ಈ ಪುಟವನ್ನು ಪರಿಶೀಲಿಸಲಾಗಿದೆ

186 మిಚು

     ಒಬ್ಬ ಸುದ್ದಿಗಾರ ವಿಶ್ವಂಭರನ ಪುಸ್ತಕ ಪ್ರತಿಯನ್ನು ಎತ್ತಿ ತೋರಿಸಿ, "ಆ
 ತನಿಖಾದಳಕ್ಕೆ ಸಹಾಯವಾಗಲೀಂತ ಇದನ್ನು ಸಿದ್ಧಗೊ‍‍ಳಿಸಿದ್ದೀ?"
     "ಸತ್ಯದ ಶೋಧನೆ ಮಹಾತ್ಮರ ಕಾಲದಿಂದ ನಡೆದು ಬಂದಿರುವ ಯಜ್ಞ
 ಅದರಲ್ಲಿ ಯಾರೇ ತೊಡಗಲಿ ಅವರಿಗೆ ನೆರವಾಗುವುದು ಪುಣ್ಯದ ಕೆలಸ."
     "ಸೌದಾಮಿನಿ ಸಂಪುಟವನ್ನು ಉರುಳಿಸಿದ ತರುವಾಯ ನೀವು ರಚಿಸುವ
 ಸಂಪುಟದಲ್ಲಿ ಮುಖ್ಯಮಂತ್ರಿ ಯಾರಾಗ್ವಾರೆ?" ಎಂದು ಕೇಳಿದನೊಬ್ಬ.
     ಸ್ಪೀಕರ್ ಅಂದರು :
     "ಈ ಪ್ರಶ್ನೆಗೆ ನನ್ನ ಅನುಮತಿ ಇಲ್ಲ"
     ವಿಶ್ವಂಭರ ನಕ್ಕ: ವರದಿಗಾರ ತಂಡವೂ ನಕ್ಕಿತು.
     ಅಷ್ಟರಲ್ಲಿ ಸುದ್ದಿ ಬಂತು :
     "ಬಂಧಿತ ಶಾಸಕರನ್ನು ಜಾಮಿಾನಿನ ಮೇಲೆ ಬಿಡುಗಡೆ ಮಾಡಿದಾರಂತೆ."
     ಲಕ್ಷ್ಮೀಪತಯ್ಯ ಕೆರಳಿ ನುಡಿದ :
     "ಇದು ಗಾಯದ ಮೇಲೆ ಬರೆ ! ಕೋರ್ಟಿಗೆ ನೂರಾರು ಸಲ ಎಡತಾಕಿಸೋ
 ಹೂಟ."                                                      
                                                              
                *               *             *               
                                                               
     ಪ್ರಜಾಪಕ್ಷದ ನಾಯಕರು ತಮ್ಮ ಆರೋಪಗಳ ಪಟ್ಟಿಯನ್ನು ಪತ್ರಿಕೆಗಳಿಗೆ
 ಬಿಡುಗಡೆ ಮಾಡಿದರು.ಅದು ಎಂಟು ಹತ್ತು ಸಾಲುಗಳ ಸಂಕ್ಷಿಪ್ತ ಸುದ್ದಿ ಯಾಯಿತು.
     "ನನ್ನ ಪಕ್ಷ ಚಿಕ್ಕದು ಅಂತ ಇವರಿಗೆ ತಾತ್ಸಾರ. ಇರಲಿ, ನೋಡೋಣ,"
 ಎ೦ದು ನಾಯಕ್ ಕೂಗಾಡಿದರು.
     ತಾನು ಪ್ರಜಾಪಕ್ಷದ ಸಹಸದಸ್ಯರೊಡನೆ ವಿಶ್ವಂಭರನನ್ನು ಸೇರಿಕೊಡರೆ
 ಹೇಗೆ?__ಎಂಬ ಯೋಚನೆ ಬಂತು: ಮಿತ್ರರೊಬ್ಬರ ಮೂಲಕ ರಾಯಭಾರ
 ನಡೆಯಿತು. ಮತದಾರರು ನಿರಾಕರಿಸಿದ್ದ ಪಕ್ಷದ ಬೆಂಬಲ ವಿಶ್ವಂಭರನಿಗೆ ಬೇಕಿರ
 ಲಿಲ್ಲ, "ಸಮಯ ಪಕ್ವವಾದಾಗ ಈ ಬಗ್ಗೆ ನಿರ್ಧರಿಸೋಣ" ಎಂದು ಹೇಳಿ, ಅಡ್ಡ
 ಗೋಡೆಯ ಮೇಲೆ ದೀಪ ಇಟ್ಟ....
     ...ರಂಗಸ್ವಾಮಿ “ಹೈಕೋರ್ಟಿಗೆ ಹೋಗುವುದೇ ಸರಿ," ಎಂದರು,
 ಸೌದಾಮಿನಿಯ ಹೆಸರು ಸೌದಾಮಿನಿಯಲ್ಲ__ಸುಳ್ಳು ಹೆಸರಿನವನೊಬ್ಬಳು  ಮುಖ್ಯ
 ಮಂತ್ರಿರಾಗಿರುವುದು ಅಸಿ೦ಧು."
     ಹೈಕೋರ್ಟು ದೂರನ್ನು ಸ್ವೀಕರಿಸಿತು. ಆದರೆ ಕಾನೂನು ಕತ್ತೆ.ಹಲವು
 ಸಹಸ್ರ ಮೊಕದ್ದಮೆಗಳ ಹೇರು ಅದರ ಮೇಲೆ. ತತ್ಪರಿಣಮವಾಗಿ ನಡಿಗೆ ಕುಂಟು.