ಈ ಪುಟವನ್ನು ಪರಿಶೀಲಿಸಲಾಗಿದೆ



 ಮಿಂಚು                                             187
                                                                
 ನ್ಯಾಯಸ್ಧಾನದಲ್ಲಿ  ಸೌದಾಮಿನಿಯನ್ನು  ಬೆತ್ತಲೆ  ಮಾಡಲು  ವರ್ಷಗಳೇ  ಹಿಡಿಯ
 ಬಹುದು ಎನಿಸಿತು ರಂಗಸ್ವಾಮಿಗೆ.
                                                              
                   *            *             *              
                                                               
     ಸೌದಾಮಿನಿ ಸಂಪುಟದ ತುರ್ತುಸಭೆ ಕರೆದಳು, ತನ್ನ ನಿವಾಸದಲ್ಲಿ. ಮುಖ್ಯ
 ಕಾರ್ಯದರ್ಶಿ ಚೌಗುಲೆಗೆ ತಿಳಿಸಿರಲ್ಲಿ.
     ಸಭೆಯಲ್ಲಿ ಸೌದಾಮಿನಿ ಕೆರಳಿದ ದಂತೇಶ್ವರಿಯಾದಳು :
     "ಕಿಷ್ಕಿಂಧೆಗೆ ಕಿಚ್ಚು ಇಕ್ಕುವ ಪ್ರಯತ್ನ ನಡೀತಿದೆ. ನಿಮ್ಮ ಮೌನ ಸರಿಯಲ್ಲ.
 ಸೌದಾಮಿನಿ ಸಂಪುಟದಲ್ಲಿ ನಮಗೆ ಪೂರ್ಣ ವಿಶಾಸವಿದೆ; ಅಪಪ್ರಚಾರದ ಕಂತೆಗಳಿಗೆ
 ರಾಷ್ಟ್ರಪಕ್ಷದ ಶಾಸಕರಾಗಲೀ ಜನರಾಗಲೀ ಕಿವಿ ಕೊಡಬಾರದು ; ಸರಕಾರ ಸುಭದ್ರ
 ವಾಗಿಗದೆ...ಈ ನಿರ್ಣಯಕ್ಕೆ ಬಾಲಾಜ_ಸಂಗಪ್ಪ ನೀವಿಬ್ಬರುನಮ್ಮ ನಮ್ಮ ಶಾಸಕರ
 ಸಹಿ ಸಂಗ್ರಹಿಸಿ, ನೋಡೋಣ."
     "ಸಹಿ ಹಾಕುವವರು ಅಂಗೈ ಮುಂದಕ್ಕೆ ಚಾಚಿದರೆ ?"
     "ನಾಯಿಕೆಯಲ್ಲಿ ಪಕ್ಷದಲ್ಲಿ ನಿಷ್ಠೆ ತೋರಿಸೋದಕ್ಕೆ ಲಂಚ ಕೊಡಬೇಕೇನ್ರಿ? ಸಹಿ
 ಹಾಕದೇ ಇರೋದು ಶಿಸ್ತಿನ ಉಲ್ಲಂಘನೆಯಾಗ್ತದೆ ಶಾಸ್ತಿ. ಉಲ್ಲಂಘನೆಯಾಗ್ತದೆ ಏನು
 ಶಾಸ್ತಿ ಅನ್ನೋದು ಗೊತ್ತಿದೆ ತಾನೆ?"
     ನಾರಣಪ್ಪ ಅಂದರು :
     "ಈ ಪದಗಳಿಗೆ ಗಾಂಧಿ ಬದುಕಿದ್ದಾಗಲೇ ಅರ್ಥ ಇರಲಿಲ್ಲ, ಈಗೆ ಅರ್ಥದ
 ಅರ್ಥ ಅರ್ಥವೇ.ದುಡು ದುಗ್ಗಾಣಿ, ಚೀಲ ಬಿಚ್ಚಿ, ಕೆಲಸ ಆಗ್ರದೆ. ವಿಶ್ವಂಭರವ
 ಕಡೆಯವರು ಹಣ ನೀರಿನಂತೆ ಖರ್ಚು ಮಾಡ್ತಿದಾರೆ."
     "ನೀರಾವರಿ ಮಂತ್ರಿ ನೀವೊ ? ವಿಶ್ವಂಭರನೊ ?"
     "ಯಾರೂ ಅಲ್ಲ, ಮಾತಾಜಿ, ನೀವೇ. ಎಲ್ಲ ಕಂಟ್ರಾಲಕ್ಟುದಾರರೂ ಬರೋದು
 ನಿಮ್ಮಲ್ಲಿಗೆ. ಅಲ್ಲವಾ ?"
     "ನಾನೇ! ನಾನೇ! ನಮ್ಮ ಪ್ರತಿಯೊಬ್ಬ ಶಾಸಕನನ್ನೂ ಇಲ್ಲಿಗೆ ಕರೆಸಿ ಸಹಿ
 ಪಡಿತೇನೆ !"
     "ದಿಲ್ಲಿಗೆ ಹೋಗೋದಿಲ್ವ, ಮಾತಾಜಿ ?" ಎಂದು ಕೇಳಿದ ವಿದ್ಯಾಧರ.
     ಸಿಡುಕು ಜಾಸ್ತಿಯಾಯಿತೆಂದು ಸೌದಾಮಿನಿ ನಗೆ ಬೀರಿದಳು.
     "ನಿವೇಶನ ಕೊಟ್ಟಿದ್ದಾರೆ, ಪ್ರಧಾನಿ ಕೈಯಿಂದ ಕಿಷ್ಕಿಂಧೆ ಭವನದ ಶಂಕುಸ್ಥಾಪನೆ
 ಮಾಡಿಸೋಣ. ಒಂದು ಸಂಪುಟ ಸಭೇನ ಅಲ್ಲೆ ಇಟ್ಟೊಂಡರಾಯಿತು."
     ಯಾರೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಮೌನ ನೆಲೆಸಿತು.ಸಹೋದ್ಯೋಗಿಗಳು