ಈ ಪುಟವನ್ನು ಪ್ರಕಟಿಸಲಾಗಿದೆ

18 ‍

ಮಿಂಚು

ಕತ್ತರಿಸಿ ತೆಗೆಯಲು ಆಗ ಪುಟ್ಟ‍ವ್ವ ನೆರವಾಗಿದ್ದಳು. ಈಗ ಅವಳ ತಲೆಯಲ್ಲಿ ಬಿಳಿಯ
ಸುಳಿವೇ ಇಲ್ಲ.(ದಾವಕ?) ಅಲ್ಲೊಂದು ಇಲ್ಲೊಂದು ಬಿಳಿಯ ಸುಳಿದಾಟಕ್ಕೆ ಈಗ
ತನ್ನ ‍ತಲೆ ಬಲಿ.
ಮೃದುಲಾ ಯಾವುದೇ ಕೆಲಸ ಕೈಗೊಂಡರೂ ಜಟ್‍ಪಟ್ ಎಂದು ಅದು ಕೊನೆ
ಗಾಣಲೇಬೇಕು.
ಉಪಾಹಾರಕ್ಕೆ ಎಲ್ಲರೂ ಒಟ್ಟಿಗೆ ಕುಳಿತಾಗ ಮೃದುಲಾಬೆನ್ ಅಂದಳು:
"‍ವಿನೋದ್ ಟೈಮ್ಸ್ ನಲ್ಲಿ ಪ್ರಧಾನ ಉಪ ಸಂಪಾದಕ, ಇವನ ‍ಹುಟ್ಟೂರು
ಅಹಮದಾಬಾದ್. ನನ್ನನ್ನು ಒಡಹುಟ್ಟಿದ ಅಕ್ಕ ಅಂತ ಗೌರವಿಸ್ತಾನೆ. ಬರೆವಣಿಗೆಯ
‍ಎಷ್ಟು ಕೆಲಸವಿದ್ದರೂ ಇವನಿಗೆ ತೊಂದರೆ ಕೊಡ್ತೀನಿ. ಇನ್ನು ಹೆಚ್ಚು ‌ದಿವಸ ಒಂಟಿ
ಯಾಗಿರಬೇಡ ಅಂತ ಹೇಳಿದೀನಿ. ‍ಒಪ್ಪಿದಾನೆ. ವಧು ಪರೀಕ್ಷೆ ನಡೀತಾನೇ ಇದೆ.
ಐದಾರು ವರ್ಷಗಳಿಂದ."
ಗೂಢಾರ್ಥ ಅಂಗೈರೇಖೆಯಂತೆ ಸ್ಪಷ್ಟವಾಗಿತ್ತು.‌ಪುಟ್ಟವ್ವ ವಿನೋದನೆಡೆ
ನೋಡಿ ಕಣ್ಣು ಮಿಟುಕಿಸಿದಳು, ಅವನ ತುಟಿಗಳು ಮುಗುಳುನಗೆ ಸೂಸಿದುವು.
ಇದನ್ನು ಗಮನಿಸಿದ ಮೃದುಲಾಬೆನ್ ‍ತುಸು ಮುಖ ಬಾಗಿಸಿ ಸದ್ದು ಮಾಡದೆ ನಕ್ಕಳು.
"ಪುಟ್ಟವ್ವ ಬಂದಿದಾಳೇಂತ ಮದರಾಸಿ ಇಡ್ಲಿ ‍ಮಾಡಿಸಿದೆ.”
ಮೃದುಲಾ ಅಂದುದಕ್ಕೆ ‍ಅತಿಥಿ ಆಕ್ಷೇಪಿಸಿದರು:
“ಕಲ್ಯಾಣನಗರದ ‍ಇಡ್ಲಿ ಅನ್ನಿ."
“ಸರಿ, ಇದು ತಮಿಳರೂ ಕನ್ನಡಿಗರೂ ‍ಹೋರಾಡಿ ಇತ್ಯರ್ಥ ಮಾಡಬೇಕಾದ
ವಿವಾದ.
"ವಿನೋದನೆಂದ :
“ಏನೇ ಹೇಳಿ, ದಕ್ಷಿಣದವರು ಬುದ್ಧಿವಂತರು."
“ಬಾಪೂನಾಡಿನ ನೀನು ಹೀಗೆ ಹೇಳಬಾರದು.”
“ಬಾಪೂನೆ ಅಲ್ಲವಾ ರಾಜಾಜಿ ಬೀಗತನಕ್ಕೆ ಒಪ್ಪಿದ್ದು ?"
ಕೈಬಾಯಿಗಳಿಗೆ ದುಡಿಮೆ. ನಡುನಡುವೆ ಮಾತು,
ವಿನೋದ ನುಡಿದ :
“ಅಕ್ಕನಿಗೆ ‍ಗೊತ್ತು. ‍ರಾಷ್ಟ್ರೀಯ ಭಾವೈಕ್ಯ, ನನಗೆ ಬಹಳ ಪ್ರಿಯವಾದ ವಿಷಯ,"
“ಆ ಸಂಬಂಧವಾಗಿಯೇ ನಿನ್ನನ್ನು ಇಲ್ಲಿಗೆ ಕರೆಸಿದ್ದು."
“ಭಾವೈಕ್ಯ.”
“ದೇಶದ ಎಲ್ಲ ಪ್ರಾಂತಗಳನ್ನೂ-ರಾಜ್ಯಗಳಲ್ಲೂ-ಪ್ರತಿಯೊಂದು ರಾಜ್ಯದ ಎಲ್ಲ
ಜಿಲ್ಲೆಗಳಲ್ಲೂ ಒಂದೊಂದುಗಾಂಧೀ ಅನಾಥಾಶ್ರಮ. ಭಾರತೀ ಅನಾಥಾಶ್ರಮ. ಅಂತ
‌ಬೇಕಾದರೂ ಕರೀಬಹುದು. ‍ನಿನಗೆ ಬಿಟ್ಟಿದ್ದೇವೆ.”
“ದಶಲಕ್ಷದಲ್ಲಿ ಆಗುವಂಥಾದ್ದಲ್ಲ. ದಶಕೋಟಿ ಲೆಕ್ಕಾಚಾರ.”