ಈ ಪುಟವನ್ನು ಪರಿಶೀಲಿಸಲಾಗಿದೆ

84

ಮಿಂಚು

ಕಾರ್ಯಾಲಯದ ಉದ್ಘಾಟನೆಯ ಮೊದಲ ದಿವಸವೆ ಹೀಗಾಯಿತಲ್ಲ ? ಆದರೂ
ಸಮಾಧಾನ ನಡುವಿರುಳು ದಾಟಿದ ಮೇಲಲ್ಲವ ನಾಳೆ ? ತಕ್ಷಣವ ಸೇವಿಸಿದ
ರಾಯಿತು.
ಸೇವನೆ ಆದ ಮೇಲೆ ಮನಸ್ಸಿಗೆ ನೆಮ್ಮದಿ ಮರಳಿತು....
“ಪರಶು....”
ಹೊರಗಿನಿಂದ ಸ್ವರ :
“ಮಾತಾಜಿ....”
“ಆ ಪೋಲೀಸರ ಊಟ ಆಗಿಲ್ಲವೇನೊ. ಸ್ವಲ್ಪ ನೋಡು. ಬೆಳಗ್ಗೆ ಆರು
ಘಂಟೆಗೆ ನನ್ನನ್ನು ಎಬ್ಬಿಸು.”
ಬಾಗಿಲಿಗೆ ಅಗಣಿ ತಗಲಿಸಿ, ಬಲ ಮಗ್ಗುಲಲ್ಲಿದ್ದ ಶಯ್ಯಾಗೃಹವನ್ನು ಸೌದಾ
ಮಿನಿ ಸೇರಿದಳು. ಮಲಗುವ ಮನೆಗೆ ಅಂಟಿಕೊಂಡಿತ್ತು ಸ್ನಾನದ ಕೊಠಡಿ.
...ಮೃದು ಹಾಸಿಗೆಯಲ್ಲಿ ಮೈ ಚಾಚಿದಾಗ ಸೌದಾಮಿನಿಗೆ ಒಂಟಿತನದ ಅನುಭವ
ವಾಯಿತು, ಆ ರಂಗಧಾಮ ಜಂಭದ ಕೋಳಿ (ಹುಂಜ), ಆ ಕಪ್ಪು ಕ್ರಾಪೇ
ಕೆಂಪು ಜುಟ್ಟು, ಪ್ಯಾಕೆಟ್‌ನಿಂದ ಟಪಟಪ ಬಡಿಯಬೇಕು. ಅಂತೂ ಆಡಿಯೇ
ಬಿಟ್ಟೆನಲ್ಲ ! ನಾಯಕ ರಂಗಸ್ವಾಮಿ ಸುಲೋಚನಾಬಾಯಿ ಕಮಲಮ್ಮ....ಅವರನ್ನೆಲ್ಲ
ಕರೆಯಬೇಕಾಗಿತ್ತು...ಬಾಬಾಜಿಗೆ ಕಾಣಿಕೆ ಕಳಿಸಬೇಕು. ಲೇಹ್ಯ ತರಿಸಬೇಕು. ವಿಶ್ವಾಸಕ್ಕೆ
ಅರ್ಹರಾದ ಇನ್ನೂ ಒಬ್ಬಿಬ್ಬರು ದೂತರು ಬೇಕಲ್ಲ...
(ಮಂಪರು)
ಬಾಬಾ....
(ನಿದ್ದೆ.)