ಈ ಪುಟವನ್ನು ಪ್ರಕಟಿಸಲಾಗಿದೆ



ಮಿಂಚು

107

"ಆಲ್ ದಿ ಬೆಸ್ಟ್."
"ಥ್ಯಾಂಕ್ಯೂ"
***
ಸೌದಾಮಿನಿ ಅಶೋಕ್ ಹೋಟೆಲಿಗೆ ಸ್ವಲ್ಪ ಮಟ್ಟಿಗೆ ಮಾತ್ರ ಪರಿಚಿತೆ.
ಪರಶುರಾಮ ದಿಲ್ಲಿ ವೈಭವದ ಇನ್ನೊಂದು ತುಣುಕನ್ನು ಅಲ್ಲಿ ಕಂಡು ದಂಗಾದ.
ಸಣ್ಣ ಔತಣ ಕೂಟಕ್ಕೆ ಹೇಳಿ ಮಾಡಿಸಿದಂತಿದ್ದ ವಿಶಾಲ ಕೊಠಡಿ,
ರಾಷ್ಟ್ರಪಕ್ಷದ ಮಹಾ ಕಾರ್ಯದರ್ಶಿ, ಅಭಾಸವಾಗಬಾರದೆಂದು ತನ್ನ ಪರಿ
ಚಯದ ಪತ್ರಿಕಾಮಿತ್ರನೊಬ್ಬನನ್ನು ಕಳಿಸಿದ್ದ. ಆ ಯುವಕ ಫೆರ್ನಾಂಡೀಸ್
ಪರಶುರಾಮನ್, ಸಿತಾರಾ ಜತೆ ಸೇರಿ ಬರ ತೊಡಗಿದ ಸಂಪಾದಕರನ್ನು ಸ್ವಾಗತಿಸಿದ.
ಸೌದಾಮಿನಿ ಮತ್ತು ಸಂಪಾದಕರ ಪರಸ್ಪರ ಪರಿಚಯಕ್ಕೆ ಕೈಕುಲುಕಾಟಕ್ಕೆ ಕಾರಣ
ನಾದ. ಆತನಿಂದ ಸೂಚನೆ ಬಂದೊಡನೆ 'ಬೇರಾ' ಗಳು ಪ್ರತಿಯೊಬ್ಬರ ಇಷ್ಟಕ್ಕನು
ಸಾರವಾಗಿ ಪಾನೀಯಗಳನ್ನು ತಂದರು, ನೆರವಾಗಲೆಂದು ಬಂದಿದ್ದ ಪತ್ರಕರ್ತನಿಗೆ
ಸಂಪದಿಕರ ಸಾಲಿಗೆ ಭಡತಿ ದೊರೆಯಿತು.
ಸೌದಾಮಿನಿ ಕೋಕಾಕೋಲಾ ತರಿಸಿದಳು, ಇನ್ನು ಸಂವಾದ ಮುಗಿಯವ
ತನಕ ಸಿಬ್ಬಂದಿ ಗಪ್ ಚುಪ್: ಮುಕ್ಕಾಲು ಗಂಟೆ ಕಳೆದ ಮೇಲೆ ಮೇಲೆ ಭೋಜನ
ಆರಂಭ.
ಸಂಪಾದಕರಿಗೆಲ್ಲ ನಿರಾಭರಣ ಸುಂದರಿಯಾದ ಮುಖ್ಯಮಂತ್ರಿ ಕೌತುಕದ
ವ್ಯಕ್ತಿ, ಒಬ್ಬ ಯೋಚಿಸಿದ : ಸಮ್ರಾಟ ದೇವಾನಾಂಪ್ರಿಯ ಆ ಬಗೆಯ ಸಿರಿ
ವಂತ ಭೋಜನ ಸವಿದಿರಬಹುದು. ಅಂಥವನು ಆತ್ಮ ರಕ್ಷಣೆಗಾಗಿ ಸೈನ್ಯವಿಟ್ಟು
ಕೊಂಡು, “ಇನ್ನು ಅಹಿಂಸೆ ! ಎಲ್ಲರೂ ಅಹಿಂಸೆ ಪಾಲಿಸಬೇಕು !" ಎಂದದ್ದು
ಸಹಜವೇ.
ಇನ್ನೊಬ್ಬನಿಗೆ ಅನಿಸಿತು :
"ನೋಟಕ್ಕೆ ಯೋಗಿನಿಯ ಹಾಗಿದ್ದಾಳೆ. ಬೇಟಕ್ಕೆ ? ಅಂತೂ ಈಕೆಯೂ
ದೇವಾನಾಂಪ್ರಿಯೆ ಯಾಕಾಗಬಾರದು ?"
ವಾರ್ತಾ ಛಾಯಾ ಚಿತ್ರಕಾರನೊಬ್ಬ ಬಂದು ಯಾರ ಅನುಮತಿಯನ್ನೂ ಪಡೆ
ಯುದೆ ಒಳನುಗ್ಗಿ ಹಲವು ಚಿತ್ರಗಳನ್ನು ತೆಗೆದ, "ಕುಡಿಯೋದಕ್ಕೆ ಏನಾದರೂ?"
ಎಂದು ಫೆರ್ನಾಂಡೀಸ್ ಕೇಳಿದ, "ಕ್ಷಮಿಸಿ. ಇನ್ನೊಂದು ದಿವಸ," ಎಂದು ಹೇಳಿ
ಛಾಯಾಚಿತ್ರಕಾರ ಸ್ಕೂಟರ್ ಹತ್ತಿದ.
ಫೆರ್ನಾಂಡೀಸ್ ಪರಶುರಾಮನ ಸೂಚನೆಯಂತೆ ಕಿಷ್ಕಿಂಧೆ ಬ್ರೋಷೂರ್ಗಳನ್ನು