ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 215

     ತನ್ನ ಪಕ್ಷದ ಉಳಿದೆಲ್ಲ  ಶಾಸಕರಿಗೆ,   'ಪ್ರಯಾಣ ವೆಚ್ಚ'  ಎಂದು   ಚೀಟಿ  ಬರೆದು,
     ಅದಕ್ಕೆ  ಎರಡೆರಡು  ಸಾವಿರ  ಲಗ್ತೀಕರಿಸಿ  ಲಕೋಟೆಗಳನ್ನು  ನಸುಕಿನಲ್ಲೆ  ತಲಪಿಸ
     ಬೇಕು.  ಚೀಟಿಯಲ್ಲಿ ತನ್ನ ಸಹಿ ?   ಲಕೋಟಿ  ವಿಶ್ವಂಭರನ  ಶಿಬಿರದಿಂದ  ಬಂದಿದೆ
     ಎಂದು ಯಾರಾದರೂ ಭಾವಿಸಿದರೆ ?   ಚೀಟಿಯಲ್ಲಿ  ತನ್ನ   ಸಹಿ  ಇರುವುದೇ  ಸರಿ.
     ಪಕ್ಷದ ನಾಯಿಕೆಯಾಗಿ ತಾನು ಕೊಡುತ್ತಿರುವ ಪ್ರಯಾಣ  ವೆಚ್ಚ.  ಇದು ಲಂಚವಲ್ಲ.
             ಎಂದಿನಂತೆ  ಸೌದಾಮಿನಿ ಕಾರ್ಯಸೌಧಕ್ಕೆ  ಹೋದಳು.    ಹತ್ತಿರದಲ್ಲೆ ಇತ್ತು
     ರಾಜಭವನ ರಸ್ತೆ.   ಅತ್ತ ಬರುವ ಅವಕಾಶ ಯಾವುದಾದರೂ  ಮೆರವಣಿಗೆಗೆ  ಎಂದಾ
     ದರೂ ಸಿಕ್ಕಿದರೆ,ಕಾರ್ಯಸೌಧದಿಂದ ಅದರ ವೀಕ್ಷಣೆ ಸಾಧ್ಯವಿತ್ತು. ಮೂಖ್ಯಮಂತ್ರಿಯ
     ಚೇಂಬರ್ ಇರುವ ಮೊದಲ ಮಹಡಿಯಿಂದಂತೂ ಮೆರವಣಿಗೆಯ  ಎಲ್ಲ  ವಿವರಗಳೂ
     -ಕೋಡು, ನಡು, ಬಾಲ ಎಲ್ಲ_ಕಾಣಿಸುತ್ತಿದ್ದುವು, ದುರ್ಬೀನಿನ ನೆರವು ಇಲ್ಲದೆಯೇ.
             ಐ.ಜಿ.ಪಿ. ವಿಶ್ವಂಭರನೊಡನೆಯೂ ಚರ್ಚಿಸಿದ್ದ.
             "ನಿಮ್ಮಿಂದ ಸ್ವಲ್ಪ ಸಹಾಯವಾಗಬೇಕಲ್ಲ ಐ.ಜಿ.ಪಿಯವರೆ...."
             "ಪೋಲೀಸ್ ಬ್ಯಾಂಡ್ ಒಂದನ್ನು ಬಿಟ್ಟು ಬೇರೆ ಏನು  ಬೇಕಾದರೂ ಕೇಳಿ,"
             "ಹಹ್ಹ !    ನಮ್ಮದು   ಸೆಂಟ್  ಪರ್ಸೆಂಟ್   ಅಹಿಂಸಾತ್ಮಕ.     ನಿಮ್ಮವರು
     ಮುಂದೆಯೂ ಹಿಂದೆಯೂ ಲೆಫ಼್ಟ್ ರೈಟ್ ನಡೆದರೆ ಸಾಕು,"
             "ಬಾವುಟ ಯಾವುದು ?"
             "ರಾಷ್ಟ್ರಧ್ವಜ."
             "ಸ್ಲೋಗನ್ಸ್ ?"
             "ರಾಷ್ಟ್ರಪಕ್ಷ ಜಿಂದಾಬಾದ್."
             "ಆಮೇಲೆ .."
             "ಸೌದಾಮಿನಿ ಸರಕಾರ ಮುರ್ದಾಬಾದ್."
             ಐ.ಜಿ.ಪಿ. ಎರಡು ನಿಮಿಷ ಮೌನವಾಗಿದ್ದು, "ಅದೊಂದನ್ನು ಬಿಟ್ಟರಾಗದೆ?"
     ಎಂದು ಕೇಳಿದ.
             "ಅದು ಹೇಗೆ ಸಾಧ್ಯ ?  ಜೀವಾಂಶವೇ  ಆ ಸ್ಲೋಗನ್."
             "ಏನೋಪ್ಪ...."
             "ಏನೂ  ಚಿಂತಿಸ್ಬೇಡಿ.   ನಿಮ್ಮ ವರದಿ  ಸರಕಾರಕ್ಕೆ  ತಲಪೋ   ಹೊತ್ತಿಗೆ....
     ಇನ್ನೆರಡು  ಮೂರು ದಿವಸ..ಹೊಸ ಗೃಹಮಂತ್ರಿ ಅಧಿಕಾರ ವಹಿಸ್ಕೊಂಡಿರ್ತಾರೆ."
             "ನಿಮ್ಮಿಚ್ಛೆ.    ಕಾರ್ಯಸೌಧದ ಮುಂದೆ ಶಾಂತವಾಗಿ ಹೋಗ್ಬೇಕು' ಸಿ.ಎಂ.ನ
     ಚೇಂಬರ್  ಕಡೆ ನೋಡಿ ಕೂಗಾಡ್ಬಾರದು."
             "ನೀವು  ಕಿಷ್ಕಿಂಧೆಯ  ಗಾಂಧೀ_ಐ ಜಿ ಪಿ."
             "ಗೃಹಮಂತ್ರಿಯಾದ್ಮೇಲೆ ಏನು ಹೇಳ್ತೀರೋ  ಪರಮಾತ್ಮನಿಗೇ  ಗೊತ್ತು  !"
             .....ಘೋಷ    ದೂರದಿಂದ   ಕೇಳಿಸಿತು,    ಹತ್ತಿರ   ಬಂತು.    ಸೌದಾಮಿನಿ