ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

51

ಸೇವಕನಿಗೆ ಟಿಕೆಟಿನ ಬೆಲ್ಲ ಹಚ್ಚಿದರು. ಆರೆಂಟು ದಿನ ಆ ಸೌದಾಮಿನಿ ಮೇಲೆ ಕಣ್ಣಿಡಲು
ಆದೇಶವಿತ್ತರು,
“ಹಗಲು ಮಾತ್ರ ಸಾಕೊ ಕಾವಲು ?”
“ರಾತ್ರಿಯೂ ಮುಖ್ಯ : ರಾತ್ರೆಯೇ ಮುಖ್ಯ.”
“ನಿದ್ದೆ ಕೆಡಬೇಕಾಗ್ತದೆ.”
“ಸುಮ್ಮನೆ ಬರದೂ ಶಾಸಕಪದವಿ ?”
“ಶಾಸಕನಾದ ಮೇಲೆ ಮಂತ್ರಿಸ್ಥಾನ....”
“ಆಗಲಪ್ಪ ಆಗಲಿ, ಬೇಕಾದರೆ ಹಗಲು ನಿದ್ರಿಸು, ರಾತ್ರ, ಕಾರ್ಯಾಯದಲ್ಲಿ
ಕಾವಲಿರುವವನ ಹಾಗೆ ನಟಿಸು. ಇದು ತಮಾಷೆಯಲ್ಲ: ತುಂಬಾ ಸೀರಿಯಸ್ಸು."
“ಯಾರಿಗೆ ?”
“ನಮ್ಮೆಲ್ಲರಿಗೂ, ಕತ್ತಲಾದೇಲೆ ಬೆಳಗಾಗುವವರೆಗೂ ಅವಳೇನು ಮಾಡ್ತಾ
ಇಂತ ಏಳು ರಾತ್ರಗಳ ವರದಿ ಕೊಡು.”
ಕಾವಲಿನವರಿಗೆ ಕುಡಿಸಬೇಕಾಗುತ್ತೆ.”
ನೂರರ ಎರಡು ನೋಟನ್ನು ನಾಯಕರು ಅವನಿಗೆ ಕೊಟ್ಟರು.
“ಅವನಿಗೆ ಕುಡಿಸೋ ಬದಲು ಎಲ್ಲಾದರೂ ನೀನೇ ಕುಡಿದು ಮಲಗಿದೆಯೋ
ನೀನು ಎಂ.ಎಲ್.ಎ.ಯೂ ಆಗೋದಿಲ್ಲ, ಮಿನಿಸ್ಟರೂ ಆಗೋದಿಲ್ಲ.”
“(ಹಾಡುತ) ಕೊಟ್ಟ ಮಾತಿಗೆ ಮಾರಲಾರೆನು, ಕೆಟ್ಟಯೋಚನೆ ಮಾಡಲಾರೆನು.”
“ಹೀಗಿರಬೇಕು ನಮ್ಮ ಗೋವು.”
ನಾಯಕರೆದ್ದು ಸ್ವಯಂ ಸೇವಕನ ಬೆನ್ನು ತಟ್ಟಿದರು,
ರಾತ್ರಿ ಎಂಟು ಗಂಟೆಗೆ ಕ್ಯಾರಿಯರ್ ಊಟ. ಮುಂದೆ ಹತ್ತು ಗಂಟೆಯವರೆಗೆ
ಜಿಲ್ಲಾ ವಕ್ಷ ಪ್ರಮುಖರ ಜತೆ ಪತ್ರವ್ಯವಹಾರ (9ಘಂಟೆಗೊಮ್ಮೆ ನ್ಯೂಸ್ ಶ್ರವಣ),
ಹತ್ತರ ಬಳಿಕ ಸಂಜೆ ಬಂದ ಶೀಘ್ರಲಿಪಿಕಾರ ಟೈಪಿಸ್ಟ್ನಿಗೆ ಬಿಡುಗಡೆ ಬಳಿಕ ಫೋನ್
ಕರೆಗಳು ಅಲ್ಲಿಗೆ, ಇಲ್ಲಿಗೆ ಹನ್ನೊಂದಕ್ಕೆ ಟ್ರಂಕಿನಿಂದ ಜಾಢ ತಗೆದು ಚಮಚ ತುರುಕಿ
ಏನೋ ಸೇವನೆ, ಮಂಚದ ಕೆಳಕ್ಕೆ ಟ್ರಂಕನ್ನು ತಳ್ಳುವುದು, ಕಾಲು ತೊಳೆಯುವ
ಮಗ್ಗುಲು ಕೊಠಡಿಗೆ ಹನ್ನೆರಡು ಘಂಟೆಗೆ ಸ್ವಿಚ್ ಆಫ್, ಬಾಗಿಲು ಒಳಗಡೆಯಿಂದ
ಭದ್ರ, ನಿದ್ದೆಯ ಉಸಿರಾಟ: ಕಿಟಿಕಿಯ ದಂಡೆ ಏರಿ ತೆರೆದಿದ್ದ ಮೇಲ್ಬಾಗದಿಂದ
ಇಣಿಕಿ ನೋಡಬೇಕು, ಮಸುಕು ಮಸುಕು. ಮಲಗಿದ್ದಾಳೆ. (ಇಲಿಯಾಗಿ ಒಳಹೊಕ್ಕು
ಮತ್ತೆ ನಾನು ನಿಜವೇಷಧಾರಣೆ ಮಾಡುವುದು ಸಾಧ್ಯವಿದ್ದರೆ ! ಕೆಳಕ್ಕಿಳಿದ.) ಐದು
ಘಂಟೆಗೆ ನೀರಿನ ಸದ್ದು, ಕಿಟಕಿ ಹತ್ತಿದ. ಅತ್ಯಂತ ಕಡಮ ಪೋಷಾಕು ಧರಿಸಿ
ಯೋಗಾಸನ, ಆರು ಘಂಟೆಗೆ ಸ್ನಾನ (ಯೋಗಾಸವನ್ನು ಪೂರ್ತಿ ನೋಡಬೇಕೆನಿಸಿತ್ತು,
ಆದರೆ ಕಿಟಿಕಿ ದಂಡೆಯ ಮೇಲೆ ಕೆಲ ನಿಮಿಷಗಳಿಗಿಂತ ಹೆಚ್ಚು ಇರಬಾರದು):
ಬಾಗಿಲು ತೆರೆಯಿತು,