ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

83

ಪರಶುರಾಮನಿಗೆ ಸೌದಾಮಿನಿ ಮೊದಲೇ ಸೂಚಿಸಿದ್ದಳು : ಊಟಕ್ಕೆ ಹಿನ್ನೆಲೆ
ಯಾಗಿ ಇನಿ ದನಿಯಲ್ಲಿ ಲತಾಮಂಗೇಶ್ಕರಳ ಮಾರಾಭಜನ್ ಕೇಳಿಸಬೇಕು. ಈ
ಯೋಜನೆ ಫಲಕಾರಿಯಾಯಿತು. ಮುಖ್ಯಮಂತ್ರಿಯ ಸದಭಿರುಚಿಯನ್ನು ಎಲ್ಲರೂ..
ಹಾಡಿ ಹೊಗಳುವವರೇ.
ಹೂದೋಟದ ಮಹಾದ್ವಾರದ ಬಳಿ ಸಶಸ್ತ್ರ ಪೊಲೀಸರು ನಾಲ್ವರು.
ಅವರೊಂದಿಗೆ ವೈಯಕ್ತಿಕ ಅಂಗ ರಕ್ಷಕರು ಇಬ್ಬರು. ಒಂಭತ್ತರ ಬಳಿಕ ನಿರ್ಗಮನಕ್ಕೆ
ಆರಂಭ. ಮೊದಲು ರಾಜ್ಯಪಾಲರು ; ಬಳಿಕ ಚೀಫ್ ಸೆಕ್ರೆಟರಿ ; ಗಣ್ಯರು ಅವರ
ಕಾರಿನಲ್ಲಿ ಇವರ ಕಾರಿನಲ್ಲಿ, ಸರಕಾರದ ಜೀಪುಗಳಲ್ಲಿ ಪತ್ರಿಕಾ ಪ್ರತಿನಿಧಿಗಳು.
ಸೌದಾಮಿನಿ ಸೂಚನೆ ಇತ್ತಮೇಲೆ ಮಂತ್ರಿಗಳು, ತಮ್ಮ ಪರಿವಾರದೊಂದಿಗೆ,
ತನ್ನ ಕೊಠಡಿಯಲ್ಲಿ ಆಸೀನಳಾದಾಗ ಸೌದಾಮಿನಿಗೆ ಆಯಾಸವೆನಿಸಿತ್ತು. ಬಾಗಿಲ
ಹೊರಗೆ ಆಪ್ತ ಕಾರ್ಯದರ್ಶಿಯನ್ನು ಕಂಡಂತಾಗಿ ಅವನನ್ನು ಕರೆದಳು :
“ಪರಶುರಾಮ್ ಇಲ್ಲಿಗ್ಬನ್ನಿ.”
ಅವನು ಓಡಿಬಂದ.
“ಮಾತಾಜಿ. (ಅವನ ಕಂಠ ಗದ್ಗದವಾಯಿತು.) ತಾವು ನನ್ನನ್ನು ಹೋಗೊ.
ಬಾರೊ ಅಂತ ಕರೀಬೇಕು.”
“ಅದು ಹ್ಯಾಗಾಗುತ್ತೆ ? ನೀವು ಸರಕಾರಿ ಎನ್. ಜಿ. ಒ....ನಾಳೆ ಗಜೆಟೆಡೂ...
ಆಗ್ತಿರಿ....”
ಆತ ಅತ್ತೇಬಿಟ್ಟ. ಉಮ್ಮಳ ಕಡಮೆಯಾದಮೇಲೆ ಅವನೆಂದ :
“ಅದು ಹ್ಯಾಗೂ ಇರ್ಲಿ. ನನ್ನ ಪಾಲಿಗೆ ತಾವು ಮಾತಾಜಿ ; ನಾನು ತಮ್ಮ
ಚಾಕರ. ದಯವಿಟ್ಟು ನನ್ನ ಕೋರಿಕೆ ಈಡೇರಿಸಿ ಕೊಡಿ.”
ಆತ ಮಾತಾಜಿಯ ಪಾದಗಳನ್ನು ಹಿಡಿದುಕೊಂಡ, “ಸಾಕು, ನಿನ್ನಿಷ್ಟ, ಎಲ್ಲರೂ ಹೋದರಾ ?”
“ಪೋಲೀಸ್ ಅಧಿಕಾರಿಗಳು ಬಾಕಿ.”
“ಅವರನ್ನು ಕರಿ.”
ಬೂಟುಗಳ ಸಪ್ಪಳ ಹತ್ತಿರವಾದೊಡನೆ ಸೌದಾಮಿನಿ ನೇರವಾಗಿ ಕುಳಿತಳು.
“ತುಂಬ ಕಷ್ಟ ಪಟ್ಟಿರಿ. ಮೈ ಮೋಸ್ಟ್ ಸಿನ್ಸಿಯರ್ ಥ್ಯಾಂಕ್ಸ್, ಇವತ್ತಿ
ನದು ಸ್ಮರಣೀಯ ಸಂಜೆ. ಗುಡ್‌ನೈಟ್.”
ಅಧಿಕಾರಿಗಳು ಸೆಲ್ಯೂಟ್ ಕೊಡುತ್ತ “ಗುಡ್‌ನೈಟ್” ಅಂದರು.
ಮುಖ್ಯಮಂತ್ರಿ ಮೆಲ್ಲನೆದ್ದು ಬಲ ಬದಿಯ ಮಗ್ಗುಲು ಕೊಠಡಿಯತ್ತ ಸಾಗಿ
ದಳು, ಅವಳ ಸಾಮಾನುಗಳಲ್ಲಿ ಬಹಳ ಮುಖ್ಯವಾದುದನ್ನು ಅಲ್ಲಿ ಒಪ್ಪವಾಗಿ
ಜೋಡಿಸಿದ್ದರು. ಸುಸ್ತಿಗೆ ಕಾರಣ ಆಗಲೆ ಅವಳಿಗೆ ಹೊಳೆದಿತ್ತು. ಜಗದಲಪುರ
ಬಿಟ್ಟ ಬಳಿಕ ಅಂದೇ ಮೊದಲ ಬಾರಿ ಲೇಹ್ಯ ತಿನ್ನಲು ಆಕೆ ಮರೆತಿದ್ದಳು. ಗೃಹ