ಈ ಪುಟವನ್ನು ಪರಿಶೀಲಿಸಲಾಗಿದೆ

50

ಮಿಂಚು

"ಇನ್ನೂ ನಿರ್ಧರಿಸಿಲ್ಲ.”
“ಮತದಾರರ ಪಟ್ಟಿ ಓದಿದೆ ; ತಮ್ಮ ಹೆಸರಿಲ್ಲ.”
“ಮತದಾರರ ಗಣನೆ ಆದಾಗ ನಾನು ರಾಜ್ಯದಲ್ಲಿರಲಿಲ್ಲ.”
“ಹಾಗೇಂತ ಅಂದ್ಕೊಂಡೆ.”
ಚುನಾವಣಾ ಅಧಿಕಾರಿಗೆ ತಿಳಿಸಿ ಈಗ ಸೇರಿಸಿದರಾಯಿತು. ಒಂದು ಅರ್ಜಿ
ಫಾರ್ಮ್ ತನ್ನಿ.”
“ತರ್ತೇನೆ, ಸ್ವಲ್ಪ ಖರ್ಚು ಮಾಡಿದರೆ ಸುಲಭವಾಗಿ ಆಗುತ್ತೆ."
“ಛೇ ! ಛೇ ! ಖರ್ಚಿನ ಪ್ರಶ್ನೆಯಲ್ಲ. ಇದು ತತ್ವಕ್ಕೆ ಸಂಬಂಧಿಸಿದ್ದು : ದಿಲ್ಲಿಗೆ
ತಿಳಿಸ್ತೇನೆ:”
ತಿಳಿಸಿದಾಗ ದಿಲ್ಲಿ ಹೇಳಿತು :
“ಚಿಂತೆ ಬೇಡ: ಚುನಾವಣಾ ಕಮಿಶನರ್ ನಾಳೆ ನಿಮ್ಮನ್ನು ಕಾಣ್ತಾನೆ.”
ಆತ ಬಂದು ಭೇಟಿಯಾದ, ನಸುಕಿನಲ್ಲಿ, ಗೋಪ್ಯವಾಗಿ, ಪರಶುರಾಮನ
ಕೆಲಸವನ್ನು ಆತನೇ ಮಾಡಿದ್ದ. ಸೌದಾಮಿನಿದೇವಿ ಅವಿವಾಹಿತ: ತಂದೆ ದಿವಂಗತ
ಆನಂದವರ್ಧನ.....
“ವಿಳಾಸ ಯಾವುದು ಕೋಡೋಣ ?” ಆಕೆ ಕೇಳಿದಳು:
“ಕಾರ್ಯಾಲಯದ ಅನೆಕ್ಸ್ ಎಂದರೆ ಕಾನೂನುಬದ್ಧವಾಗಿದೆ. ಅರ್ಜಿಗೆ
ಸ್ವಲ್ಪ ಹಿಂದಿನ ತಾರೀಕು ಹಾಕ್ತನೆ, ಆಕ್ರಮವಾಗೋದಿಲ್ಲ.”
“ಈ ಕೆಲಸ ಆಯೂಂತ ದಿಲ್ಲಿಗೆ ನಿಮ್ಮ ಚೀಫ್‌ಗೆ ಫೋನ್ ಮಾಡಿಬಿಡಿ. ನಮ್ಮ
ಕಾತ್ಯಾಲಯಕ್ಕೆ ನಾನೂ ತಿಳಿಸ್ತೇನೆ.”
“ತುಂಬಾ ಉಪಕೃತ, ಮಾತಾಜಿ:”
ಪಕ್ಷದ ಒಳಗಿನ ಅಥವಾ ಹೊರಗಿನ ವಿರೋಧಿಗಳಿಗೆ ಸುಳಿವು ಸಿಗುವುದಕ್ಕೆ
ಮೊದಲೇ ಸೌದಾಮಿನಿ ಪಾದಕ್ಕೆ ನೆಟ್ಟಿದ್ದ ಮುಳ್ಳನ್ನು ನೋವಾಗದಂತೆ ತೆಗೆದು
ಬಿಟ್ಟಿದ್ದಳು:
ಒಂದು ರಾತ್ರಿ ಸೌದಾಮಿನಿಯದೇ (ಅಲ್ಲ, ಹಳೆಯ ಹೆಸರಿನ ಹೆಂಗಸು) ನೆನಪಾಗಿ
ರಂಗಸ್ವಾಮಿ ಬೆಚ್ಚಿಬಿದ್ದರು. ದೀಪ ಹಚ್ಚಿ ಚುನಾವಣಾ ಮತದಾರರ ಪಟ್ಟಿಯನ್ನು
ಎರಡೆರಡು ಸಲ ತಮ್ಮ ತೀಕ್ಷದೃಷ್ಟಿಗೆ ಗುರಿಪಡಿಸಿದರು, ಇರುವ ಸಾಧ್ಯತೆ ಇದ್ದ
ಎರಡು ಮೂರು ಡಿವಿಜನುಗಳಲ್ಲಿ ಪುಟ್ಟವ್ವ ಇರಲಿಲ್ಲ. ಅನುಬಂಧದಲ್ಲಿ ಸೌದಾಮಿನಿ
ದೇವಿ ವಿರಾಜಮಾನಳಾಗಿದ್ದಳು:
ರಂಗಸ್ವಾಮಿ ಒಂದು ನಿದ್ದೆ ಮಾತ್ರೆ ನುಂಗಿ ಮಲಗಿದರು.
ಸೌದಾಮಿನಿ ತಮ್ಮ ಮಾಜಿ ಗೆಳತಿ ಎಂದಾದರೆ ವ್ಯಾಪಾರ ಬಿರುಸಾಗಿ ನಡೆದಿರಲೇ
ಬೇಕು_ಇದು ನಾಯಕರ ಅಂಬೋಣ: ರಾಷ್ಟ್ರ ಪಕ್ಷದ ಕಾದ್ಯಾಲಯದ ಮೂಲೆ
ಮೂಲೆಗಳನ್ನೂ ಅರಿತಿದ್ದ ನಾಯಕರು ಸತ್ಯಶೋಧನೆಗೆ ತೊಡಗಿದರು. ಒಬ್ಬ ಸ್ವಯಂ