ಈ ಪುಟವನ್ನು ಪ್ರಕಟಿಸಲಾಗಿದೆ

108

ಮಿಂಚು



ವಿತರಣೆ ಮಾಡಿದ. ಊಟ ಮುಗಿಸಿದ್ದ ಕೆಲವರು ಕಣ್ಣು ಹಾಯಿಸಿದರು, ಬೇರೆ
ಕೆಲವರು ಕೋಟಿನ ಜೇಬಿನೊಳಕ್ಕೆ ಅದನ್ನು ಇಳಿಬಿಟ್ಟರು.
"ಮುಖ್ಯಮಂತ್ರಿಜಿ, ನೋಡಿದರೇ ನಂಬಿಕೆ ಅಂತ ಮಾತಿದೆ. ಈಗ ನಿಮ್ಮನ್ನು
ನೋಡಿದೆವು. ಕಿಷ್ಕಿಂಧೆಗೆ ಶಕ್ತಿಶಾಲಿನಿಯಾದ ಮುಖ್ಯಮಂತ್ರಿ ಇದ್ದಾರೆ ಎ೦ಬುದು
ಖಚಿತವಾಯಿತು. ಕಿಷ್ಕಿಂದೆಯನ್ನು ಒಮ್ಮೆ ನಾವು ಸಂದರ್ಶಿಸಿದರೆ ನಿಮ್ಮ ರಾಜ್ಯಕ್ಕೆ
ಲಾಭ," ಎಂದ ಸಂಪಾದಕರಲ್ಲೊಬ್ಬ.
"ಎಲ್ಲ ಏರ್ಪಾಟೂ ಮಾಡ್ತೇವೆ. ನೀವೆಲ್ಲ ಒಂದು ತಂಡವಾಗಿ ಬಂದರೂ ಒಪ್ಪಿಗೆ, ಒಬ್ಬೊಬ್ಬರಾಗಿ ಸಕುಂಟುಬರಾಗಿ ಬಂದರೂ
ಸರಿ."
"ಪತ್ರಿಕೆಗಳ ಪರವಾಗಿ ಸ್ಟಾಫಿನವರು ತಂಡವಾಗಿ ಹೋಗೋದು ಮೇಲು."
"ಹಾಗೇ ಆಗಲಿ, ನಿಮಗೊಂದು ಸುದ್ದಿ ಇದೆ."
"ಹೇಳೋಣಾಗಲಿ."
"ದಿಲ್ಲಿಯಲ್ಲಿ ಕಿಷ್ಟಿಂಧಾ ಭವನ ನಿರ್ಮಾಣವಾಗಲಿದೆ. ನಿವೇಶನ ಕೇಳಲಿದ್ದೇವೆ."
ಒಬ್ಬ ಸಂಪಾದಕನೆಂದ :
"ಆಮೇಲೆ ಸಂವಾದ ಭೋಜನಕ್ಕೆ ಹೋಟೆಲ್ ಅಶೋಕ ಬೇಕಾಗೋದಿಲ್ಲ!"
"ಅಶೋಕ ಮಹಾ ಸಮ್ರಾಟ, ಅವನಿಗೆ ಯಾವಾಗಲೂ ನಾವು ನಮಿಸ್ತೇವೆ."
"ನಿಮಗೆ ಅಧ್ಯಾತ್ಮದಲ್ಲಿ ಆಸಕ್ತಿ ಇದೆಯಂತೆ."
"ಅರ್ಥಶಾಸ್ತ್ರದಿಂದ ಅಧ್ಯಾತ್ಮದವರಿಗೆ."
"ನಿಮ್ಮ ಟೆನ್ನಿಸ್ ಪ್ರಾವೀಣ್ಯದ ಬಗ್ಗೆ ಓದಿದ್ದೆವೆ."
"ಈ ಮುಖ್ಯಮಂತ್ರಿಗೆ ಜಂಭ ಅಂತ ಭಾವಿಸಬೇಡಿ. ಟೆನ್ನಿಸ್, ಯೋಗಾಸನ
ಎರಡೂ ನನಗಿಷ್ಟ."
ಸಿಗರೇಟುಗಳು, ಪೈಪುಗಳು ಪುಡ್ಡಿಂಗ್, ಐಸ್ಕ್ರೀಮ್... ಫೆರ್ನಾಂಡೀಸ್
ಪರಶುರಾಮ, ಸಿತಾರಾಮರಿಗೆ ಹಸಿವು, ಕೆಲ ಸಂಪಾದಕರಿಗೆ ಆ ಹುಡುಗಿಯ ಬಗೆಗೂ
ಆಸಕ್ತಿ.
....ಕಿಷ್ಕಿಂಧೆಯ ಔದ್ಯೋಗೀಕರಣ, ನಿರ್ಯಾತ ಸಾಮಗ್ರಿಗಳ ಉತ್ಪಾದನೆ,...
ಸೌದಾಮಿನಿ:"ಕುಟುಂಬ ಯೋಜನ ಇದೆ. ಜನಸಂಖ್ಯಾಸ್ಫೋಟ ಇನ್ನೂ
ಆಗಿಲ್ಲ."
ಸಂಪಾದಕರಲೊಬ್ಬ :"ರಾಷ್ಟ್ರಪಕ್ಷ ಬಿಟ್ಟವರು ಉದ್ದಾರವಾಗಲಿಲ್ಲ."
ಸೌದಾಮಿನಿ :"ಸಮತಾ ಪಕ್ಷವಂತೂ ಹೆಚ್ಚು ಕಮ್ಮಿ ನಿರ್ನಾಮವಾಗಿದೆ,"
ಇನ್ನೊಬ್ಬ :"ಪ್ರಧಾನಿಯನ್ನು ಕಂಡಿರಾ?"
ಸೌದಾಮಿನಿ :"ನಾಳೆ ಬೆಳಗ್ಗೆ ಕಾಣ್ತೇನೆ."
"ಬ್ರೇಕ್ಫಾಸ್ಟ್ಗೆ ಕರೆದಿದಾರಾ?"
"ಅದು ಸ್ಟೇಟ್ ಸೀಕ್ರೆಟ್."