ಈ ಪುಟವನ್ನು ಪ್ರಕಟಿಸಲಾಗಿದೆ
೧೦
ಮಾಲತೀ

ಲ್ಲಿಯೂ ವ್ಯಕ್ತವಾಗುತ್ತಿದೆ. ಮೊದಲು ಮೊದಲು, ರೂಪ, ಗುಣ, ವಿದ್ಯಾ ಬುದ್ದಿ, ಅವಾವದಿಲ್ಲದಿದ್ದರೂ ನಾನು ಮಾಡುವ ಸೇವೆಯಿಂದಾದರೂ ತಮ್ಮ ಪ್ರೀತಿಗೆ ಪಾತ್ರಿಯಾಗಬೇಕೆಂದು ಯೋಚಿಸಿಕೊಂಡಿದ್ದೆನು; ಆದರೆ ಆ ಪ್ರೀತಿಗೂ ನಾನು ಭಾಗಿಯಾಗಿಲ್ಲ— ಅದು ನನ್ನ ಹಣೆಯಲ್ಲಿ ಬರೆದಿಲ್ಲ—

ರಮೇಶನು ಎಲ್ಲವನ್ನೂ ಮೌನವಾಗಿ ಕೇಳಿದನು. ಶೋಭೆನೆಯು ಹೇಳಿದುದು ಪೂರೈಸಿದ ಬಳಿಕ, ಅವನು ಸ್ವಲ್ಪ ನಕ್ಕು, ಶೋಭನೆ! ನೀನು ವಿದ್ಯೆಯಲ್ಲಿಯೂ ಬುದ್ದಿಯಲ್ಲಿಯೂ ನನಗೆ ಸಮಕಕ್ಷಿಯಲ್ಲವೆಂದು ಹೇಳಿದವರಾರು? ನೀನೀಗ ಹೇಳಿದ ವಿಷಯವಾಗಿ ಎಷ್ಟು ಮಂದಿ ಪುರುಷರು ನಿನ್ನಂತೆ ಭಾಷಣೆಯಂ(Lecture)ಮಾಡಬಲ್ಲರು? ನಿನ್ನ ರೂಪದ ವಿಚಾರದಲ್ಲಾದರೋ——ಅದನ್ನು ಕುರಿತು ವಿಚಾರಮಾಡತಕ್ಕವನು ನಾನು——ನೀನಲ್ಲ. ನಿನಗದು ಅಸಮಾಧಾನಕ್ಕೆ ಕಾರಣವಾಗಿದ್ದರೆ ಅಂತಹ ಅಸಮಾಧಾನಕ್ಕೆ ಕಾರಣವೇ ಇಲ್ಲ. ಶೋಭನೆ ! ನಾನು ಹುಡುಗಾಟವಾಗಿ ಹಾಸ್ಯಕ್ಕೆ ಹೇಳುವುದಿಲ್ಲ. ರೂಪದಲ್ಲಿಯೂ ಗುಣದಲ್ಲಿಯೂ ಅವ ದೇವತೆಯೂ ನಿನಗೆ ಸಮನಲ್ಲ. ಅದನ್ನು ನಾನು ಬಲ್ಲೆನು. ಎಂತಹ ದೇವಿಯು ಸ್ವರ್ಗದಿಂದಿಳಿದು ಬಂದು ನಿಂತರೂ ನಿನಗೆ ಬದಲಾಗಿ ಅವಳನ್ನು ಸಾಟಿಮಾಡಿ ಕೊಳ್ಳಲಾರೆನು. ನೀನು ನನ್ನ ಹೃದಯೇಶ್ವರಿ—— ನಿನ್ನನ್ನು ಬಿಟ್ಟರೆ ನನಗೆ ಪ್ರಪಂಚವೇ ಬೇಕಾಗುವುದಿಲ್ಲ. ನೀನೆನಗೆ ಸರ್ವಸ್ವಳು. ನೀನೆನ್ನ ಸುಖದ ಪ್ರತಿಮೆ ! 'ಎಂದು ಮುಂತಾಗಿ ಹೇಳಿದನು.

ಹರುಷಾತಿಶಯದಿಂದ ಕೊನೆಯ ಬಾಯಲ್ಲಿ ಮಾತು ಹೊರಡಲಿಲ್ಲ. ಹಾಗಾದರೆ ಅವಳು ಹೇಳಿದುದೆಲ್ಲಾ ಮನಸ್ಸಿನ ಭ್ರಾಂತಿಯಿಂದ ಕಲ್ಪಿತವಾದುದೆ? ಶೋಭನೆಯು ಗಂಡನ ಪಾದುಗಳಿಗೆರಗಿ, ನಾನು ಪಾಸಿಷ್ಟೆ ನರಕದಲ್ಲಿಯೂ ನನಗೆ ಸ್ಥಾನವಿರದು; ಅದು ಕಾರಣ ತಮ್ಮಂತಹ ಸ್ನೇಹಸರಿಪೂರ್ಣರಾದ ಸ್ವಾಮಿಯಲ್ಲಿ ಸಂಶಯ ಮನಸ್ಸುಳ್ಳವಳಾದೆನು. ನನಗಾವ ಪ್ರಾಯಶ್ಚಿತ್ತವಾಗಬೇಕೋ ಅದನ್ನು ಹೇಳಲಾರೆನು, ಆದರೆ ಇಂದೆನ್ನ ಮನಸ್ಸನ್ನು ಬಿಚ್ಚಿ ಎಲ್ಲವನ್ನೂ ಹೇಳಬೇಕೆಂದು ಇರುವೆನಾದುದರಿಂದ ಬಾಯಿ ಬಿಟ್ಟು ಹೇಳಿಬಿಡುವೆನು. ನಾನು ಮೌನವಾಗಿ ಅನುಭವಿಸುವ ನರಕಯಾ