ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ ಯುವಕ-ಶೋಭನೆ! ಅದು ಎಂತಹ ಮಾತು! ನಾನು ಅಸುಖಿಯಾಗಿ ದ್ದುದು ನಾನು ನಡೆಯಿಸಿವಾವ ಕಾರ್ಯದಿಂದ ಗೊತ್ತಾಯಿತು? ನಾನು ನುಡಿ ದಾವ ಮಾತಿನಿಂದ ಗೊತ್ತಾಯಿತು? ಅಥವಾ ನಾನು ತೋರಿದಾವ ಭಾವದಿಂದ ತಿಳಿದೆ? ಶೋಭನೆಯು ತನ್ನ ಸೀರೆಯ ಸೆರಗನ್ನು ಎಡದಕೈಯಲ್ಲಿ ಹಿಡಿದು ಕೊಂಡು ಬಲದ ಕೈಬೆರಳುಗಳಿಂದ ಸೆರಗಿನ ತುದಿಯ ನೂಲನ್ನು ಹುರಿಮಾ ಡುತ್ತ, ಮುಖತಗ್ಗಿಸಿಕೊಂಡು, ಮಧ್ಯೆ ಮಧ್ಯೆ ಉಗುಳುಗುತ್ತ ಹೀಗೆಂದು ಹೇಳಿದಳು:-'ನಾಥ! ನನ್ನನ್ನು ಮದುವೆಯಾಗಿ ಸುಖಪಡುವುದಕ್ಕೆ ನನ್ನಲ್ಲಿ ಗುಣವೇನಿದೆ? ನಾನೇನು ರೂವಂತೆಯೆ ? ಸಾಯುವತನಕ ನಿಂತು ನಃ ಯುವ ರೂಪವೇನಿದೆ? ರೂಪವಿಲ್ಲದಿದ್ದರೂ ಗu೯೯ವಾದರೂ ಇದ್ದರೆ ಆದ ರಿಂದ ಮೋಹಗೊಳಿಸಬಹುದು. ಅಂತಹ ಗುಣವೂಇಲ್ಲ ಸ್ವಲ್ಪ ವಿದ್ಯೆಯಾ ದರೂ ಬಂದಿದ್ದರೆ, ನಿಮ್ಮ ಸಂಗಡ ಚತುರೆಯಾಗಿ ಮಾತಾಡಿ ನಿಮ್ಮ ಮನಸ್ಸನ್ನು ಸಂತೋಷಪಡಿಸಬಹುದಾಗಿದ್ದಿತು ಅಂತಹ ವಿದ್ಯೆಯ ನನಗೆ ಇಲ್ಲ; ವಿದ್ಯ ವಿಲ್ಲದವಳ ಸಂಗಡ ಮಾತಾಡುವುದಕ್ಯಾರಿಗಾದರೂ ಬೇಸರವುಂಟಾಗುತ್ತದೆ ನಿಮ್ಮಂತಹ ವಿದ್ಯಾವಂತರಿಗೆ ನಾನು ತಕ್ಕವಳೆ !ನಾನು ಪೆದ್ದು ಹೆಣ್ಣು - ಬರೆದೆ ದುವುದರಲ್ಲಿ ನಿಮಗಾವ ಸಹಾಯವಂ ಮಾಡಬಲ್ಲೆನು? ಈಡುತಾದ ಹೆಂಡತಿಯಲ್ಲಿ ಬೇಗನೆ ಓದು ಬರಹಗಳನ್ನು ಕಲಿತು ನಿಮಗೆ ಸಂತೋಷ ವುಂಟುಮಾಡಬೇಕೆನ್ನುವುದಕ್ಕೆ ಅಂತಹ ಸೂಕ್ಷ್ಮವಾದ ಬುದ್ದಿಯ ಎನ ಗಿಲ್ಲ -ಆವ ಭಾಗದಲ್ಲಿಯೂ ನಿಮಗೆನ್ನಿಂದ ಸಹಾಯವಿಲ್ಲ ಆದಾಯವು ಮೊದ ಲೇ ಇಲ್ಲಿ ನಿಮಗೆ ಸಂಗೀತವನ್ನು ಕೇಳುವುದಕ್ಕೆ ಎಷ್ಟೋ ಅನೆ, ನನ್ನ ಗಂಹ ಚಾರಕ್ಕೆ ನನಗಾವ ಸಂಗೀತವೂ ಬರದು-ಸರಿಯಾಗಿ ಎರಡು ಹಸೆಗೆ ಕರೆಯು ಹಾಡೂ ಬರದು-ನೀವಾವದನ್ನು ಕಂಡು ನನ್ನಲ್ಲಿ ವಿಶ್ವಾಸವುಳ್ಳವರಾಗಬೇಕು ರೂಪವಿಲ್ಲ, ಗುಣವಿಲ್ಲ, ವಿದ್ಯೆಯಿಲ್ಲ, ಬುದ್ಧಿಯಲ್ಲಿ ಅವರದಲ್ಲಿಯ ನಿಮಗೆ ಯೋಗೈಯಾದವಳಲ್ಲ ಯೋಗ್ಯತೆಯು ಹಾಗಿರಲಿ-ಕಡೆಗೆ ನಿಮ್ಮ ಮನೆಯ ಕಸವನ್ನು ಗುಡಿಸುವವಳು ನಿಲ್ಲುವ ಸ್ಥಳದಲ್ಲಿ ನಿಲ್ಲುವುದಕ್ಕೂ ನಾನು ತಕ್ಕವಳಲ್ಲ. ನಾನು ತಮಗೆ ತಕ್ಕವಳಲ್ಲವೆಂದು ಪ್ರತಿನಿಮಿಷದ