ಈ ಪುಟವನ್ನು ಪರಿಶೀಲಿಸಲಾಗಿದೆ
೨೨
ಮಾಲತೀ

ತಿದ್ದಳೊ ಅದನ್ನು ಮಾಲತಿಯು ಅರಿತಿರಲಿಲ್ಲ. ಅಂಥವಳು ರಮೇಶನಿಗೆ ಹೇಗೆ ತಿಳಿಯಹೇಳಬಲ್ಲಳು? ರಮೇಶನು ಮೆಲ್ಲ ಮೆಲ್ಲನೆ ಕಣ್ಣೀರನ್ನೂ ರಸಿ, ಪುನಃ, * ಮಾಲತಿ: ಅಳುವುದೇಕೆ? ಶೋಭನೆಯು ನಿನ್ನನ್ನು ಹೆದರಿಸಿ ಅಳುಸಿದಳೆ?ಎಂದು ಕೇಳಿದನು.

ತೋಭನೆಯು ಮಾಲತಿಯನ್ನು ಹೆದರಿಸಿ ಅಳಸುತ್ತಿದ್ದುದನ್ನು ನೋಡಿದ್ದನು. ಮಾಲತಿಯು ಕಣ್ಣೀರ ಪ್ರವಾಹವನ್ನು ಕಷ್ಟದಿಂದ ನಿಲ್ಲಿಸಿ, * ಇಲ್ಲ-ಅವಳು ಇನ್ನು ಮೇಲೆ ಹೆದರಿಸುವುದಿಲ್ಲವಂತೆ ' ಎಂದು ವಿಷಾದ ದಿಂದ ಭಗ್ನವಾದಸ್ಸರದಿಂದ ಹೇಳುತ್ತಲೇ, ರಮೇಶನು ಚಮಕಿತನಾಗಿ, 'ಮಾ ಅತಿ! ಹಾಗಾದರೆ, ನಿನಗೆ ದುಃಖನೇಕೆ ? ಎಂದು ಕೇಳಿದನು ಮಾಲತಿಯು, “ ಶೋಧನೆಯು ಹೆದರಿಸುವುದಿಲ್ಲವೆಂದು ಹೇಳಿದುದರಿಂದಲೇ ವ್ಯಸನವೆಂದಳು. ರಮೇಶನು, " ಹಾಗಾದರೆ, ನಡೆ, ನಿನ್ನನ್ನು ಮೊದಲಿನಂತೆ ಓಡಾಡಿಸುತ್ತ ಹೆದ ರಿಸುತ್ತಿರಬೇಕೆಂದು ಕೋಭನೆಗೆ ಹೇಳುತಿರು ” ಎಂದು ಹೇಳಿದನು.

ಮಾಲತಿಯು ಏಳಲಿಲ್ಲ-ನಲಿಲ್ಲ. ವಿಷಣ್ಣ ಮನಸ್ಕಳಾಗಿ ಕುಳಿತು ಕೊಂಡು, ರಮೇಶನ ದುಃಖಕ್ಕೆ ಕಾರಣವನ್ನು ವಿಚಾರಿಸುವ ಬಗೆಯನ್ನು ಕುರಿತು ಯೋಚಿಸುತ್ತಿದ್ದಳು. ರಮೇಶನು ಪುನಃ, 'ಮಾಲತಿ! ಶೋಭನೆಯು ಹೆದರಿಸುವುದಿಲ್ಲವೆಂದು ನಿನಗೆ ದುಃಖವೊ ? ' ಎಂದು ಕೇಳಿದನು. ಮಾಲ ತಿಯು ಸಮಯವು ಸಿಕ್ಕಿತೆಂದ, ಮೆಲ್ಲ ಮೆಲ್ಲನೆ “ ದುಃಖಕ್ಕೆ ಮತ್ತೊಂದು ಕಾರಣವುಂಟು. ಅಣ್ಣ ! ನಿನಗೇನಾಗಿದೆ ? ಮೊದಲಿನಂತೆ ನೀನು ಮಾತಾ ಡುವುದಿಲ್ಲ. ನಾನೇನು ತಪ್ಪನ್ನು ಮಾಡಿದೆನು ? ” ಎಂದು ಕೇಳಿದಳು.

ಮಾಲತಿಯು ಕೇಳಿದ ಸಹಜವಾದ ಸರಳ ಪ್ರಶ್ನೆಯಿಂದ ರಮೇಶನ ಕಣ್ಣುಗಳಲ್ಲಿ ನೀರು ತುಂಬಿ ಗಲ್ಲದ ಮೇಲಿಂದ ಕಂಬನಿಯು ಹರಿದುಬಂದು ಮಾಲತಿಯ ಕೈಮೇಲೆ ಬಿದ್ದಿತು ! ಮಾಲತಿಯ ಹೃದಯವು ಸೃಂಭಿತವಾಗಿ ಮುಖವು ಬಾಡಿತು. ಮಾಲತಿಯು ತಾನೇಏನೋ ತಪ್ಪನ್ನು ಮಾಡಿ ದೇ ಕೆಂದೂ ಇಲ್ಲವಾಗಿದ್ದರೆ ಅವನ ಕಣ್ಣುಗಳಲ್ಲಿ ನೀರು ತುಂಬಲೇಕೆಂದೂ ಯೋಚಿಸಿ, ಮಾಲತಿಯು ಈ ಕೋಚವನ್ನು ಬಿಟ್ಟು, ವ್ಯಾಕುಲದಿಂದ, ( ಅಣ್ಣ : ನಾನೇನು ತಪ್ಪನ್ನು ಮಾಡಿದೆನು ? ಹೇಳು. ನಿನಗೆ ನನ್ನ ಮೇಲೆ