನ ಮುಖವು ಹರ್ಷದಿಂದ ಅರಳಿದ್ದಂತಿರುವುದು. ಈಚೆಗೆ ಆ ಭಾವವು ಕಾಣುವುದಿಲ್ಲವೇಕೆ? ನೀನು ಸರ್ವದಾ ವ್ಯಸನಾಕಾಂತೆಯಾಗಿರುವಂತೆ ತೋರುತ್ತದೆ. ಕೇಳಿದರೆ ಹೇಳುವುದಿಲ್ಲ. ಶೋಭನೆ! ನನ್ನನ್ನು ಮದುವೆಯಾದುದಕ್ಕೆ ಅನುತಾಪವೇನಾದರೂ ಹುಟ್ಟಿತೆ?' ಎಂದು ಕೇಳಿದನು.

ಶೋಭನೆಯ ಕಣ್ಣುಗಳಿಂದ ಧಾರೆಯಾಗಿ ನೀರು ಹರಿಯಿತು. ಅವಳು ಗದ್ದ ದಸ್ಯರದಿಂದ, 'ನನ್ನ ಸರ್ವಸ್ವನೆ ! ನಿನ್ನನ್ನು ಮದುವೆಯಾಗಿ ನನಗೆ ಅನುತಾಪವೆ! ನಿನ್ನೊಂದಿಗೆ ನರಕವಾಸವೂ ಅನುತಾಪಕ್ಕೆ ಕಾರಣವಾಗದು ! ಅದೂ ನನ್ನ ಪಕ್ಷಕ್ಕೆ ಸ್ವರ್ಗವಾಗಿರುವುದು! ನಿನ್ನನ್ನು ಮದುವೆಯಾದುದಕ್ಕೆ ನನಗೆ ಅನುತಾಪವುಂಟೆ? ಆದರೆ:-

ಯುವಕ-'ಅವರೆ,' ಏನು? ಹೊಟ್ಟು, ಶೋಭನೆ! ನಿನ್ನ ಭಾವವನ್ನು ನೋಡಿದರೆ ನನಗೆ ಉಂಟಾಗುವ ಯಾತನೆಯನ್ನು ನೀನು ತಿಳಿಯುವವಳಾದರೆ:-

ಮಾತು ಶೋಭನೆಯ ಮನಕೆ ತಟ್ಟಿತು, ಅವಳು ವ್ಯಥೆಯಿಂದ, 'ನನ್ನಿಂದೇನಾಗಿದೆಯೋ ನಾನದನ್ನು ಅರಿಯೆನು - ಆದರೆ ನನ್ನನ್ನು ಮದುವೆಯಾಗಿ ನೀವು ಸುಖ ಪಡಲಿಲ್ಲ' ವೆಂದಳು.