ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

"ನನ್ನ ತಂಗಿ, ಗಂಡ ಪೂನಾದಲ್ಲಿದ್ದಾನೆ. ಮುಟ್ಟಿಸಿ ಬರಬೇಕು."

ಆಗಲೆ ಆದಿಶೇಷನಾಗಿದ್ದವನು ಆ ಹುಡುಗಿಯನ್ನೂ ಕಬಳಿಸುತ್ತಿದ್ದ. ತನ್ನನ್ನೂ ಯಾರನ್ನು ಹೆಚ್ಚು? ಯಾರನ್ನು ಕಮ್ಮಿ?

ದೃಷ್ಟಿಯ ಆಟ ಮೈಗಂಟಿದ ಚಟ. ಈಗ ಮಾತ್ರ ಬೇಕಾಗಿರುವುದು ದೇಹಕ್ಕೆ ವಿಶ್ರಾಂತಿ, ದೇಹಕ್ಕೂ ಮನಸ್ಸಿಗೂ.

"ನೀವು ಮುಂಬಯಿಗೆ?"

ಯುವಕ ಕೇಳಿದ್ದ, ಸಟೆಯಾಡುವ ಅಗತ್ಯವಿಲ್ಲ.

"ಹೌದ್ರೀ..."

"ನಾನು ಮುಂಬಯಿ ನೋಡಿಲ್ಲ."

ಸುಮ್ಮನಿದ್ದೆ, ತನ್ನ ಯೌವನ ಆರಂಭವಾದುದೇ ಅಲ್ಲಿ ಎನ್ನಲೆ? ಈ ಸಂಭಾಷಣೆ ತನಗಿಷ್ಟವಿಲ್ಲ. ತಾನು ಮುಂದುವರಿಸಲಿಲ್ಲವೆಂದು, ಆತ ಮೌನ ತಳೆದ.

ಗಾಂಧಿ ಮಲಗಲು ಇಡೀ ಪೀಠಸಾಲೇ ಇರುತ್ತಿತ್ತೇನೊ. ಪ್ರಾಥಮಿಕ ಶಾಲೆ ಯಲ್ಲಿ ಮಧ್ಯಾಹ್ನದ ಬಿಡುವಿನಲ್ಲಿ ಇಬ್ಬರು ಅಧ್ಯಾಪಕರು ಬೆಂಚುಗಳ ಮೇಲೆ ಮಲಗು ತಿದ್ದರು. ಹುಡುಗರ ಸದ್ದು ಎಷ್ಟೇ ಇರಲಿ, ಮಾಸ್ತರರ ಚುಟುಕು ನಿದ್ದೆಗೆ ಅದು ಅಡ್ಡಿಯಾಗುತ್ತಿರಲಿಲ್ಲ. ಮಹಾತ್ಮರು ಮಲಗಿದಾಗಲೋ ಸದ್ದು ರೈಲುಗಾಡಿಯ ದೊಂದೇ.

ರಾಷ್ಟ್ರದ ಹಿತವನ್ನು ಗಮನದಲ್ಲಿಟ್ಟವರು ರಾಷ್ಟ್ರಪಿತನನ್ನು ನಿಂದಿಸುವುದುಂಟೆ? ಇದು ಅಧಮರು ಮಾಡುವ ಕೆಲಸ. 'ನಿಂದಕರಿರಬೇಕು' ಎಂಬ ವಚನಾಮೃತವೇ ಇಲ್ಲವೆ? ಗಾಂಧೀ ದೇವರೇ ಸರಿ. ಈಗ ಆಗಬೇಕಾಗಿರುವುದು ಊರೂರಲ್ಲಿ ಗಾಂಧೀ ದೇವಾಲಯ, ಹರಿಜನರಿಗೆ ಪ್ರವೇಶ? ಇದೊಳ್ಳೆಯ ತಮಾಷೆ. ತನ್ನದು ಸಡಿಲ ಕೊರಳಿನ ಕುಪ್ಪಸ. ಆ ಕಡೆ ಮೇಲೆ ಮಲಗಿರುವ ಮನುಷ್ಯನ ದೃಷ್ಟಿ ಒಳ ಹೊಕ್ಕು ತನ್ನ ವಕ್ಷಸ್ಥಲವನ್ನು ನೋಡುತ್ತಿದೆ. ಗಾಂಧೀಜಿಯ ಹಿಂದೆ ಮುಂದೆ ಎಷ್ಟೊಂದು ಜನ ಲಲನಾಮಣಿಗಳಿದ್ದರು! ಛೇ! ಛೇ! ಗಾಂಧೀಜಿಯ ಬಗೆಗೆ ಇಂಥ ವಿಚಾರ ಸಲ್ಲದು, ಉಪ್ಪು ಖಾರ ತಿನ್ನುವ ಹುಲುಮಾನವರೆಲ್ಲಿ? ಮೇಕೆ ಹಾಲ ಇಷ್ಟೆ ಸೇವಿಸುವ ಅತಿಮಾನವನೆಲ್ಲಿ? ಅವರು ವೃದ್ಧರಾದಾಗ ತಾನು ಲಂಗ ತೊಡುತ್ತಿದ್ದ ಮೊದ್ದು ಹುಡುಗಿ. ಆಗ ಅವರೇನಾದರೂ ತನ್ನೂರಿಗೆ ಬಂದಿದ್ದರೆ ಖಂಡಿತ ಉಮ್ಮ ಕೊಡುತ್ತಿದ್ದರು. ಹತ್ತಿಪ್ಪತ್ತು ವರ್ಷ ಮೊದಲೇ ಹುಟ್ಟಿದ್ದರೆ ತಾನೀಗ ರಾಷ್ಟ್ರದ ನಾಯಕ ಮಣಿಗಳಲ್ಲಿ ಒಬ್ಬಳಾಗುತ್ತಿದ್ದೆ. ಇರಲಿ. ಈಗಲಾದರೂ ಆಗಿರುವ ನಷ್ಟವೇನು? ಕಿಷ್ಕಿಂಧೆ ರಾಜ್ಯದ ಮುಖ್ಯ ಪಟ್ಟಣವಾದ ಕಲ್ಯಾಣನಗರ ದಲ್ಲಿ ತಾನು ಪ್ರತಿಷ್ಠಿತಳೇ ಅಲ್ಲವೆ? ಅದೇ ಆಗ ಬಿರಿದಂತಿದ್ದ ನಿತ್ಯಪುಷ್ಟವಾದ ತನ್ನ ಸುತ್ತಲೂ ಹಾರಾಡುತ್ತಿದ್ದ ಆ ದುಂಬಿಗಳ ವಿಷಯದಲ್ಲಿ ತಾನು ತುಸು ಎಚ್ಚರ ವಹಿಸ ಬೇಕಾಗಿತ್ತು. ಅರಗಿನ ಮನೆಯಾಯಿತೆ ತನ್ನ ಕನಸಿನ ಮನೆ? ದೇಶದ ಸ್ವಾತಂತ್ರ್ಯ