ಈ ಪುಟವನ್ನು ಪ್ರಕಟಿಸಲಾಗಿದೆ

98

ಮುಡಿ

ನರ್ತನ, ವೇಷ ಸ್ವರೂಪ, ಗಾನ, ರಂಗ ತಂತ್ರಗಳನ್ನು, ರೂಢಿಗಳನ್ನು (conventions) ಪ್ರತ್ಯೇಕವಾಗಿ ನೋಡಿ ತಿಳಿದಾಗ, ಆ ಆ ಕಲೆಯನ್ನು ಅದರ ವಿಭಾಗಗಳನ್ನು ಪ್ರತ್ಯೇಕವಾಗಿ ಕಂಡಾಗ, ಆ ಕಲೆಯನ್ನು ಸವಿದು ಅನುಭವಿಸಲು ಅನುಕೂಲ. ಒಂದು ನರ್ತನವೊ, ಹಾಡುವಿಕೆಯ ವಿಧಾನವೊ ಆ ಕಲೆಯ ಪ್ರದರ್ಶನದಲ್ಲಿ ಏನು ಕೆಲಸ ಮಾಡುತ್ತದೆ ಎಂಬುದನ್ನು ಗ್ರಹಿಸಿದಾಗ ಒಟ್ಟು ಆ ರಂಗವನ್ನು ಅರಿಯಲು ಪೂರಕ. ಕಲೆಯ ಶೈಲಿ ಮತ್ತು ಘಟಕಗಳ ಅರಿವಿಲ್ಲದೆ ಕಲೆಯನ್ನು ಅರಿಯಲು ಸಾಧ್ಯವಲ್ಲ. ಪ್ರಾತ್ಯಕ್ಷಿಕೆಯೆಂಬುದು ಕಲೆಯ ಪ್ರಸರಣ. ನೋಡುಗರಿಗೆ ಅದು ಪ್ರಶಿಕ್ಷಣ, ಓರಿಯಂಟೇಶನ್. ಇದು ದೃಷ್ಟಿ ಅಭಿರುಚಿಗಳ ನಿರ್ಮಾಣ, ಸ್ಥಿರೀಕರಣದ ಕೆಲಸ, ಅಭಿವ್ಯಕ್ತಿ ವಿಧಾನದ ತಿಳಿವಿನ ತಿಳಿವು ನೀಡಿಕೆ ಅದು. ಇದರಿಂದ ಕಲಾವಿದರಿಗೂ ತಮ್ಮ ಕಲೆಯನ್ನು ಅಭಿವ್ಯಕ್ತಿಸುವ, ವಿತರಿಸುವ ವಿಧಾನದ ಕುರಿತು ಎಚ್ಚರ ಮೂಡುತ್ತದೆ, ಅಂತೆಯೆ ಶೈಲಿಯ ಸ್ಥಿರೀಕರಣವಾಗುತ್ತದೆ.
ಒಡ್ಡೋಲಗಗಳು ಯಕ್ಷಗಾನದ ಒಂದು ಸುಂದರವಾದ ಅಂಶ. ಯಕ್ಷಗಾನ ನೃತ್ಯದ ವೈಭವದ, ಅಂದದ ಪ್ರತೀಕ, ತೆಂಕುತಿಟ್ಟಿನ ಕಿರೀಟ ವೇಷದ ಪ್ರವೇಶವಂತೂ ರಾಜಗಾಂಭೀರ್ಯದ ಒಂದು ಅಸಾಧಾರಣವಾದ ಅಭಿವ್ಯಕ್ತಿ. (ಇದರ ಒಂದು ಸುಂದರವಾದ ಮಾದರಿ ಎಂದರೆ ಶ್ರೀ ಗೋವಿಂದ ಭಟ್ಟರ ಪ್ರವೇಶ ನೃತ್ಯ ಕುಣಿತ) ವೇಷದ ಪ್ರವೇಶವನ್ನು ತೋರಿಸುವ ರೀತಿಗಳು, ಒಡ್ಡೋಲಗಗಳು. ಇವುಗಳಲ್ಲಿ ಪಾತ್ರಾನುಗುಣವಾಗಿ ವೈವಿಧ್ಯವಿದೆ. ಬಣ್ಣದ (ರಾಕ್ಷಸ) ವೇಷದ ಒಡ್ಡೋಲಗ, ಕಿರೀಟ ವೇಷದ ಒಡ್ಡೋಲಗ, ಹೆಣ್ಣು ಬಣ್ಣದ ವೇಷದ ಪ್ರವೇಶ, ಪುಂಡು ವೇಷದ ಒಡ್ಡೋಲಗ - ಹೀಗೆ. ಅಂತೆಯೆ ಒಂದೊಂದರಲ್ಲಿ ವಿವಿಧತೆಯಿದೆ, ನಿಯಮಗಳಿವೆ, ಶ್ರೀಕೃಷ್ಣ, ಶ್ರೀರಾಮ, ಪಾಂಡವರು, ದೇವೇಂದ್ರ, ಮೊದಲಾದ ವೇಷಗಳಿಗೆ ವಿಶಿಷ್ಟವಾದ ಒಡ್ಡೋಲಗಗಳಿವೆ. ಒಡ್ಡೋಲಗಳಲ್ಲಿ ತೆಂಕು, ಬಡಗು ಮತ್ತು ಉತ್ತರಕನ್ನಡ ತಿಟ್ಟುಗಳಿಗೆ ಹೊಂದಿ ವ್ಯತ್ಯಾಸಗಳಿವೆ. ಇವುಗಳನ್ನು ಒಂದೇ ವೇದಿಕೆಯಲ್ಲಿ ತಂದು, ಕಲಾರೂಪದ ಕುರಿತು ಅರಿವು ಹೆಚ್ಚಿಸುವ ಈ ಕೆಲಸವು ಸ್ತುತ್ಯವಾದುದು. ಒಂದೊಂದು ಅಂದ, ತಿಟ್ಟುಗಳ ಕುರಿತ ಕಲ್ಪನೆಗಳಿಗೆ ಇದು ಪೋಷಕ.
ಈ ಶಿಬಿರದ ನಿರ್ದೇಶಕರೂ, ಉಭಯ ತಿಟ್ಟುಗಳನ್ನು ಬಲ್ಲ ನಟರೂ ಆದ ಪ್ರೊ. ಎಂ. ಎಲ್. ಸಾಮಗರು ಒಂದೆಡೆ ಹೇಳಿರುವ ಹಾಗೆ, ಯಕ್ಷಗಾನವು ಶಾಸ್ತ್ರೀಯ ಚೌಕಟ್ಟು ಮತ್ತು ಜಾನಪದದ ಮುಕ್ತತೆ (Classical Frame and Folk Freedom) ಎರಡನ್ನೂ

ಡಾ. ಎಂ. ಪ್ರಭಾಕರ ಜೋಶಿ