ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

17

ಇವರ ದುರ್ದಾನವೇ ಬೇಡ: ರಸ್ತೆಯಾಚೆಗಿನ ಪಬ್ಲಿಕ್‍ಕಾಲ್ ಬೂತಿಗೆ ಹೋಗುವುದೆ ಸರಿ ಎನಿಸಿತು. ಆದರೆ, ಅನಿಸಿಕೆಗೆ ಅಪಜಯವಾಯಿತು. “ಆಗಲಿ ಮಿಸೆಸ್ ಪಾಂಡೆ. ವಾರಕ್ಕೆ ಎರಡೇ ಸಲ," ಎಂದಳು.

ಹತ್ತಿರದಲ್ಲೇ ಹಿತೈಷಿಯೊಬ್ಬರ ಮನೆ ಇತ್ತು. ವಾರಕ್ಕೆ ನಾಲ್ಕಾರು ಬಾರಿ ಅಲ್ಲಿಗೆ ಹೋಗಿ, ದೊಡ್ಡ ಪಟ್ಟಿಯನ್ನೆ ಮುಂದಿಟ್ಟಕೊಂಡು ಫೋನ್ ವ್ಯವಹಾರ ಗಳನ್ನೆಲ್ಲ ಮುಗಿಸುತ್ತಿದ್ದಳು ಮೃದುಲಾಬೆನ್. ಟೆಲಿಫೋನ್ ಸಂಭಾಷಣೆ ಒಂದೆರಡು ‍ ಸಲ ಬಹಳ ದೀರ್ಘವಾಯಿತು. ಎರಡು ಫೋನ್‍ಗಳಿದ್ದರೂ ಒಡೆಯರಿಗೆ ಕಿರಿಕಿರಿ ಯಾಗಿತ್ತು. ಇಂಪಾದ ಸ್ವರದಲ್ಲಿ ಅವರೆಂದಿದ್ದರು: “ಮೃದುಲಾಜಿ, ಫೋನ್ ‍ಮಾಡೋದು ಒಂದು ಕಲೆ, ವೃಥಾ ಒಂದು ಪದವೂ ನಮ್ಮ ‍ಬಾಯಿಯಿಂದ ಜಿನುಗ‍ ಬಾರದು ; ಕೇಳುವವರ ಕಿವಿಯೊಳಕ್ಕೆ ಧುಮುಕಬಾರದು. ಚುಟುಕಾದಷ್ಟೂ ಚoದ. ಮಾತು ಮಾಣಿಕ್ಯ ಅನಿಸೋದು ಹಾಗೆ.'

ಉಗುಳು ನುಂಗಿ ಮೃದುಲಾಬೆನ್ ಅಂದಳು:

“ವರ್ತಕ ಚಕ್ರವರ್ತಿಯಾದ ನೀವು ಹಾಗೆ ಹೇಳೋದು ಸಹಜ. ಫೋನ್ ಒಂದು ಸಲ ಟ್ರಿಣ್ ಅನ್ನೋದರೊಳಗೆ ಒಂದು ಲಕ್ಷ ಈಚೆಗೆ ಬಂದಿ‍ರ್‍‍ತದೆ.”

ಹಿತೈಷಿ ವಿಧುರ. ಮಗಳು ಗಂಡನ ಮನೆಗೆ ತೆರಳಿದ್ದಳು. ಮೃದುಲಾಳನ್ನು ಕೆಂಗಣ್ಣಿನಿಂದ ನೋಡುವವರು ಇಲ್ಲಿ ಯಾರೂ ಇರಲಿಲ್ಲ.

ಮೃದುಲಾ ಒಲವಿನ ನೋಟ ಬೀರಿ ಮುತ್ತು ಉದುರಿಸಿದಳು.

“ಇನ್ನೂ ಒಂದು ಕಾರಣಕ್ಕೆ ‍ಚುಟುಕು ಸಂಭಾಷಣೆ ಮೇಲು. ಮಿಗಿತಾಯ ವಾಗೋ ವೇಳೇಲಿ ಬೇರೇನಾದರೂ ಮಾಡಬಹುದು."

“ಹೊತುಗೊತ್ತು ಒಂದೂ ಇಲ್ಲದ ತುಂಟಾಟ ನಿನ್ನದು."

***

ಮೃದುಲಾಬೆನ್ ವಿನೋದ್‍ಗೆ ಕಿಷ್ಕಿಂಧೆಯ ಸಮಾಜ ಸೇವಾ ಧುರೀಣೆಯ ಪರಿಚಯ ಮಾಡಿಕೊಟ್ಟ‍ಳು. “ನನ್ನ ಶಿಷ್ಯೆ” ‍ಎಂದಳು.

ವಿನೋದನೆಂದ:

“ಹಿಂದೆ ಯಾವತ್ತೋ ಒಮ್ಮೆ ಇವರ ವಿಷಯ ಹೇಳಿದ್ದಿರಿ."

ನಾಚಿದ ಪುಟ್ಟವ್ವ ಸೆರಗು ಸರಿಪಡಿಸಿಕೊಂಡಳು.

ಅವನು ತಲೆಗೆ ಬಳೆದಿದ್ದ ದ್ರಾವಕದಲ್ಲಿ ಕಪ್ಪು ಬಣ್ಣ ಮತ್ತು ಅಂಟು ಬೆರೆತಿರ ಬೇಕು. ಯೌವನದ ಧಾರಾಳ ಭ್ರಮೆ. ಒಂದು ದಶಕದ ಹಿಂದೆ ಮೃದುಲಾಳ ಕೇಶ ರಾಶಿಯಲ್ಲಿ ಅಲ್ಲೊಂದು ಇಲ್ಲೊಂದು ಕೂದಲು ಬಿಳಿಯಾಗಿತ್ತು. ಮೂಲದಿಂದಲೆ 2