ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

67

“ಅವೆರಡೂ ಇದ್ದ ಜಾಣಪ್ಪನವರ ಸಂಪುಟದ ಸಾಧನೆ ಏನು ?"
ಧ್ವನಿ ಏರಿತಲ್ಲ? ಸಂಯಮ ಕಳೆದುಕೊಳ್ಳಬಾರದು-ಎಂದುಕೊಂಡಳು
ಸೌದಾಮಿನಿ.
“ಸಪ್ತರ್ಷಿ ಮಂಡಲದಂತಿರೋ ತಮ್ಮ ಸಂಪುಟದಲ್ಲಿ ಮಹಾವ್ಯಾಧ ಯಾರು?"
“ಅದು ಕೇಳಬೇಕಾದ ಪ್ರಶ್ನೆಯೇ ಅಲ್ಲ. ಮುಖ್ಯಮಂತ್ರಿಯೇ ಮಹಾವ್ಯಾಧ!”
“ಪುಲಹ, ಕ್ರತು, ಧ್ರುವ, ಲುಬ್ಧಕ, ಅಗಸ್ತ್ಯ, ಅಭಿಜಿತ್ ಈ ಹೆಸರುಗಳನ್ನು
ಸಂಪುಟದಲ್ಲಿ ಯಾರು ಯಾರಿಗೆ ಅನ್ವಯಿಸಬಹುದು?”
“ಅದನ್ನು ನಿಮಗೇ ಬಿಟ್ಟಿದ್ದೇನೆ. ನಮ್ಮ ಆಳ್ವಿಕೆಯಲ್ಲಿ ಪತ್ರಿಕೆಗಳಿಗೆ ಸಂಪೂರ್ಣ
ಸ್ವಾತಂತ್ರ್ಯವಿರ್ತದೆ."
“ತಮ್ಮ ಪತ್ರಿಕಾ ವಾತ್ಸಲ್ಯಕ್ಕಾಗಿ ನಾವು ಋಣಿಗಳು."
“ನೀವು ? - -?"
“ಕಲ್ಯಾಣನಗರದ ಸುದ್ದಿಗಾರರ ಸಂಘದ ನೂತನ ಅಧ್ಯಕ್ಷ.”
“ಬದಲಾವಣೆಯೇ ಬದುಕಿನ ಅಂತಃಸತ್ವ. ಬೇಕಾದರೆ ಬರಕೊಳ್ಳಿ.”
“ಬದಲಾವಣೆಯೇ ರಾಜಕೀಯದ ಅಂತಃಸತ್ವ ಎನ್ನಬಹುದೆ?"
"ಧಾರಾಳವಾಗಿ !"
“ನಾಡಿನ ಜನತೆಗೆ ನೂತನ ಮುಖ್ಯಮಂತ್ರಿಯಾಗಿ ನಿಮ್ಮ ಸಂದೇಶವೇನು?"
“ಆಕಾಶವಾಣಿಯಲ್ಲಿ ಇವತ್ತು ರಾತ್ರೆ ನಮ್ಮ ಪ್ರಸಾರ ಭಾಷಣವಿದೆ. ಅದರ
ಪ್ರತಿಗಳನ್ನು ನಮ್ಮ ವಾರ್ತಾ ಇಲಾಖೆ ಕೊಡ್ತದೆ. ಅದನ್ನು ನೀವೆಲ್ಲರೂ ಮುದ್ರಿಸ
ಬಹುದು."
“ಅದು ವಿಸ್ತೃತ ಲೇಖನವಾಯಿತು. ದೇಶ ವಿದೇಶಗಳ ಜನರ ಮನಸ್ಸಿಗೂ
ನಾಟುವಂತೆ ಚುಟುಕಾಗಿ ನಾಲ್ಕು ವಾಕ್ಯ ಹೇಳಿದರೆ ಚೆನ್ನಾಗಿರುತ್ತೆ.”
“ಆಗಲಿ, ಅದಕ್ಕೇನು? ಆರಾಮ್ ಹರಾಮ್ ಹೈ! ಜೈ ಕಿಸಾನ್ ಜೈ ಜವಾನ್!
ಸರಕಾರದ ಕೆಲಸ ದೇವರ ಕೆಲಸ! ಕೀರುತಿಗೆರಡು ಗಂಡು ಆರತಿಗೊಂದು ಹೆಣ್ಣು !”
ಒಬ್ಬ ನಡುವೆ ಬಾಯಿ ಹಾಕಿದ :
“-ಸರಕಾರ ಮುದ್ರಿಸಿರೋ ಭಿತ್ತಿ ಪತ್ರಗಳಲ್ಲಿ 'ಆರತಿಗೊಂದು ಕೀರುತಿ
ಗೊಂದು' ಅಂತ ಮಾತ್ರ ಇದೆ.”
“ಮುದ್ರಣದೋಷವಿದ್ದೀತು. ವಿಚಾರಿಸ್ತೇವೆ.”
“ಆರತಿಗೆ ಕೀರುತಿಗೆ ಎರಡಕ್ಕೂ ಹೆಣ್ಣು ಸಲ್ಲುವುದಿಲ್ಲವೆ? ತಮ್ಮ ದೃಷ್ಟಾಂತ
ವನ್ನೇ ತಗೊಳ್ಳಿ.”
“ಜನಸಾಮಾನ್ಯರಿಗೆ ನಮ್ಮನ್ನು ಹೋಲಿಸಬಾರದು.”
"ತಪ್ಪಾಯ್ತು ಕ್ಷಮಿಸಿ."