ಈ ಪುಟವನ್ನು ಪರಿಶೀಲಿಸಲಾಗಿದೆ



68

ಮಿಂಚು

ಮತ್ತೊಬ್ಬ ಕೇಳಿದ :
“ಮುಖ್ಯಮಂತ್ರಿಯಾಗಿ ತಮ್ಮ ವೈಯಕ್ತಿಕ ಹವಾಸಗಳೇನು?"
“ಒಂದನೇದು ಜನಸೇವೆ, ಎರಡನೇದು ಜನಸೇವೆ, ಮೂರನೇದೂ ಜನಸೇವೆ."
ಮೂವರು ನಾಲ್ವರು ಒಪ್ಪಿಗೆ ನಕ್ಕರು, ಮುಖ್ಯಮಂತ್ರಿಯೂ ನಕ್ಕರು.
“ಎಂದೂ ಇರದಿದ್ದ ಬಹುಮತ ಈ ಸಲ ರಾಷ್ಟ್ರಪಕ್ಷಕ್ಕೆ ದೊರೆತಿದೆ. ಬಂಡೆ
ಬಹುಮತ!"
“ಬಂಡೆ ಬಹುಮತ ಪದಪ್ರಯೋಗ ಚೆನಾಗಿದೆ. ನಮ್ಮ ಪಕ್ಷದಿಂದ ದೂರ
ಸರಿದು ಹೊಸ ಪಕ್ಷ ರೂಪಿಸಿದವರು ಹತಾಶರಾದರು, ಅವರಿಗೆ ದೊರೆತಿರೋದು
ಐದು ಸ್ಥಾನ.
ಸಮತಾದವರಿಗೆ ಒಂದೇ ಸ್ಥಾನ."
“ಇದು ನಿಮ್ಮ ವೈಯಕ್ತಿಕ ವಿಜಯ ಅಂತ ಎಲ್ಲರೂ ಅಭಿಪ್ರಾಯ ಪಡ್ತಾರೆ.
ನಿಮ್ಮ ಪ್ರತಿಕ್ರಿಯೆ..."
“ಮೌನ."
“ಅಧಿಕಾರ ಸ್ವೀಕಾರದವರೆಗೂ ಮಾತಾಜಿ ಆಗಿದ್ದಿರಿ."
“ಇನ್ನೂ ಮಾತಾಜಿಯೇ. ನಿಸ್ಸಂಕೋಚವಾಗಿ ಎಲ್ಲರೂ ಹಾಗೆ ಕರೀಬಹುದು.”
“ನಿಮಗೆ ವಿರೋಧ ಬರೋದಿದ್ದರೆ ಅದು ನಿಮ್ಮ ಪಕ್ಷದೊಳಗಿಂದ ಮಾತ್ರ.”
“ಪತ್ರಿಕೆಗಳು ಪಕ್ಷದ ಆಂತರಿಕ ವಿಷಯದಲ್ಲಿ ಕೈ ಹಾಕಬಾರದು. ಎಲ್ಲೆಲ್ಲೂ
ಶಾಂತಿ ಸಮಾಧಾನ ನೆಲೆಸುವಂತೆ ಆಡಳಿತಕ್ಕೆ ನೆರವಾಗಬೇಕು:"
“ತಿಂಗಳಿಗೊಮ್ಮೆ ಪತ್ರಿಕಾಗೋಷ್ಠಿ ನಡೆಸಿದರೆ ಆದೀತು ಅಂತ ಒಂದು ಸಲಹೆ."
“ಆಗಬಹುದು. ಅದನ್ನು ಭೋಜನ ಪತ್ರಿಕಾಗೋಷ್ಠಿ ಅಂತ ಕರೆಯೋಣ!"
ಗೋಷ್ಠಿಯಲ್ಲಿ ನೆರೆದಿದ್ದ ಪತ್ರಿಕಾ ಪ್ರತಿನಿಧಿಗಳೆಲ್ಲ ಚಪ್ಪಾಳೆ ತಟ್ಟಿದರು.
ಮುಖ್ಯಮಂತ್ರಿ ಎದ್ದರು. ಗೋಷ್ಠಿ ಮುಗಿಯಿತೆನ್ನುವುದಕ್ಕೆ ಸೂಚನೆ.
***
ಖಾತೆಗಳ ಹಂಚಿಕೆಯನ್ನು ಕೈಗೆತ್ತಿಕೊಂಡಾಗ ಆರು ಇರುವೆಗಳು ಒಟ್ಟಿಗೆ ಕಚ್ಚಿ
ದಂತಾಯಿತು ಸೌದಾಮಿನಿಗೆ.
ಆಕೆ ಅಂದಳು :
“ಪ್ರತಿಯೊಬ್ಬರಿಗೂ ಮೂರು ನಾಲ್ಕು ಖಾತೆಗಳು, ಸೌದಾಮಿನಿ ಸಂಪುಟದಲ್ಲಿ
ಮಂತ್ರಿಗಳು ಕೆಲಸವಿಲ್ಲದೆ ನೊಣ ಹೊಡೀತಿದಾರೇಂತ ಆಗಬಾರದು. ದೇಶ
ದಲ್ಲಿ ಬೇರೆ ಎಲ್ಲರೂ ಇಲ್ಲದ ಸಪ್ತರ್ಷಿ ಮಂಡಲ ಇದು. ಪ್ರಧಾನಿ ಮೆಚ್ಚಿಕೊಂಡಿ
ದ್ವಾರೆ. ಪಕ್ಷಾಧ್ಯಕ್ಷರು, ಮಹಾಕಾರ್ಯದರ್ಶಿ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ."