ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

137

ಯಾವುದಾದರೂ ಸರಿ,”
“ಸದನಕ್ಕೆ ಚಿರಪರಿಚಿತರಾದ ಮಾನ್ಯ ಸದಸ್ಯರು ಹೀಗೆ ಹೇಳಿದರೆ ಹೇಗೆ ?
ಪ್ರತಿಯೊಂದಕ್ಕೂ ನಿಯಮ ಇದೆ. ಈಗಾಗಲೇ ನೀವು ಸದನದ ಗಮನವನ್ನು
ಸೆಳೆದಿರುವುದರಿಂದ__”
“ಗಮನ ಸೆಳೆಯುವ ಸೂಚನೆ ಎಂದೇ ಪರಿಗಣಿಸೋಣಾಗಲಿ, ಗೃಹಖಾತೆ
ಯನ್ನೂ ಹೊಂದಿರುವ ಮುಖ್ಯಮಂತ್ರಿಯವರು ನಡೆದ ಘಟನೆಯ ಬಗ್ಗೆ ಹೇಳಿಕೆ
ನೀಡಬೇಕು.”
ಒಂದು ಹಾಳೆಯಾಗಲೇ ಸೌದಾಮಿನಿಯ ಕೈಸೇರಿತ್ತು. ಅದು ಘಟನೆಯ
ಬಗ್ಗೆ ಐ.ಜಿ.ಪಿ. ನೀಡಿದ್ದ ಚುಟುಕು ವರದಿ. ಸೌದಾಮಿನಿ ಅದರ ಮೇಲೇನನ್ನೋ
ಗೀಚಿದಳು, ಒಂದು ಕ್ಷಣ ಬಾಗಿಲಿನತ್ತ ಸಾಗಿ ಅಲ್ಲಿದ್ದ ಪೋಲೀಸ್ ಅಧಿಕಾರಿಗೆ
ಅವಸರದ ಆದೇಶ ನೀಡಿದಳು.
ಸೌದಾಮಿನಿ ತನ್ನ ಸ್ಥಾನ ಸೇರಿ ನಿಂತಲ್ಲಿಂದಲೇ ಅಂದಳು :
“ಸಮತಾ ಪಕ್ಷದವರು ಒಂದು ವಾರವಿಡೀ ನಡೆಸಿದ ಕಾರಸ್ಥಾನದ ಪರಿಣಾಮವೇ
ಇವತ್ತಿನ ಪ್ರದರ್ಶನ ಮತ್ತು ಘಟನೆ. ನನ್ನ ಪೋಲೀಸರು ಅತ್ಯಂತ ತಾಳ್ಮೆಯಿಂದ
ವರ್ತಿಸಿದ್ದಾರೆ. ಕೋಲು ಬಡಿಗೆ ಇತ್ಯಾದಿಗಳನ್ನು ಹಿಡಿದುಕೊಂಡಿದ್ದುದರಿಂದ
ಪ್ರದರ್ಶನಕಾರರನ್ನು ನಿಶ್ಯಸ್ತರು ಎನ್ನಲಾಗುವುದಿಲ್ಲ. ಮಾನ್ಯ ಶಾಸಕ ದಂಡಪಾಣಿ
ಯವರು ಉದ್ರೇಕಪರ ಭಾಷಣ ಮಾಡದೇ ಇದ್ದಿದ್ದರೆ ಗಮನ ಸೆಳೆಯುವ ಸೂಚನೆಗೆ
ವಿಷಯವೇ ಇರುತ್ತಿರಲಿಲ್ಲ. ನೂರನಲ್ವತ್ತು ಜನರನ್ನು ಬಂಧಿಸಲಾಯಿತು, ಲಾಕಪ್ಪಿ
ನಿಂದ ಅವರನ್ನೆಲ್ಲ ಬಿಡಬೇಕೆಂದು ಆಜ್ಞಾಪಿಸಿದ್ದೇನೆ. ಈಗಾಗಲೇ ಅವರ ಬಿಡುಗಡೆ
ಯಾಗಿದೆ. ಊಟೋಪಚಾರದ ಬಳಿಕ ಅವರನ್ನು ರೈಲು ಮತ್ತು ಬಸ್ ನಿಲ್ದಾಣಗಳಿಗೆ
ವ್ಯಾನಿನಲ್ಲಿ ತಲಪಿಸಬೇಕೆಂದು ಸೂಚಿಸಿದ್ದೇನೆ. (ರಾಷ್ಟ್ರ ಪಕ್ಷದ ಶಾಸಕರಿಂದ
“ಹೀಯರ್ ಹೀಯರ್") (ಅನುಕಂಪ ತುಂಬಿದ ಸ್ವರದಲ್ಲಿ) ಅದರೂ ನೋವು,
ನೋವೇ, ನನ್ನದು ಅಹಿಂಸೆಯಲ್ಲಿ ಅಚಲ ವಿಶ್ವಾಸವಿರುವ ಸರಕಾರ, ಮಾನ್ಯ
ಶಾಸಕ ದಂಡಪಾಣಿಯವರಿಗೆ ನನ್ನ ಹಾಗೂ ಸರಕಾರದ ಸಹಾನುತಾಪವನ್ನು ವ್ಯಕ್ತ
ಪಡಿಸುತ್ತೇನೆ. (ಪ್ರಜಾಪಕ್ಷದ ಸಾಸಕರು : “ಮುಖ್ಯಮಂತ್ರಿ ಅವರ ಕ್ಷಮೆ ಕೋರ
ಬೇಕು" ದಂಡಪಾಣಿಯವರ ಮಾತ್ರವಲ್ಲ ಈ ಊರಿಗೆ ಹೊಸಬರಾದ ಅವರ
ಅಮಾಯಕ ಹಿಂಬಾಲಕರ ಮತ್ತು ನಗರದ ಕಾರ್ಮಿಕ ಬಾಂಧವರ ಕ್ಷಮೆಯನ್ನೂ
ನಿಶ್ಚರ್ತವಾಗಿ ಕೋರುತ್ತೇನೆ. ಈ ಘಟನೆಯಿಂದ ಒಂದು ಸಂಗತಿ ಸಾಬೀತಾಗಿದೆ,
ರೈತ-ಕಾರ್ಮಿಕರ ಹಿತಸಾಧಕ ಸರಕಾರ ಒಂದಿದ್ದರೆ ಅದು ನಮ್ಮದು__ನಮ್ಮದು.)”
(ಆಳುವ ಪಕ್ಷದಿಂದ ಕರತಾಡನ, ಸೌದಾಮಿನಿ ಕುಳಿತಳು.)
ನಾಯಕ : “ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರ