ಈ ಪುಟವನ್ನು ಪ್ರಕಟಿಸಲಾಗಿದೆ



ಮಿಂಚು

105

"ಇಲ್ಲಿನ ಪತ್ರಿಕೆಗಳಿಗೆ ಇದರ ಹಂಚಿಕೆಯಾಗಿಲ್ಲ ತಾನೆ?"
ಉತ್ತರವೀಯಲು ಫೆರ್ನಾಂಡೀಸ್ ಅನುಮಾನಿಸಿದ.
"ಹೇಳಿ. ನಿಮ್ಮನ್ನೇನೂ ಗಲ್ಲಿಗೆ ಹಾಕೋದಿಲ್ಲ."
"ಆ ಬಗ್ಗೆ ಇಲಾಖೆಯಿಂದ ನಿರ್ದೇಶ ಬಂದಿಲ್ಲ."
"ಒಳ್ಳೇದೇ ಆಯ್ತು. ನಾಳೆ ಆ ಸಂಪಾದಕ ಮಹಾಶಯರಿಗೆ ಇವನ್ನು
ಹಂಚೋಣ. ದಿನಾಂಕ ಇದೆಯೋ ನೋಡಿ."
"ಇಲ್ಲ. ವಾರ್ಷಿಕೋತ್ಸವ ಎಂದಷ್ಟೆ ಅಚ್ಚಾಗಿದೆ."
"ಸರಿ. ನಾನು ಹೇಳಿದ ಟಿಪ್ಪಣಿ ಈಗ ಟೈಪ್ ಮಾಡ್ರೀರೊ? ನಾಳೆ ಸಿತಾರಾ
ಬಂದ್ಮೇಲೆ ಟೈಪ್ ಮಾಡಿಸ್ತೀರೊ?"
"ತಮಗೆ ಹೇಗೆ ಬೇಕೋ ಹಾಗೆ."
"ನಾಳೆ ಸಾಕು. ಇನ್ನು ನೀವು ಮನೆಗೆ ಹೋಗಿ. ಮಕ್ಕಳು ಮರಿ ಎಷ್ಟು
ಜನ?"
"ಒಂದೇ. ಹೆಣ್ಣು."
"ಇನ್ನೊಂದು ಗಂಡಾಗ್ತದೇಂತ ಆಸೆ ಪಟ್ಕೊಂಡು ಮೋಸ ಹೋಗ್ಬೇಡಿ."
ಪ್ರಯತ್ನ ಆಗಲೇ ನಡೆದಿತ್ತು. ಅದನ್ನು ತಿಳಿಸುವುದು ಹೇಗೆ ?
ಸೌದಾಮಿನಿಯೇ ಅಂದಳು :
"ಒಂದು ಸಂಸಾರಕ್ಕೆ ಒಂದೇ ಮಗುವಿರಬೇಕು. ಏನು ಹೇಳ್ತೀಯಾ ಪರಶು?"
ಅವನಿಗೆ ನಾಚಿಕೆ. ಸುಮ್ಮನಿದ್ದ.
"ಮಕ್ಕಳೇ ಇಲ್ಲದವರಿಗೆ ಫಸ್ಟ್ ಪ್ರೈಜ್ ; ಒಂದು ಹೆತ್ತವರಿಗೆ ಸೆಕೆಂಡ್
ಪ್ರೈಜ್. ಇಂಥದೊಂದು ಘೋಷಣೆ ಹೊರಡಿಸಬೇಕು."
ಅಷ್ಟು ಹೇಳಿ ಮುಖ್ಯಮಂತ್ರಿ ನಕ್ಕ ಮೇಲೆ ಉಳಿದವರೂ ಫಕಫಕ ಅಂದರು.
ಇಣಿಕಿ ನೋಡಿದ ಶ್ರೀಪಾದ ವಿಷಯ ಸ್ಪಷ್ಟವಾಗದಿದ್ದರೂ ಸಣ್ಣನೆ ನಕ್ಕ.
"ಆಚಾರ್ರ ಕುಟುಂಬ ಎಷ್ಟು ದೊಡ್ಡದು?"
ಫೆರ್ನಾಂಡೀಸ್ ಉತ್ತರವಿತ್ತ :
"ಐವರು ಮಕ್ಕಳು. ಎಲ್ಲ ಹುಡುಗೀರು ದೊಡ್ಡವಳಿಗೀಗ ಹದಿನೆಂಟು."
"ಆಚಾರ್, ಈಚೆಗೆ ಬನ್ನಿ."
ಶ್ರೀಪಾದ ಎರಡು ಹೆಜ್ಜೆ ಒಳಗೆ ಬಂದು ಕೈಮುಗಿದ. ಮುಖ್ಯಮಂತ್ರಿ
ಅಂದರು :
"ನೀವೇನೂ ಯೋಚಿಸ್ಬೇಡಿ, ಎಲ್ಲರಿಗೂ ವಿದ್ಯಾಭಾಸ ಕೊಡಿಸಿ, ಯಾರಾ
ದರೂ ವರದಕ್ಷಿಣೆ ಬೇಕು ಅಂದರೆ ಪೋಲೀಸರಿಗೆ ದೂರು ಕೊಡಿ,"
ಫೆರ್ನಾಂಡೀಸ್ ಕೈಗಡಿಯಾರ ನೋಡಿದ,
"ಟೈಮ್ ಎಷ್ಟಪ್ಪ ?" ಎಂದು ಕೇಳಿದರು ಮುಖ್ಯಮಂತ್ರಿ,