ಈ ಪುಟವನ್ನು ಪ್ರಕಟಿಸಲಾಗಿದೆ
ಎರಡನೆಯ ಪರಿಚ್ಛೇದ
೧೧

ತನೆಗಳನ್ನೆಲ್ಲಾ ಸ್ಪಷ್ಟವಾಗಿ ಹೇಳುವೆನು. ನನ್ನ ಅಪರಾಧವು ಕ್ಷಮಿಸತಕ್ಕುದುದಾಗಿದ್ದರೆ ಕ್ಷಮಿಸಬಹುದು, ಇಲ್ಲವಾದರೆ ತಾವೇ ದಂಡಿಸಬಹುದು. ನನ್ನ ಪ್ರಾಣವು ತಮ್ಮ ಕೈಯಲ್ಲಿದೆ, ನಾಥ ! ನನ್ನ ಹೃದಯದಲ್ಲಿ ಅಗ್ನಿಯ ಜ್ವಾಲೆಯು ಉರಿಯುತ್ತದೆ. ದೇವರಂತಿರುವ ನಿಮ್ಮಂತಹ ಸ್ವಾಮಿಯನ್ನು ಪಡದಿದ್ದರೂ ನನ್ನ ಮನಸ್ಸಿನ ದೋಷದಿಂದ ನಾನು ಸುಖಪಡಲಾರದವಳಾಗಿದ್ದೇನೆ. ನೀವು ನನ್ನನ್ನು ಪ್ರೀತಿಸುವುದಿಲ್ಲವೆಂದು ನನ್ನ ಮನಸ್ಸಿಗೆ ತೋರುತ್ತದೆ, ನೀವು ಮಾಹಿತಿಯನ್ನು —' ಎಂದು ಮುಂತಾಗಿ ಹೇಳುತ್ತಿದ್ದ ಶೋಭನೆಗೆ ಬಾಯಲ್ಲಿ ಮುಂದಕ್ಕೆ ಮಾತು ಹೊರಡಲಿಲ್ಲ. ಲಜ್ಜೆಯಿಂದಲೂ ಕಷ್ಟದಿಂದಲೂ ಅನುತಾಪದಿಂದ ಮಾತು ನಿಂತುಹೋಯಿತು.

ಯುವಕನು ಅವಳ ನುಡಿಗಳನ್ನು ಕೇಳಿ ಆಶ್ಚರ್ಯಪಟ್ಟನು. ಅವಳ ಮನಸ್ಸಿನ ಭಾವವು ಅವನಿಗೆ ಪೂರ್ತಿಯಾಗಿ ಗೊತ್ತಾಗಲಿಲ್ಲ. ಅವಳನ್ನು ಮೆಲ್ಲನೆ ಎಬ್ಬಿಸಿ, - ಶೋಭನೆ ! ಏನನ್ನು ಹೇಳಿದೆ ? “ ಮಾಲತಿಯನ್ನು ” ಎಂದು ಹೇಳಿ ಸುಮ್ಮನಾದೆ— " ಮಾಲತಿಯನ್ನು ” ಏನು ? ” ಎಂದು ಕೇಳಿದನು.

ತೋಭನೆ—(ಮೆಲ್ಲ ಮೆಲ್ಲನೆ) ಪ್ರೀತಿಸುತ್ತೀರಿ. ಯುವಕ—(ಅಶ್ಚರ್ಯದಿಂದ) ಮಾಲತಿಯನ್ನು ಪ್ರೀತಿಸುತ್ತೆನೆಯೆ ! ಅಯ್ಯೋ ! ಕರ್ಮವೇ ! ಮಾಲತಿಯೆನಗೆ ಒಡಹುಟ್ಟಿದವಳಾಗದಿದ್ದರೂ ಅವಳನ್ನು ನನ್ನ ತಂಗಿಯಂತೆ ಪ್ರೀತಿಸುತ್ತೇನೆ. ಅವಳನ್ನು ಚಿಕ್ಕಂದಿನಿಂದಲೂ ಪ್ರೀತಿಸುತ್ತಿದ್ದೇನೆ.

ಆ ಮಾತಿನಮೇಲೆ ಶೋಭನೆಗೆ ಮಾತಾಡಲು ಧೈರ್ಯವುಹುಟ್ಟಿ, ಒರಸಾದ ಸ್ವರದಿಂದವಳು, ‘ಆ ಪ್ರೀತಿಯನ್ನು ಕುರಿತು ಹೇಳಲಿಲ್ಲ; ನನಗಿಂತಲೂ ಅವಳಲ್ಲಿ ಹೆಚ್ಚು ಪ್ರೀತಿ, ಪ್ರೇಮಪರಸ್ಪರವಾದ ಒಲಮೆ!’ ಎಂದಳು.

ಪ್ರೇಮದ ಬಲಮೆಯೆ! ಯುವಕನು ಮಾತಿಲ್ಲದವನಾದನು. ಅಷ್ಟು ಹೊತ್ತಾದ ಬಳಿಕ ಹೆಂಡತಿಯ ಮನಸ್ಸನ್ನು ಕಂಡುಹಿಡಿದನು. ಅತಿಕಷ್ಟದಿಂದ ಸ್ವಲ್ಪ ನಕ್ಕು, ‘ಶೋಭನೆ! ಹಾಗಿದ್ದರೆ ಮಾಲತಿಯನ್ನು ಮದುವೆ ಮಾಡಿಕೊಳ್ಳ ಲಾರೆನಾಗಿದ್ದೇನೆ? ನಿನ್ನನ್ನು ಮದುವೆ ಮಾಡಿಕೊಂಡೆನೇಕೆ?” ಎಂದು ಹೇಳಿದನು.