ಈ ಪುಟವನ್ನು ಪರಿಶೀಲಿಸಲಾಗಿದೆ

82

ಮಿಂಚು

ಬರಿಯ ಕ್ರೀಡಾಗೋಷ್ಠಿಗೆ ಬಂದಂತಾಯಿತೆಂದು ಸಿಡಿಮಿಡಿಗೊಳ್ಳುತ್ತಿದ್ದ
ಒಬ್ಬ ವರದಿಗಾರ ಏರಿದ ಧ್ವನಿಯಲ್ಲಿ ಕೇಳಿದ:
“ಮುಂಗಡ ಪತ್ರ ಅಧಿವೇಶನ ಹತ್ತಿರ ಬಂತು.”
“ಹೌದು, ಸದ್ಯದಲ್ಲೇ ದಿಲ್ಲಿಗೆ ಹೋಗಲಿದ್ದೇವೆ."
“ಕಿಷ್ಕಿಂಧೆಗೊಂದು ಮೇಲ್ಮನೆ ರೂಪಿಸುವ ವಿಚಾರ ಇದೆಯೆ?”
ಮೇಲ್ಮನೆ ಬೇಕು ಅಂತ ಯಾರು ಕೇಳಿದ್ದಾರೆ? ಕೆಳಮನೆಯಲ್ಲಿಯೇ ಸಾಕಷ್ಟು
ಸ್ಥಳ ಇನ್ನೂ ಖಾಲಿ ಇದೆಯಲ್ಲ ?”
“ಸರಕಾರದ ಕಚೇರಿಗಳಿಗಾಗಿ ಇನ್ನೊಂದು ಭವನ ಬೇಡವೆ ?”
“ಪರಿಶೀಲಿಸಬೇಕಾದ ಸಂಗತಿ. ನಿರ್ಮಾಣ ಅಗತ್ಯ ಎನಿಸಿದರೆ ಫ್ರಾನ್ಸಿನಿಂದ
ಲೋಕವಿಖ್ಯಾತ ವಾಸ್ತು ಶಿಲ್ಪಿಯನ್ನು ಕರೆಸಬಹುದು.”
“ಕೀಟಲೆ' ಎಂಬ ಅಡ್ಡ ಹೆಸರಿದ್ದ ಪತ್ರಿಕಾ ಪ್ರತಿನಿಧಿ ಪ್ರಶ್ನೆ ಮುಂದಿಟ್ಟ :
“ತಾಜಮಹಲ್‌ನ ನೀಲಿನಕಾಶೆ ಬರೆದ ವಾಸ್ತುಶಿಲ್ಪಿ ವಿದೇಶೀಯ ಎಂಬುದಕ್ಕೆ
ದಾಖಲೆ ಇಲ್ಲ."
'ನೃಪತುಂಗ'ದ ಒಡೆಯರಿಂದ ಪ್ರೇರಿತರಾಗಿ ನೀರಾವರಿ ಸಚಿವ ಮುಖ್ಯ
ಮಂತ್ರಿಯ ಕಿವಿಯಲ್ಲಿ ಉಸುರಿದ :
“ಭೋಜನ ಸಿದ್ಧ ವಾಗಿದೆ.”
“ಸರಿ” ಎಂದಳು ಮುಖ್ಯಮಂತ್ರಿ. “ಕಡೇ ಪ್ರಶ್ನೆಗೆ ಉತ್ತರ ನೀಡಿದ ಮೇಲೆ
ಗೋಷ್ಠಿ ಬರಖಾಸ್ತಾಗದೆ, ಏನು ಕೇಳಿದಿರಿ ? ತಾಜಮಹಲ್....ಈ ವ್ಯತ್ಯಾಸ
ವನ್ನು ದಯವಿಟ್ಟು ಗಮನಿಸಿ : ಅದು ಪ್ರೇಮಸೌಧ, ನಮ್ಮದು ಕಾರಭವನ,
ಬನ್ನಿ, ಇನ್ನು ಊಟ !”
ಕೊನೆಯ ಸುತ್ತಿನ ಕೈ ಚಪ್ಪಾಳೆ, ಬಳಿಕ 'ಚಪ್ಪರಕ್ಕೆ ದೌಡು.
ಸಚಿವರೆಲ್ಲ ಸಪಕರಾಗಿ ಬಂದಿದ್ದರು, ಆ ಮಂತ್ರಿಣಿಯರ ಕಣ್ಣೆಲ್ಲ ಸೌದಾ
ಮಿನಿಯ ಮೇಲೆ. ನೀರಾವರಿ ಮಂತ್ರಿ ಸಂಪುಟದ ಮುಖ್ಯಸ್ಥೆಯನ್ನು ಅವರೆಲ್ಲ ಕುಳಿ
ತಿದ್ದ ಕಡೆಗೆ ಕರೆದೊಯ್ದ. ಈಗ ಸೌದಾಮಿನಿಗೆ, ಕುಳಿತಲ್ಲಿಂದ ಎದ್ದು ವಂದನೆ ಸಲ್ಲಿಸಿ
ದವರ ನಾಮಾವಳಿಯನ್ನು ಆಲಿಸಿ ದೃಷ್ಟಿ ತಕ್ಕಡಿಯಲ್ಲಿ ಒಬ್ಬೊಬ್ಬರನ್ನೂ ತೂಗುವ
ಕೆಲಸ, “....ರಂಗಧಾಮರ ಪತ್ನಿ” ಎಂಬ ಮಾತು ಕಿವಿಗೆ ಬಿದ್ದಾಗ, ಸೌದಾಮಿನಿ
ತನ್ನ ಕಣ್ಣುಗಳನ್ನು ಕಿರಿದುಗೊಳಿಸಿ ನೋಡಿದಳು, ರಂಗಧಾಮ ಹತ್ತಿರ ಎಲ್ಲೂ
ಕಾಣಿಸಲಿಲ್ಲ. “ಧ್ರುವ ನಕ್ಷತ್ರಕ್ಕೆ ಪ್ರಾಸು ಸಾಲದಲ್ಲ-ಯಾಕೆ ? ಅನಿಸ್ತು.
ಈಗ ಕಾರಣ ಗೊತ್ತಾಯ್ತು. ನಿಮ್ಮ ಯಜಮಾನ್ರಿಗೆ ಟೆನ್ನಿಸ್ ಆಡೋದಕ್ಕೆ
ಬಿಡೀಮ್ಮ, ಪ್ರಾಕ್ಟಿಸು ತಪ್ಪಬಾರು, ಎಲ್ಲೂ ಕೂತ್ಕೊಳ್ಳಿ.”
ಫೋನ್ ಕರೆ ತಲಪಿದೊಡನೆ ರಾಜ್ಯಪಾಲರೂ ಆಗಮಿಸಿದರು.