ಈ ಪುಟವನ್ನು ಪರಿಶೀಲಿಸಲಾಗಿದೆ

214 ಮಿಂಚು

      ಹೌದು.   ಪ್ರತಿ ಪಕ್ಷದ ನಾಯಕ.   ಫೋನಿನ ಬಳಿ ಸಾರಿದಳು.
      “ಮಾತಾಜಿಗೆ ಪ್ರಣಾಮ, ಯೋಗಾಸನ ಆಯ್ತು ?"
      "ಏನು ತೀರ್ಮಾನಿಸಿದಿರಿ ?"
      “ಅವಸರದಲ್ಲಿದೀರೀಂತ ಕಾಣುತ್ತೆ,   ಸಹಜ.  ಪಾಪ ! ತೀರ್ಮಾನ ನಿನ್ನೇದೆ.                     

ನೀನು ಪಟ್ಟದಿಂದ ಇಳೀಬೇಕು. ಹೆಚ್ಚೆಂದರೆ ನಿನಗೊಂದು ಮಂತ್ರಿಸ್ಥಾನ ಕೊಟ್ಟೇನು, ಸಮಾಜ ಕಲ್ಯಾಣ ಖಾತೆ. ಆದೀತಾ ?"

      ಸೌದಾಮಿನಿ ರಿಸೀವರನ್ನು ಕುಕ್ಕಿದಳು.  ಅವಳ ಮನಸ್ಸು ಕಲ್ಲಾಯಿತು. ಶಾಂತಿ

ಮಾತುಕತೆ ಯಾರೊಂದಿಗೂ ಇಲ್ಲ. ಇನ್ನು ಸಮರ, ಸಮರವೊಂದೇ !

        ಮುಖ್ಯ ಕಾರ್ಯದರ್ಶಿಯಿಂದ ಫೋನ್ ಬಂತು :
        "ರಾಜ್ಯಪಾಲರು ಇವತ್ತು ಸಂಜೆ ದಿಲ್ಲಿಗೊಂದು ವರದಿ ಕಳಿಸ್ತಾರಂತೆ."
        "ಅವನಿಗಿನ್ನೇನು ಕೆಲಸ ?  ದೂತ ಬೇಕಾದರೆ   ವಿಶ್ವಂಭರ  ಇದ್ದಾನೆ.  ಅವನ

ಕೈಲಿ ಕೊಟ್ಟರಾಯಿತು;"

      "ಪರಿಸ್ಥಿತಿ  ಬಿಗಡಾಯಿಸಿಲ್ಲ ಅಂತ ನನ್ನ ಅನಿಸಿಕೆ."
      "ನನಗೂ  ಹಾಗೇ ತೋರುತ್ತೆ.ಒಂದು ಕೆಲಸವಾಗಬೇಕಲ್ಲ ಚೌಗುಲೆ ಸಾಹಿಬ್....

ಕಿಷ್ಕಿಂಧಾವಾಣಿ ವ್ಯಂಗ್ಯ ಚಿತ್ರ__"

       "ಸೊಗಸಾಗಿದೆ."
       "ಅದರೆ  ಸಂಪುಟದ  ನನ್ನ ಆರು ಜನ ಮಂತ್ರಿಗಳಿಗೆ ಹಾಗೆ  ಅನಿಸಿಲ್ಲ.      ಇದು

ಅವಮಾನ ಅಂತ ಕೂಗಾಡಿದ್ರು. ಆ ಮಾಲಿಕನಿಗೆ ಸ್ವಲ್ಪ ತಿಳಿಯ ಹೇಳಿ. 'ವ್ಯಂಗ್ಯ ಚಿತ್ರದಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇವೆ' ಬೇಡ_ 'ಕ್ಷಮೆ ಕೋರುತ್ತೇವೆ' ಅಂತ ನಾಳೆಯ ಸಂಚಿಕೇಲಿ ಅಚ್ಚು ಹಾಕಲಿ. ಇದು ಬಹಳ ಅಗತ್ಯ. ಹಾಗಲ್ಲ. 'ನಿನ್ನೆಯ ವ್ಯಂಗ್ಯ ಚಿತ್ರ ಕೆಲಮಂತ್ರಿಗಳಿಗೆ ನೋವುಂಟು ಮಾಡಿದೆ ಎಂದು ತಿಳಿದು ಬಂದಿದೆ. ವ್ಯಂಗ್ಯ ಚಿತ್ರದಲ್ಲಿ ತಮಾಷೆಗೇ ಮಹತ್ವ: ಅಷ್ಟರಲ್ಲೂ ಮನಸ್ಸಿಗೆ ನೋವಾಗಿದ್ದರೆ ನಿಶ್ಯರ್ತ ಕ್ಷಮೆ ಕೋರುತ್ತೇವೆ' ಎಂದು ಹಾಕಿಸಿ, ನುಣುಚಿ ಕೊಂಡು ಪಾರಾಗೋದಕ್ಕೆ ಬಿಡಬೇಡಿ. ಮಂಜೂರಾಗಿರುವ ನಿವೇಶನವನ್ನು ಬೇಗನೆ ಬಿಡುಗಡೆ ಮಾಡ್ತೇವೆ ಅನ್ನಿ,"

       "ಅವರನ್ನು ಖಂಡಿತ ಒಪ್ಪಿಸ್ತೇನೆ."
       ಮಾತಾಜಿ ಕಿಟಿಕಿಯ ಮೂಲಕ ಆಕಾಶ ನೋಡುತ್ತ ಯೋಚಿಸಿದಳು :
       ಮಾನವ ಶಕ್ತಿಗಿಂತ  ಮಿಗಿಲಾದದ್ದು ದೈವೀ  ಶಕ್ತಿ, ಅದು ತನ್ನ ಪಾಲಿಗೆ  ಹೇರಳ

ವಾಗಿದೆ. ಹೀಗಿರುತ್ತ ಮಾನವಶಕ್ತಿಯ ಕೈ ಮೇಲಾದೀತೆ ? ಇಷ್ಟರಲ್ಲೂ ಹುಲು ಮಾನವರನ್ನು ಜಯಿಸಬಲ್ಲ ಶಕ್ತಿ ಇಲ್ಲವೆ ? ಇದೆ. ಯಾವುದು  ? ಧನಶಕ್ತಿ.

        ಭಾನುವಾರ  ರಾಷ್ಟ್ರಪಕ್ಷದ ಶಾಸಕಾಂಗದ ಸಭೆ,    ತಾನು ಅದರಲ್ಲಿ ಜಯಶೀಲೆ

ಯಾಗಲೇಬೇಕು. ಲಕ್ಷ್ಮೀಪತಿ_ವಿಶ್ವಂಭರರನ್ನು ಬಿಟ್ಟು, ಮಂತ್ರಿಗಳನ್ನೂ ಬಿಟ್ಟು,