ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

11

('ನಿನ್ನದು ಗೆಸ್ಟ್ ರೂಮ್. ನನ್ನದು ಗೆಸ್ಟ್ ಹೌಸ್' —ಪುಟ್ಟವ್ವನ ಒಳದನಿ.)
('ಯಾಕೊ, ಶಂಕೆ. ನನ್ನ ಶಿಷ್ಯೆ ಸುಳ್ಳಾಡುತ್ತಿಲ್ಲವಷ್ಟೆ? ಹಾಗೆ ನೋಡಿದರೆ ನಾನು ಹೇಳುತ್ತಿರುವುದೆಲ್ಲ ನಿಜವೆ ?'—ಎನಿಸಿತು ಬೆನ್‌ಗೆ.)
ಅವಳು ಕೇಳಿದಳು:
“ನಾನು ಕಲ್ಯಾಣನಗರಕ್ಕೆ ಬಂದರೆ ಆ ಗೆಸ್ಟ್ ಹೌಸಿನಲ್ಲಿರಿಸ್ತೀಯೊ ?”
“ಕಟ್ಟಡಗಳು ಪೂರ್ತಿಯಾಗಲು ಎರಡು ಮೂರು ವರ್ಷ ಹಿಡಿದೀತು.”
“ನನಗೇನೂ ಅವಸರವಿಲ್ಲ. ದಿಲ್ಲಿಯಲ್ಲಿ ನನಗೆ ಪ್ರಭಾವಶಾಲಿ ಸ್ನೇಹಿತರಿದ್ದಾರೆ. ಅವರಿಗೆ ಹೇಳಿ ಕಟ್ಟಡದ ಉದ್ಘಾಟನೆಗೆ ಪ್ರಧಾನಿಯನ್ನೇ ಗೊತ್ತುಪಡಿಸೋಣ.”
“ನೀವು ಅಧ್ಯಕ್ಷೆಯಾಗಿ ಬನ್ನಿ.”
“ನನ್ನ ದಿನಾಂಕಗಳು ನಿನಗೆ ಸರಿಹೋಗಬೇಕಲ್ಲ ಪುಟ್ಟಾ.”
“ಲೇವಡಿ ಮಾಡ್ತಿದೀರಿ. ಅವತ್ತು ಹೇಗೆ ಇದ್ದಿರೋ ಹಾಗೆಯೇ ಇದ್ದೀರಿ ಇವತ್ತೂ.”
ಇಲ್ಲಿಗೆ ಈಗ ನೀನು ಬಂದಿರೋ ಉದ್ದೇಶ ತಿಳೀತು. ಆಶ್ರಮದ ಭವನ ನಿರ್ಮಾಣಕ್ಕೆ ದೇಣಿಗೆ ಕೂಡಿಸಬೇಕು, ಅಲ್ಲವಾ ?”
“ದುರ್ಬೀನು ಹಿಡಿದು ಒಳಗಿನದೆಲ್ಲ ತಿಳಕೊಂಡ್ಬಿಡ್ತೀರಿ ನೀವು!”
“ಬಿಸ್ನೆಸ್ ನಾಳೆಗೆ ಇಟ್ಕೊಳ್ಳೋಣ. ಆದರೆ ನೀನು ಸ್ವಲ್ಪ ಸಮಯ ಇಲ್ಲಿರಬೇಕಾಗುತ್ತೆ."
“ಧಾರಾಳವಾಗಿ ಇರ್ತೀನಿ. ಒಂದು ತಿಂಗಳು ಸಾಕಾ ?”
“ನಾನೂ ನಿನ್ನ ಜತೆ ಹೊರಟರೆ ಸಾಕಾದೀತು.”
“ನಿಮ್ಮನ್ನು ನಂಬಿಯೇ ನಾನು ಇಲ್ಲಿಗೆ ಬಂದಿರೋದು.”
“ನೀನು ಹೋದಮೇಲೆ ಮವರು ಶಿಷ್ಯಯರನ್ನ ತಯಾರು ಮಾಡಿದೆ. ಉತ್ತರ ಪ್ರದೇಶದವರು. ಒಬ್ಬಳು ಅಲಹಾಬಾದಿನಲ್ಲಿದ್ದಾಳೆ. ಇನ್ನೊಬ್ಬಳು ಬಿಹಾರಿನಲ್ಲಿ. ಮೂರನೆಯವಳು ಕಲ್ಕತ್ತೆಯಲ್ಲಿ.”
“ಅವರು ನನ್ನ ಹಾಗಲ್ಲ. ಕಾಗದ ಗೀಗದ ಬರೀತಿರಬಹುದು.”
“ಅದಕ್ಕೆ ನಾನು ಪ್ರೋತ್ಸಾಹ ಕೊಡೋದಿಲ್ಲ.”
“ಸರಿ, ಮತ್ತೆ. ನೀವು 'ಬರಿ ಪುಟ್ಟಾ' ಅಂದಿದ್ದರೆ ರೀಮುಗಟ್ಟಲೆ ಕಾಗದ ಕೊಳ್ತಿದ್ದೆ.”
“ಒಂದು ಗೋದ್ರೆಜ್ ಕಪಾಟ ತುಂಬ ಫೋಟೋ ಆಲ್ಬಮುಗಳಿವೆ. ನಿಧಾನ ವಾಗಿ ನೋಡುವಿಯಂತೆ.”
“ಹಳೇದು ಕೆಲವು ನಾನು ನೋಡಿರ್ಬೇಕು.”
“ನನ್ನ ಅಲ್ಪಾಯು ಕಂದನನ್ನ ಎತ್ಕೊಂಡ ನನ್ನ ಬಾಣಂತಿತನದ ಚಿತ್ರ ನೆನಪಿದೆಯಾ ?”