ಈ ಪುಟವನ್ನು ಪರಿಶೀಲಿಸಲಾಗಿದೆ



104

ಮಿಂಚು

"ಏನೂ ಪರವಾಗಿಲ್ಲ. ಹತ್ತು ಲಕ್ಷುರಿ ಟ್ಯಾಕ್ಸಿ ಕರೆತರೋದು ವಾಪಸು
ಬಿಡೋದು ಎಲ್ಲ ನನ್ನ ಜವಾಬ್ದಾರಿ."
"ನೀವೂ ಬರ್ತೀರ ?"
"ನಾನು ಬಂದರೆ ಭಾರತವಾಗ್ತದೆ, ಸೌದಾಮಿನಿ ಒಬ್ಬರಿದ್ದರೆ ಮಾತ್ರ ಅದು
ಕಿಷಿಂಧೆ."
"ಥಾಂಕ್ಸ್ ದೇವ್ಜಿ,"
ಸೌದಾಮಿನಿ ಫೆನಾ೯ಂಡೀಸ್ಗೆ ಅಂದಳು;
"ಸಿತಾರಾ ನಾಳೆಯೂ ಮಧಾಹ್ನವೇ ಬರ್ತಾಳೊ ?"
"ಸಿ.ಎಂ. ಇಲ್ಲಿ ಇರೋವರೆಗೂ ಫುಲ್ ಟೈಮ್ ದುಡಿಬೇಕೂಂತ ಹೇಳಿದೀನಿ."
"ಬುದ್ಧಿ ಓಡಿಸಿದೀರಿ, ಪರವಾಗಿಲ್ಲ, ಈ ಒಂದಿಷ್ಟು ಟಿಪ್ಪಣಿ ಬರಕೊಳ್ಳಿ."
"ಭೋಜನ ಸಂವಾದಕ್ಕೆ ಟಿಪ್ಪಣಿ, ನಾಳೆಯ ದಿನಾಂಕ ಹಾಕಿ."
ಟಿಪ್ಪಣಿ ಪುಸ್ತಕದೊಡನೆ ಫೆರ್ನಾಂಡೀಸ್ ಸಿದ್ಧನಾದ.
"ಬರಕೊಳ್ಳಿ. ಆದಿಕವಿ ವಾಲ್ಮೀಕಿ ಅಮರಗೊಳಿಸಿರುವ ನಾಡು ಕಿಷ್ಕಿಂಧೆ. ದೇಶದಲ್ಲೇ ಅತಿ ದೊಡ್ಡದಾದ ಜಲವಿದ್ಯುತ್ ಸ್ಥಾವರ. ಕಾರ್ಮಿಕ ಗಲಾಟೆಗಳಿಲ್ಲ,
ಔದ್ಯಮಿಕ ರಂಗದ ಶಾಂತಿ' ಹೇರಳ ನೀರು-ವಿದ್ಯುತ್ ಇವೆಲ್ಲ ಹೊಸ ಉದ್ಯಮ
ಸ್ಥಾಪಿಸ ಬಯಸುವವರಿಗೆ ಸ್ವಾಗತ ಕೋರುತ್ತವೆ. ಚಿತ್ರಾವತಿಯ ಉಕ್ಕಿನ ಕಾರ್ಖಾನೆ
ಜಗತ್ಪಸಿದ್ಧ, ರೇಷ್ಮೆ ಉತ್ಪಾದನೆಯಲ್ಲಿ ನಮಗೆ ಮೊದಲ ಸ್ಥಾನ."
ಬರೆದುಕೊಳ್ಳುತ್ತಿದ್ದ ಫೆರ್ನಾಂಡೀಸ್ಗೆ ಥಟ್ಟನೆ ನೆನಪಾಯಿತು.
"ಒಂದು ಸಂಗತಿ ನಾನು ನಿವೇದಿಸಬೇಕು."
"ಏನದು ?"
"ದೇಶೀಯ ವಿದೇಶೀಯ ಪ್ರವಾಸಿಗಳು ಬಂದರೆ ಕೊಡೋದಕ್ಕೇಂತ
ಕಿಪ್ಕಿಂಧೆಯ ವಾರ್ತಾ ಇಲಾಖೆ ಒಂದು ಬ್ರೋಷೂರ್ ಮಾಡಿ ಕಳಿಸಿದೆ."
"ಅದೆಂಥಾ ಬ್ರೋಷೂರ್ ? ತಂದು ತೋರಿಸಿ."
ದಾಸ್ತಾನು ಕೊಠಡಿಯಲ್ಲಿ ಸೊಗಸಾದ ವರ್ಣಚಿತ್ರಗಳಿದ್ದ ಪುಸ್ತಿಕೆಗಳ ರಾಶಿಯೇ
ಇತ್ತು. ಹತ್ತಿಪ್ಪತ್ತನ್ನು ಕೈಗೆತ್ತಿಕೊಂಡು ಉಳಿದ ರಾಶಿಗೆ ಅಲ್ಲೇ ಇದ್ದ ಗೋಣಿ
ತಟ್ಟನ್ನು ಹೊದಿಸಿದ.
ಸೌದಾಮಿನಿ ಪುಟ ಮಗುಚಿದಳು. ಕಿಷ್ಕಿಂಧೆಯ ಮೊದಲ ವಷಿ೯ಕೋತ್ಸವದ
ದಿನ ಪ್ರಕಟಿಸಿದ್ದು , ರಕ್ಷಾಕವಚದ ಮೇಲೆ ತನ್ನ ವರ್ಣಚಿತ್ರವಿದ್ದ ಇನ್ನೊಂದು
ಬ್ರೋಷೂರ್ ಮಾಡಿಸಬೇಕು. ಸದ್ಯಕ್ಕೆ ಇದು ಸಾಕು.
"ಪರಶು, ನೋಡೊ ಸ್ವಲ್ಪ,"
ಅವನು ನೋಡಿದ, ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.
ಮುಖ್ಯಮಂತ್ರಿ ಕೇಳಿದರು :