ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

109

ಅಲೆಅಲೆಯಾಗಿ ನಗೆ, ಅದರೊಡನೆ ಭೋಜನ ಸಂವಾದದ ಮುಕ್ತಾಯ.
ಸೌದಾಮಿನಿ ಆಮಂತ್ರಿತರನ್ನು ಕೈ ಕುಲುಕಿ ಬೀಳ್ಕೊಟ್ಟಳು. ಕಾರುಗಳು
ಅದಲು ಬದಲಾದುವು. ಯಾರೂ ಆಕ್ಷೇಪಿಸಲಿಲ್ಲ.
ಸೌದಾಮಿನಿ ಫೆರ್ನಾಂಡೀಸ್‌ಗೆ ನಿರ್ದೇಶ ನೀಡಿದ್ದಳು.:
“ಡ್ರೈವರುಗಳು,
ಸ್ವಯಂ ಸೇವಕರು, ಸಿಬ್ಬಂದಿ ಎಲ್ಲರೂ ಇಲ್ಲಿಯೇ ಉಣ್ಣಬೇಕು, ನಾನು ಕುಟೀರಕ್ಕೆ
ಹೋಗಿ, ವಾಹನ ವಾಪಸು ಕಳಿಸ್ತೇನೆ. ಬಿಲ್ ಇಸಕೊ, ಚೆಕ್ ಬರದೆ-ಅನ್ನು.”
ಅವರೆಲ್ಲರ ಭೋಜನವೂ ವಿಜೃಂಭಣೆಯಿಂದಲೇ ನಡೆಯಿತು.
ಕಿಷ್ಕಿಂಧೆಯ ಮುಖ್ಯಮಂತ್ರಿ ಕುಟೀರ ತಲುಪಿದ ಕೆಲ ಮಿನಿಟುಗಳಲ್ಲಿ ನಕುಲ
ದೇವರ ಫೋನ್ ಬಂತು.
“ಅಭಿನಂದನೆ ಸಂವಾದ ಬಹಳ ಸೊಗಸಾಗಿ ನಡೆಯಿತಂತೆ.”
“ಯಾರು ಹೇಳಿದರು ಅಣ್ಣ ?”
“ಒಬ್ಬ ಸಂಪಾದಕ, ರಾಜಕೀಯ ಸರೋವರದಲ್ಲಿ ನೀನು ರಾಣಿ ಹಂಸವಂತ.”
“ನಿಮ್ಮ ಕೃಪೆ.”
“ನಾಳೆ ಪ್ರಧಾನಿಯ ಭೇಟಿ ಅವರ ಚೇಂಬರಿನಲ್ಲಿ. ಸರಿಯಾಗಿ ಹನ್ನೊಂದು
ಗಂಟೆಗೆ.”
“ಆಗಲಿ. ನಾನು ನಾಳೆಯೇ ಹೊರಡುತ್ತೇನೆ.”
“ಹಾಗಾದರೆ ಮುಖತಃ ಇತ್ಯಾದಿ ಮುಂದಿನ ಸಲ ನೀನು ಬಂದಾಗ.”
“ಚ್ಯುಪ್,”
"ಚ್ಯುಪ್,"

***

ಮಾರನೆಯ ಬೆಳಗಿನ ಅತಿ ಪ್ರಮುಖ ದೈನಿಕದ ಸಂಪಾದಕೀಯ ಟಿಪ್ಪಣಿ
ವಿಭಾಗದಲ್ಲಿ ಕಿಷ್ಕಿಂಧೆ ಇತ್ತು. ಇನ್ನೊಂದು ಪತ್ರಿಕೆಯಲ್ಲಿ ಚೌಕಟ್ಟಿನೊಳಗೆ ಸೌದಾ
ಮಿನಿಯೇ ಮುಖ್ಯ ವಿಷಯ. ಒಳ್ಳೆಯದೊಂದು ಚಿತ್ರವಿತ್ತು, ಆಕೆಯದು. ಇದು
ಪ್ರಧಾನಿಯ ಕಣ್ಣಿಗೆ ಬಿದ್ದಿರಬಹುದೆ ? ನಕುಲದೇವ್ ಖಂಡಿತ ನೋಡಿರುತ್ತಾರೆ.
ಸೌದಾಮಿನಿಗೆ ತೃಪ್ತಿಯಾಯಿತು.
ಫೆರ್ನಾಂಡೀಸ್ ಪ್ರಮುಖ ಹಿಂದಿ ಪತ್ರಿಕೆಯೊಂದರ ಪ್ರತಿ ತಂದ, ಇಂಗ್ಲಿಷ್_
ಹಿಂದಿಗಳಲ್ಲಿ ಮುಖ್ಯಮಂತ್ರಿ ಹೇಳಿದ್ದ ವಿಷಯಗಳು, ಟ್ರೋಷರ್‌ನಲ್ಲಿದ್ದ ಮಾಹಿತಿ
ಎಲ್ಲ ಸೇರಿ ಮೂರು ಕಾಲಮುಗಳ ದೊಡ್ಡ ಲೇಖನವಾಗಿತ್ತು. ಚಿತ್ರ ಚಿಕ್ಕದು.
ಅಷ್ಟು ಚೆನ್ನಾಗಿಯೂ ಇರಲಿಲ್ಲ, ಈ ಸಂಗತಿ ಮಾತ್ರ ಸೌದಾಮಿನಿಗೆ ತುಸು ಬೇಸರ