ಈ ಪುಟವನ್ನು ಪ್ರಕಟಿಸಲಾಗಿದೆ










ಕಾಲಮಿತಿ ಮತ್ತು
ಪರಂಪರೆ

ಇಡಿಯ ರಾತ್ರಿಯ ಯಕ್ಷಗಾನ ಆಟದ ಅಥವಾ ಕೂಟದ ಪ್ರದರ್ಶನದ ಬದಲಾಗಿ, ಮೂರು ನಾಲ್ಕು ಗಂಟೆಗಳ ಅವಧಿಯು ಯಕ್ಷಗಾನ ಪ್ರದರ್ಶನದ ಕುರಿತು, ಈಗ ಒಲವು ಹೆಚ್ಚುತ್ತಿದೆ. "ಇದು ಪರಂಪರೆಗೆ ವಿರುದ್ಧ, ಇದರಿಂದ ಕಲಾರೂಪಕ್ಕೆ ಅಂಗ ಊನವಾಗುತ್ತದೆ" ಎಂಬಂತಹ ಅಭಿಪ್ರಾಯಗಳು ಬಂದಿವೆ. ಆದರೆ ಸಾವಧಾನವಾಗಿ ಯೋಚಿಸಿದರೆ, ಇಂತಹ ಭಯಕ್ಕೆ ಕಾರಣವಿಲ್ಲ.
ಯಕ್ಷಗಾನ ಪರಂಪರೆ - ಅರ್ಥಾತ್ ಪಾರಂಪರಿಕ ಕಲಾ ಸೌಂದರ್ಯ , ಶೈಲಿ ಬದ್ಧತೆ, ಯಕ್ಷಗಾನದ ಯಕ್ಷಗಾನೀಯತೆಗಳೂ ಕೇವಲ ಇಡಿ ರಾತ್ರಿಯ ಪ್ರದರ್ಶನವನ್ನು, ಅಂದರೆ ಕಾಲಾವಧಿಯನ್ನು ಹೊಂದಿಕೊಂಡಿಲ್ಲ. ಮಿತಾವಧಿಯ ಆಟ, ತಾಳ ಮದ್ದಳೆಗಳ ಪರಂಪರೆಯೂ ಹಳತೆ. ಹಬ್ಬ ಹರಿದಿನ, ವಿಶೇಷ ದಿನಗಳಲ್ಲಿ ದೇವಾಲಯಗಳಲ್ಲೂ, ಮನೆಗಳಲ್ಲೂ ಸಂಜೆ ಅಥವಾ ಅರ್ಧ ರಾತ್ರಿಯವರೆಗೆ ಪ್ರದರ್ಶನಗಳು ನಡೆಯುತ್ತಿದ್ದುದುಂಟು.

ಕಾಲಮಿತಿ ಎಂಬುದು ಕಾಲದ ಕರೆ. ಜನಜೀವನ ಸ್ವರೂಪವನ್ನು ಗಮನಿಸಿದರೆ, ಪ್ರದರ್ಶನದ ಅವಧಿ ಇಡೀ ರಾತ್ರಿಯೇ ಬೇಕು ಎಂಬ ಹಟ ಮಾಡಿದರೆ, ಅದು ದೂರದರ್ಶಿ

• ಡಾ. ಎಂ. ಪ್ರಭಾಕರ ಜೋಶಿ