ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಮಾಲತೀ MMANAAMAANAMANNAAAAAMAAAAAAAAAAAAAAAAAAAAAAAAAAMA, ಒ ವ ನಡೆದ ಸಮಾಚಾರಗಳಾವದನ್ನೂ ಮಾಲತಿಯು ಅರಿಯಳು. ಸಣ್ಣ ದಾದಾ ಪ್ರಪಂಚದಲ್ಲಿ ಅವಳಿಗೆ ಸಲುವಾಗಿ ನಡೆದಿದ್ದ ರಾಜ್ಯಪರಿವರ್ತನೆಗಳಾ ವದನ್ನೂ ಅವಳು ಅರಿಯಳು. ಅದುಕಾರಣ ಅವಳ ನಗುಮೊಗದಲ್ಲಾವಾ ಗಲೂ ನಗುವು ತುಂಬಿದ್ದಿತು. ಆದರೆ ಆ ಮನೆಯ ಅಂಧಕಾರವು ಒಂದೊಂದು ತಡವೆ ಆ ಜೊನ್ನೆ ಜೊಂಪಲ ಬೊಂಬೆಯನ್ನೂ ಸ್ಪರ್ಶ ಮಾಡುತ್ತಿರುವುದು. ಶೋಭನೆಯು ಮೊದಲಿನಂತೆ ತೋಟದಲ್ಲಿ ಮಾಲತಿಯೊಡನೆ ಉಲ್ಲಾಸದಿಂದ ತಿರುಗಾಡಳು, ಮೊದಲಿನಂತೆ ಕಣ್ಣುಮುಚ್ಚಾಲೆ ಆಟದಲ್ಲಿ ಗಂಡನಹಿಂದೆ ಹೋಗಿ ಬಚ್ಚಿಟ್ಟುಕೊಂಡು ಮಾಲತಿಯನ್ನು ಸೋಲಿಸುತ್ತಿರಲಿಲ್ಲ, ಮಾಲ ತಿಯ ಹೂವುಗಳನ್ನು ಹರಿದು ಕಿತ್ತು ಅವಳನ್ನು ಅಳುವಹಾಗೆ ಮಾಡುತ್ತಿರ ಅಲ್ಲ, ಕದವಿನ ಹಿಂದೆ ಮೂಲೆಯಲ್ಲಿ ಅವಿತುಕೊಂಡು ಮಾಲತಿಯನ್ನು ಹೆದ ರಿಸುತ್ತಿರಲಿಲ್ಲ, ರಾತ್ರಿ ಗಂಡನ ಸಂಗಡ ಮಾತಾಡಿದುದನ್ನೆಲ್ಲಾ ಮಾಹಿತಿಗೆ ಹೇಳಿ ಅವಳನ್ನು ನಗುಸುತ್ತಿರಲಿಲ್ಲ. ಶೋಭನೆಯು ಬಹಳ ವ್ಯಸನಾಕಾಂತೆ. ಶೋಭನೆಯು ತಾನುಹುಡುಗಾಟವನ್ನು ಮಾಡುವುದಿಲ್ಲವೆಂದು ಹೇಳುವಳು. ಮಾಲತಿಯು ಮಾತ್ರ ಚಿರಕಾಲವೂ ಹುಡುಗಿಯಾಗಿರಬೇಕೆ? ಚಿರಕಾ ಲವೂ ಹೀಗೇನೇ ಆಡಿಕೊಂಡಿರಬೇಕೆ? ಶೋಭನೆಯು ಹೇಳಿದ ಮಾತಿನ ಅರ್ಥವಾವದೂ ಮಾಲತಿಗೆ ಗೊತ್ತಾಗಲಿಲ್ಲ. ಮಾಲತಿಯು ಮಾತಿಲ್ಲದೆ, “ನಾನಾವಾಗಲೂ ನಗುಕೊಡದೆ ? ಆಡಬಾರದೆ ? ಹುಡುಗರು ಹೊರ್ತು ಮತ್ತಾರೂ ನಗುಕೊಡದೆ ? ಆಡಬಾರದೆ? ಮದುವೆಯಾದರೆ ನಾನೂ ಆವಾ ಗಲೂ ನಗುಬಾರದೆ?' ಎಂದು ಮುಂತಾಗಿ ಯೋಚಿಸಿಕೊಳ್ಳುವಳು. ಮಾಲ ತಿಯು ಏನನ್ನೂ ಅರಿಯದೆ, ಹುಡುಗಾಟ ಮಾಡುತ್ತ ಶೋಭನೆಯನ್ನು ನಗುವಹಾಗೆ ಮಾಡಲು ಯತ್ನಿಸುವಳು. ಅವಳಿಗೆ ಇಷ್ಟವಾದ ಹೂವುಗ ಳನ್ನು ತಂದು ಅವಳ ಮೇಲೆ ಹಾಕುವಳು. ಅದರಿಂದಲೂ ಶೋಧನೆಯ ವ್ಯಸನವುಳ್ಳ ಮುಖವು ಪ್ರಫುಲ್ಲವಾಗದುದನ್ನು ಕಂಡು, ಆಗ ಮನೆಯ ಅಂಧಕಾರದ ಛಾಯೆಯು ಅವಳ ಹೃದಯವನ್ನು ಸುರ್ಶಮಾಡುವುದು. ಶೋಭನೆಯು ನಿಜವಾಗಿಯೂ ದೊಡ್ಡ ಮನುಪೈಯಾಗಿ ಆಡದೆಲೂ ನಗು ಗೆ ಇರುವುದನ್ನು ಕಂಡು ಮಾಲತಿಯ ವ್ಯಸನಾಕಾಂಕೆಯಾಗಿ ಅಳು