ಈ ಪುಟವನ್ನು ಪರಿಶೀಲಿಸಲಾಗಿದೆ
ಎರಡನೆಯ ಪರಿಚ್ಛೇದ
೨೧

ವುದಕ್ಕೆ ಬೇರೆ ಸ್ಥಳಕ್ಕೆ ಹೊರಟುಹೋಗುವಳು. ನದಿಯ ತೀರದಲ್ಲಿ ಒಬ್ಬ ಳೇ ತಿರುಗಾಡುತ್ತ ಹೊತ್ತಾದಬಳಿಕ ಮನೆಗೆ ಬರುವಳು. ಬಂದು ರಮೇ ಶನು ಸಂತೋಷವಾಗಿದ್ದರೆ ಆನಂದಪಡುವಳು. ಹಾಗಿಲ್ಲದೆ ರಮೇಶನು ವಿಷಣ್ಣನಾಗಿದ್ದರೆ ಸಂಭೀತೆಯಾಗಿ ಯೋಚನಾಕಾತೆಯಾಗುವಳು. ದೊ ಡ್ಡವರಾಗಿ ಸಂಸಾರಿಗಳಾದ ಬಳಿಕ ಗಂಭೀರದಿಂದ ವ್ಯಸನಪಡತಕ್ಕವರು. ಹೆಂಗಸರೆಂದೂ ಗಂಡಸರುಹಾಗೆ ವ್ಯಸನಪಡತಕ್ಕವರಲ್ಲವೆಂದೂ ಮಾಲತಿಯು ತಿಳಿದಿದ್ದಳು. ಏಕೆಂದರೆ, ಶೋಭನೆಯು ಹಾಗಿರಬೇಕೆಂದು ಹೇಳಿದ್ದಳು. ಶೋ ಭನೆಯ ಹಾಗಿದ್ದುದನ್ನು ಮಾಲತಿಯು ಕಣ್ಣಾರೆ ನೋಡಿದ್ದಳು. ಹೀಗಿರುತ್ತೆ ಗಂಡಸಾದ ರಮೇಶನಿಗೆ ವ್ಯಸನವೇಕೆ? ಅವನು ಒಂದೊಂದು ತಡವೆ ವ್ಯಸನ ದಿಂದ ಊಟಮಾಡದೆ ಮಲಗಿಬಿಡುವನು, ಅದನ್ನು ನೋಡಿ ಮಾಹಿತಿಯೂ ಊಟವಿಲ್ಲದೆ ಯೋಚನೆಯಿಂದ ಮಲಗಿಬಿಡುವಳು. ರಮೇಶನು ಚೆನ್ನಾಗಿ ಉಲ್ಲಾಸದಿಂದಿದ್ದರೆ ಅವನಸಂಗಡ ಮಾತಾಡುವಳು, ವ್ಯಸನವುಳ್ಳವನಾಗಿದ್ದರೆ ಅವನ ಸಂಗಡ ಮಾತಾಡುವುದಕ್ಕೆ ಸಾಹಸವುಳ್ಳವಳಾಗುತ್ತಿರಲಿಲ್ಲ. ಒಂದು ದಿನ ರಾತ್ರಿ ಮಲಗಿರುವಾಗ ಮಾಲತಿಯು ಮನಸ್ಸಿನಲ್ಲಿ, ಅಣ್ಣನು ವ್ಯಸನ ವುಳ್ಳವನಾಗಿದ್ದರೆ ಅದಕ್ಕೆ ಕಾರಣವನ್ನು ವಿಚಾರಿಸಬೇಕೆಂದು ಯೋಚಿಸಿ ಕೊಂಡಳು. ಮಾರನೆಯ ದಿನ ರಮೇಶನು ವಿಷಣ್ಣನಾಗಿದ್ದನು. ಆದರೂ ಮಾಲತಿಯು ಅದಕ್ಕೆ ಕಾರಣವನ್ನು ವಿಚಾರಿಸುವುದಕ್ಕೆ ಧೈರ್ಯವುಳ್ಳವಳಾ ಗಲಿಲ್ಲ. ಹೀಗೆ ಅನೇಕತಡವೆ ವ್ಯಸನಕ್ಕೆ ಕಾರಣವನ್ನು ವಿಚಾರಿಸುವುದಕ್ಕೆ ಹೋಗಿ ರಮೇಶನನ್ನು ಕೇಳಲಾಗದೆ ಹಿಂದಿರುಗಿ ಬಂದು ಮನೆಯನ್ನು ಬಿಟ್ಟು ನದಿಯ ತೀರಕ್ಕೆ ಹೋಗಿ ಅಳುತ್ತ ಕುಳಿತಿರುವಳು. ಒಂದು ದಿನ ಮಾಲ ತಿಯು ನದಿಯ ತೀರದಲ್ಲಿ ಕುಳಿತು ಅಳುತಿರುವ ಸಮಯದಲ್ಲಿ ರಮೇಶನು ಹೋಗಿ ಆಶ್ಚರ್ಯದಿಂದ ವ್ಯಥೆಪಟ್ಟು ಮೆಲ್ಲ ಮೆಲ್ಲನೆ ಅವಳದ್ದೆಡೆ ಹೋಗಿ ಹಿಂದೆ ನಿಂತು ಅವಳ ಭುಜದಮೇಲೆ ಕೈಯಿಟ್ಟು, 'ಇದೇನು!ಮಾಲತಿ! ಆರೂ ಇಲ್ಲದ ಸ್ಥಳದಲ್ಲಿ ಒಬ್ಬಳೇ ಕುಳಿತು ಅಳುತ್ತಿ?” ಎಂದು ಕೇಳಿದನು. ಮಾಲ ತಿಯು ಧ್ವನಿಯಿಂದ ಗುರ್ತಿಸಿ ಹಿಂದಿರಿಗಿ ನೋಡಿದಳು. ಅವಳಿಗೆ ಹೃದಯದ ವೇಗವು ತಡಿಯಲಿಲ್ಲ. ಕಣ್ಣೀರು ಧಾರೆಯಾಗಿ ಹರಿಯಿತು. ತಾನು ಏಕೆ ಅಳು